ಪುಟ:ರಘುಕುಲ ಚರಿತಂ ಭಾಗ ೧.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕಾ ರ ದಾ: fe ಚಾಮರಗಳನ್ನು ಮಾತ್ರವೇ ಕೊಡಲಿಕ್ಕಾಗಲಿಲ್ಲ. ಆಮೇಲೆ ಭೂಪಾಲನುಬಲುಬೇಗನೆ ಸೂತಿಕಾ ಗೃಹದಬಳಿಗೆ ಬಂದನು, ಗಾಳಿಯಿಲ್ಲದೆಡೆಯೊ ೪ಟ್ಟಿರುವ ದೀವಿಗೆಯಂತಲುಗದಿರುವ ದಿಟ್ಟಿಯಿಂದ ಮನೋಹರವಾದ ಮಗನ ಮೆಯನ್ನು ನೋಡಿದನು. ಹುಣ್ಣಿಮೆಯ ಚಂದಿರನನ್ನು ನೋಡಿ ದೊಡನೆ ಕಡಲಿನ ಪಾತ್ರೆಯೊಳಗಣ ಜಲರಾಶಿಯಂತ, ಹೇರಳವಾದ ಹರ್ಷವು – ಅಂತರಂಗದಲ್ಲಡಗದೆ ಉಕ್ಕುಳಿಸುತಲಿದಿತು. ಈ ಶುಭ ಸಮಾಚಾರವು ಕುಲಗುರುವಿಗೆ ತಿಳಿಯಿತು, ತಸಸಿಯು ತಪೋವನ ದಿಂದ ತಡಮಾಡದೆ ಬಂದನು, ಜಾತಕರವೇ ಮೊದಲಾದ ಸಂಸ್ಕಾರ ಗಳನ್ನು ಸಂತಸದಿಂದ ನೆರವೇರಿಸಿದನು. ಆಗ - ದಿಲೀಪಕುಮಾರನು ಗಣಿಯಿಂದೆತ್ತಿ, ಒರೆಯ ಬೇಸಾಯವನ್ನು ಪಡೆದ ರತುನದಹಾಗೆ ಮಿಗಿಲು ಬೆಳಗುತಲಿದ್ದನು. ಮಂಗಳವಾದ್ಧನಾದಗಳು ಕಿವಿಗಿಂಪಾಗಿ ಮೊಳ ಗುತಲಿದ್ದುವು, ಬೆಲೆವೆಣ್ಣಳ ಸಂತಸದ ಕುಣಿತಗಳೂ ಕಂಗೊಳಿಸಿದುವು, ಈ ಉತ್ಸವವು ದಿಲೀಪನ ಮನೆಯಲ್ಲಿ ಮಾತ್ರವಲ್ಲ ; ಅಮರರ ಹಾದಿ ಯಲ್ಲಿಯೂ ನಡೆಯುತಲಿದ್ದಿ ತು, ಇಂತಹ ಮಹೋತ್ಸವಗಳ ಸಮಯ ದೊಳಗೆ ಅರಸರು- ಸೆರೆಯಲ್ಲಿರುವವರನ್ನು ಬಿಡಿಸುವುದು ವಾಡಿಕೆ, ಧರ ದಿಂದ ರಾಜ್ಯವನ್ನಾಳುವ ದಿಲೀಪನ ಬಂದೀಗೃಹದಲ್ಲಿ, ಹಾಗೆ ಅಪರಾ ಧದಿಂದ ಬದ್ಧರಾದವರೇ ಇರಲಿಲ್ಲ. ಸಂತಾನದ ಸಂತಸದಿಂದಾರನು, ಬಿಡಿಸುವುದು ? ಆದಕಾರಣ ಪಿತೃಋಣದಿಂದ ಬದ್ಧನಾಗಿದ್ದ ತಾನೇ ಬಿಡು ಗಡೆಯನ್ನು ಹೊಂದಿದನು. ಆ ಬಳಿಕ ಅರ್ಥಜ್ಞನಾದ ಪಾರ್ಥಿವನು -ಶಾಸ್ತ್ರ ಗಳ ಕೊನೆಯನ್ನೂ, ಕಾಳಗದಲ್ಲಿ ಹಗೆಗಳ ಕೊನೆಯನ್ನೂ, ಈ ಆತ್ಮ ಜನು ಕಾಣುವನು (ಗಮ ನಿಸುವನು) ಎಂದು ತಿಳದೇ, ಗಮವಾರ್ಥದ ಧಾತುವಿನಿಂದ ಸಿದ್ದ ವಾದ ರಘು ಎಂಬ ಹೆಸರಿನಿಂದ ಕುಮಾರನಿಗೆ ನಾಮಕರಂದ ಹಬ್ಬವನ್ನು ನೆರ ವೇರಿಸಿದನು, ರಘುವು-ಪೂರ್ಣ ಸಂಪನ್ನನಾದ ತಂದೆಯ ಪ್ರಯತ್ನ ವಿಶೇ ಪ್ರದಮಾಲಕ ಹೊಮ್ಮುತಲಿರುವ ಅಂದವಾದ ಅವಯವಗಳಿಂದ ಬೆಳಗಿ ದನು. ರವಿಯ ಕಿರಣಗಳು ಒಳಹೊಗುವುದರಿಂದ ಬಾಲಚಂದ್ರನಂತೆ ದಿನದಿನಕ್ಕೂ ಬೆಳವಳಿಗೆಯನ್ನು ಹೊಂದುತಲಿದ್ದನು. ಕುಮಾರಸ್ವಾಮಿ ಯಿಂದ ಉಮಾಮಹೇಶ್ವರರಹಾಗೂ, ಜಯಂತನಿಂದ ಶಚೀಪುರಂದರ