ಪುಟ:ರಘುಕುಲ ಚರಿತಂ ಭಾಗ ೧.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ મ - * ** »t / bha ದಿ | ರಂತೆಯೂ, ಸುದಕ್ಷಿಣಾ ದಿಲೀಪರು - ಆ ಕುಮಾರರಿಗೆಣೆಯಾದ ಕುಮಾ ರನಿಂದ ತಾವೂ, ಆ ದಂಪತಿಗಳಿಗೆಣೆಯೆನಿಸಿ ಆನಂದಿಸುತಲಿದ್ದರು. ಆ ಗಂಡಹೆಂಡಿರುಗಳೊಳಗೆ ಜಕ್ಕವಕ್ಕಿಗಳಂತೆ - ಒಬ್ಬರಮೇಲೊಬ್ಬರಿಗಿದ್ದ ಪ್ರೇಮವು-ಆ ಹಸುಳೆಯಿಂದ ಹಂಚಿಕೆಯನ್ನು ಪಡೆದರೂ, ಈಕೆಯಿಂದ ನನಗೆ ಇಂತಹ ಸಂತಾನವಾಯಿತೆಂದು ಆತನಿಗೂ, ಈತನಿಂದ ತನಗೆ ಇಂತಹ ಸುಕುಮಾರನು ಸಂಭವಿಸಿದನೆಂದು ಆಕೆಗೂ ಅನ್ನೋನ್ಯತೆಯಿಂದ ಹೆಚ್ಚುತಲೇ ಇದ್ದಿತು. ಆಮೇಲೆ ಆ ಕಂದನು - ದಾದಿಯ ಕಯೂಡು ಮಾಡಿಕೊಂಡು, ತಪ್ಪು ಹೆಜ್ಜೆಯನ್ನಿಡುತ್ತಾ, ನಡೆಯಲಿಕ್ಕೆ ಮೊದಲಿ ಟ್ಟನು. ಆಕೆಯು ಮೊಟ್ಟಮೊದಲು ಹೇಳಿಕೊಡುವ ಮಾತುಗಳನ್ನು ತೊದಲಿತೊದಲಿ ಮುದ್ದು ಮುದ್ದಾಗಿ ಆಡತೊಡಗಿದನು. ಪೊಡಮಡುವ ಕಲಿಕೆಯಿಂದ ನಮ್ಮ ನೂ ಆಗುತಲಿದ್ದನು, ಇದರಿಂದ – ಹೆತ್ತವರಿಗೆ ಹೆಕ್ಕಳವನ್ನು ಹೆಚ್ಚಿಸಿದನು. ಅಗಸು - ಮೈಸೋಂಕಿನಿಂದುಂಟಾದ ಸುಖಗಳಿಂದ ತನ್ನ ಶರೀರದಲ್ಲಿ ಅನ್ನ ತವನ್ನು ಹೊಗಿಸುವಂತಿರುವ ತನೂಭವನನ್ನು ತಬ್ಬಿ, ತೊಡೆಯಮೇಲೆ ಕೂಡಿಸಿಕೊಂಡು, ಅರೆವು ಗಿದ ಕಣ್ಣುಳ್ಳವನಾಗಿ, ಬಹುಕಾಲದಮೇಲೆ ಮಕ್ಕಳನ್ನೆತ್ತಿಕೊಂಬುದ ರಿಂದುಂಟಾಗುವ ರುಚಿಯು ಇಂಥದು ಎಂಬುದನ್ನು ಅರಿತನು, ಮತ್ತುಚತುರು ಖನು - ಸತ್ತ್ವ, ರಜ, ತನಗಳೆಂಬ ಗುಣಗಳೊಳಗೆ ಮೊದಲನೆ ಯದಕ್ಕೆ ಆಸರೆಯಾಗಿ, ತನ್ನ ಬೇರೊಂದು ರೂಪವಾಗಿರುವ ವಿಮ್ಮು ವಿನಿಂದ, ತನ್ನ ಸೃಷ್ಟಿಯು ತೊಂದರೆಯಿಲ್ಲದಿರುವುದೆಂದರಿಯುವಹಾಗೆ, ಲೋಕಮರ್ಯಾದೆಯನ್ನು ಬಲ್ಲ ಅರಸು - ವಿದ್ಯಾವಿನಯಾದಿ ಸತ್ತ್ವ ಗುಣಗಳಿಗೆಡೆಯಾಗಿ, ತನ್ನ ರೂಪಾಂತರವಾಗಿರುವ ಉತ್ತಮನಾದ ಕುಮಾರನಿಂದ, ತನ್ನ ಸಂತತಿಯೂ ಸುಖವಾಗಿ ನೆಲೆಗೊಂಡಿರುವುದೆಂದು ತಿಳಿದುಕೊಂಡನು. ರಘುವಿಗೆ ಜುಟ್ಟು ಬಿಡಿಸುವ ಹಬ್ಬವಾಯಿತು. ತನ್ನಂತೆ ಜುಳುಪ ಕೂದಲಿನವರೂ, ಓರಗೆಯ ವಯಸ್ಸಿನವರೂ ಆಗಿರುವ ಮಂತ್ರಿ ಕುಮಾ ರರೊಡನೆ ಓದು ಕಲಿಯತೊಡಗಿ, ಮೊಸಳೆ ಮೊದಲಾದ ಪ್ರಾಣಿಯು - ಹೊಳಯಮೂಲಕ ಕಡಲನ್ನು ಹೋಗುವಂತೆ, ವರ್ಣಮಾಲೆ ಯ ಅರಿವಿನ ಮೂಲಕ-ಶಬ್ದ ಜಾಲವನ್ನು ಪ್ರವೇಶಿಸದನು ಅದುವರೆಗೆ ಹನ್ನೊದನೆಯ