ಪುಟ:ರಘುಕುಲ ಚರಿತಂ ಭಾಗ ೧.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈv ಶ್ರೀ ಶಾ ರ ದ . MMwww ಆಗುಹೋಗುಗಳನ್ನು ಮೊದಲೇ ಕಾಣುವವರಾರು? ಅಷ್ಟು ಹೊತ್ತಿಗೆ ಸರಿ ಯಾಗಿ ಎಲ್ಲಿಂದಲೋ, ಯಾವ ಕಾರಣದಿಂದಲೋ ಮಹಾಮಹಿಮೆಯ ವಶಿಷ್ಯ ಮುನಿಧೇನುವಾದ ನಂದಿನಿಯು - ರಘುವು ತನ್ನ ವರಕುಮಾರ ನೆಂಬ ಮಮತೆಯಿಂದ ಅನುಗ್ರಹಿಸಲಿಕ್ಕೆಂಬಂತೆ ಹೇಗೋ ಬಂದು ಕಾಣಿಸಿಕೊಂಡಿತು, ಸಜ್ಜನರೊಳಗೆ ಮೊದಲನೆಯವನೆನಿಸಿದ ರಘುವುಆ ಧೇನುವಿನ ದರ್ಶನವಾದಕೂಡಲೇ ಭಕುತಿಯಿಂದ ಶಿರಬಾಗಿ, ಅದರ ಪಾವನವಾದ ಗಂಜಲವನ್ನೆತ್ತಿ ಕಣಿ ಗೊತ್ತಿ, ತೊಡೆದುಕೊಂಡನು. ಆ ಕೂಡಲೇ ಕಣ್ಣಿಗೆ ಕಾಣಬರದ ವಸ್ತುವನ್ನೂ ಕಣ್ಣಿನಿಂದ ನೋಡತಕ್ಕ ಶಕ್ತಿಯನ್ನು ಪಡೆದನು. ಜನಪಾಲ ತನಯನು - ಹಾಗೆಯೇ ತಲೆಯ ನೃತಿ ಮೂಡಲುಕಡೆಗೆ ಕಣ್ಣ ತೆರೆದನು, ಇದಿರಿಗೆ ಬಾಂದಳದೊಳಗೆ ತನ್ನ ಕುದುರೆಯನ್ನು ತೇರಿನ ಹಗ್ಗದಿಂದ ಕಟ್ಟಿದೆ, ಅದನ್ನು ಬಿಡಿಸಿಕೊ ಳಲು ಕುದುರೆಯು ಮೆಯ್ಸನ್ನು ಕೊಡಹುತಲಿದೆ, ಸಾರಥಿಯು ಅದರ ಚೇಷ್ಮೆಯನ್ನು ತಡೆಯುತಲಿದಾನೆ, ಈ ದಳೆಯೊಳಿರುವ ತನ್ನ ಅಕ್ಷವನ್ನು ಒಯ್ಯುತ್ತಾ, ಬೆಟ್ಟಗಳ ರೆಕ್ಕೆಗಳನ್ನು ಕತ್ತರಿಸಿದ ಇಂದ್ರನು ರಥದ ಮೇಲೆ ಕುಳಿತಿರುವುದನ್ನು ಕಂಡನು. ರಘುವು - ಕುದುರೆಯ ಕಳ್ಳನನ್ನು ರೆಪ್ಪೆ ಬಡಿಯದ ನೂರು ಕಣ್ಣುಗಳಿಂದಲೂ, ತೆರಿಗೆ ಕಟ್ಟಿರುವ ಹಸಿರು ಬಣ್ಣದ ಕುದುರೆಗಳಿಂದಲೂ, ದೇವೇಂದ್ರನನ್ನಾಗಿ ಅರಿತು, ಮುಗಿಲನ್ನು ಮುಟ್ಟುತಲಿರುವ ನೀಳವಾದ ದನಿಯಿಂದ, ಅವನನ್ನು ತಡೆದು ಹಿಂತಿರು ಗಿಸುವವನಂತೆ ಇಂತೆಂದನು :- ಅಹಹ : ಎಲೈ ದೇವತೆಗಳಿಗೊಡೆಯ ನೇ ! ಯಜ್ಞದ ಹವಿಸ್ಸಿನ ಭಾಗಗಳನ್ನು ಭುಜೆಸುವವರೊಳಗೆ ನೀನೇ ಮೊದಲನೆಯವನೆಂದು ವಿದ್ಯಾವಂತರೆಲ್ಲ ಯಾವಾಗಲೂ ನಿನ್ನನ್ನು ಹೊಗಳುತ್ತಾರೆ, ಇಂತಹ ನೀನೇ ಅನವರತವೂ ಅಧ್ಯರದ ದೀಕ್ಷೆಯೊಳಿರುವ ನಮ್ಮ ತಂದೆಯ ಸತ್ಕರ್ಮವನ್ನು ಹಾಳುಮಾಡಲಿಕ್ಕೆ ಹೀಗೆ ಮುಂದರಿಯುತ್ತಿದೆಯೆ ? ಓಹೋ - ಬಹಳ ಚೆನ್ನಾಯಿತು !! ನೀನು ಮೂಲೋಕವನ್ನಾಳುವ ನಾಯಕನಲ್ಲವೆ ? ಜ್ಞಾನದೃಷ್ಟಿಯಿಂದರಿತು, ಯಾಗಗಳಿಗೆ ಅಡ್ಡಿ ಮಾ ಡುದ ಹಗೆಗಳನ್ನು ನೀನೇ ಅಡಗಿಸಬೇಕಲ್ಲವೆ ? ಹಾಗಿಲ್ಲದೆ - ಯಜ್ಞವೇ ಮುಂತಾದ ಧರ್ಮಕಾರ್ಯಗಳನ್ನು ಮಾಡುವವರಿಗೆ ನೀನೇ