ಪುಟ:ರಘುಕುಲ ಚರಿತಂ ಭಾಗ ೧.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಶ್ರೀ ಶಾ ರ ದಾ . ಅಣಿಯಾದನು, ಜಿತೇಂದಿಯನಾದ ವಶಿಷ್ಯ ಮುನಿಯು ಆ ದಂಪ ತಿಗಳಿಗೆ, ಹೊರಡುವಾಗ- ಮಂಗಳಾಶಾಸನವನ್ನು ಮಾಡಿ, ಸುಖ ಪ್ರಯಾ ಇವನ್ನು ಮಾಡಿಸಿದನು. ತದನಂತರದಲ್ಲಿ ಮಂಗಳಕಾರದ ಮಹಾಮಹಿಮೆಯ ದಿಲೀಪ ಮಹಾರಾಜನು - ಧರಪತ್ನಿಯೊಡನೆ ಹವಿಸ್ಸಿನಿಂದ ಬೆಳಗುತಲಿರುವ ಅಗ್ನಿಯನ್ನೂ, ಕುಲಗುರುವನ್ನೂ, ಗುರುಪತ್ನಿಯನ್ನೂ, ಕರುವಿನೊಡನೆ ಸಹಿತವಾದ ನಂದಿಯನ್ನೂ, ಕ್ರಮವಾಗಿ ಬಲವಂದು, ಪ್ರಯಾಣಾಭಿಮು ಖನಾಗಿ ರಥವನ್ನೇರಿದನು. ತಡೆಯಿಲ್ಲದೆ ಕೈಗೂಡಿದ ಕೋರಿಕೆಯಂತೆ, ಹಳ್ಳದಿಣ್ಣೆಗಳಿಲ್ಲದೆ ಸಮನಾದ ಹಾದಿಯಲ್ಲಿ, ಕಿವಿಗಿಂಪಾಗಿ ದನಿಗೆಯ್ಯುತ ನಡೆಯುವ ತೇರು ಹಾಯಾಗಿದ್ದಿತು, ಇಂತು ಸಪತ್ನಿಕನಾಗಿ ತಾಳ್ಮೆ ಯಿಂದ ಹೊರಟು, ದಾರಿಯನ್ನು ದಾಟಿ, ತನ್ನ ಪುರದಬಳಗೈತಂದನು. ಪ್ರಜೆಗಳಿಗೆ ಧರ್ಮದರ್ಶಕನಾಗಿ, ಪ್ರೀತಿಯಿಂದ ಅವರನ್ನು ಪಾಲಿಸುತ್ತಾ, ಅವರ ಪೂರ್ಣಾನುರಾಗಕ್ಕೆ ಪಾತ್ರನೆನಿಸಿ, ಸರ್ವಸಮ್ಮತನಾಗಿದ್ದು ದರಿಂ ದಲೇ ಆತನ ಅಗಲಿಕೆಯನ್ನು ತಾಳಲಾರದೆ ತಹತಹಪಡುತಲಿದ್ದ ಪ್ರಜೆಗ ಇಲ್ಲರೂ, ಪ್ರಜಾಕಾಮನಾಗಿ, ವ್ರತವನ್ನಾಚರಿಸಿ,ಬಹು ಕೃಶನಾಗಿದ್ದರೂ ವರಲಾಭದಿಂದ ಪೊಸತೆನಿಸಿದ ಕಳೆಯನ್ನು ಹೊಂದಿರುವ ಪ್ರಜಾನಾ ಥನನ್ನು, ಹೊಸದಾಗಿ ಉದಿಸದ ಚಂದಿರನನ್ನು ಹೇಗೋಹಾಗೆ ಎಷ್ಟು ಸಾರಿ ನೋಡಿದರೂ ತಣಿಯಲೇ ಇಲ್ಲ. ವಿಬುಧೇಶನ ವೈಭವವುಳ ವಸುಮತೀಶನು ಬಂದನೆಂಬ ಸುದ್ದಿ ಯು ಪುರದೊಳೆಲ್ಲ ಹರಡಿತು, ಪುರಜನರು ತೋರಣ ಧ್ವಜಸ್ತಂಭಾದಿಗಳಿಂದ ಪ್ರೀತಿಪೂರ್ವಕವಾಗಿ ಪಟ್ಟಣವನ್ನು ಅಲಂಕರಿಸಿ, ಮಹಾರಾಜನನ್ನು ಇದಿರೊ೦ಡು, ತಂತಮ್ಮ ಸಂತೋಷವನ್ನು ತೋರ್ಪಡಿಸುತ್ತ ಅಭಿನಂ ದಿಸಿದರು. ದೊರೆಯು- ಅವರ ಆನಂದವನ್ನು ಆದರಪೂರ್ವಕವಾಗಿ ಪರಿ ಗಹಿಸುತ್ತಾ, ಪುರಪ್ರವೇಶವಂಗೆ ದು, ಆದಿಶೇಷನಿಗೆಣೆಯೆನಿಸಿದ ತನ್ನ ಬಾಹುವಿನಲ್ಲಿ ಎಂದಿನಂತೆ ರಾಜ್ಯಭಾರವನ್ನು ವಹಿಸಿದನು. ಇಂತು ಧತ್ನದಿಂದ ಕೆಲಕಾಲ ರಾಜ್ಯವನಾಳುತ್ತಿರಲು, ಮಹಾ ತ್ಯರ ಅನುಗ್ರಹವು ವಿಫಲವಾಗುವುದುಂಟೆ ? ಅತ್ರಿಮುನಿಯು ನೇತ್ರದಿಂದ ಜನಿಸಿದ ಜಲವನ್ನು ದಿಗಂಗನೆಯರು ಧರಿಸಿದ್ದು, ಅವರಿಂದ ಆವಿರ್ಭವಿಸಿ,