ಪುಟ:ರಘುಕುಲ ಚರಿತಂ ಭಾಗ ೧.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ પિન wwwmyvvvvvvvvvvvvvv • yevvvvvvvvvvvvvy fvvvvv/ ಆ wy ತಾಳಲಾರದಂತಾಯಿತು, ರಘುರಾಜನ ಪ್ರತಾಪವು - ಎಲ್ಲ ಕಡೆಗಳ ಲ್ಲಿಯೂ ವ್ಯಾಪಿಸಿ ತಡೆಯದಹಾಗಾಯಿತು. ಮುಂಗಾರಿನ ಮುಗಿಲಿನಲ್ಲಿ ಮೂಡುವ ತನ್ನ ಬಿಲ್ಲನ್ನು ಇಂದ್ರನು ಎತ್ತಿಕೊಂಡನು, ರಘುವು ಹಗೆಗಳನ್ನು ಅಡಗಿಸಲು ಊಡಾಗಿರುವ ತನ್ನ ಚಾಪವನ್ನು ಕಯ್ಯಲ್ಲಿ ಹಿಡಿ ದನು, ಇಂದ್ರರಘಗಳು - ಜನರಿಗೆ ಬೇಕಾದುದನ್ನೆಲ್ಲ ಅಣಿಮಾಡುವ ವಿಷ ಯದಲ್ಲಿ ಒಬ್ಬರಾದಮೇಲೊಬ್ಬರಂತೆ ಬಿಲ್ಲನ್ನು ಕೈಗೊಳ್ಳುವುದೇ ಕ್ರಮವಾ ಗಿದ್ದಿ ತು, ಬೆಳ್ಳೋಡೆಯ ಚಾಮರವೂ ಅರಸನಿಗೆ ತೊಡವಾಗಿರುವುದಷ್ಟೆ? ಶರದೃತುವು ಬೆಳ್ಳಾವರೆಯಿಂದಲೂ ಕಾಚಿಯ ಹೂವಿನಿಂದಲೂ ನಿಂಗರಿಸಿ ಕೊಂಡು ಅರಸನನ್ನು ಅನುಸರಿಸಿತು, ಸಿರಿಯಲ್ಲಿ ವಿಡಂಬಿಸಲಾಗಲಿಲ್ಲ. ಕಳಕಳನೆ ಹೊಳೆಯುತಲಿರುವ ಚಂದಿರನಂ ಕಂಡು ಸಂತಸಂಗೊಂಬಂತೆ ಆವಗನುಂ ನಗೆಮೊಗದಿಂದಿರುವ ಆ ತಿರೆಯಾಣ್ಮನಂ ಕಾಣುವ ಪ್ರಜೆ ಗಳಿಗೆಲ್ಲ ಪ್ರೀತಿಯು ಹೆಚ್ಚುತಲಿದ್ದಿ ತು, ಅಂಚೆಗಳ ಹಿಂಡುಗಳೊಳಗೂ, ತಾರೆಗಳೊಳಗೂ, ಕುಮುದಗಳನ್ನೊಳಗೊಂಡಿರುವ ಕೊಳಗಳೊಳಗೂ, ಆತನ ಯಶೋರಾಶಿಯು-ಹರಡಿದಂತಿದ್ದಿ ತು, ಕಬ್ಬಿನತೋಟದ ನೆಳಲಿನಲ್ಲಿ ಕುಳಿತು, ಹಕ್ಕಿ ಮೊದಲಾದವುಗಳ ಕಾಟವಿಲ್ಲದಂತೆ ಗದ್ದೆಗಳನ್ನು ಕಾಯು ತಲಿರುವ ಹೆಂಗಸರು - ಚಿಕ್ಕಂದು ಮೊದಲು ಅಂದಿನವರೆಗೂ ನಡೆದ ರಘುಚರಿತ್ರೆಯನ್ನು ಹಾಡುಗಳನ್ನಾಗಿ ಹೇಳಿಕೊಳ್ಳುತ ನಲಿಯುತಲಿರು ವರು. ಹೀಗಿರುವಲ್ಲಿ ತೆಂಕಲ ದೆಸೆಯ ಮುಗಿಲಿನೊಳಗೆ ಅಗಸ್ಟ್. ನಕ್ಷತ್ರವು ಮೂಡಿತ್ತು, ಕೆರೆತೊರೆಗಳ ನೀರೆಲ್ಲ ತಿಳಿಯಾಗುತ ಬಂದಿತು, ರಘುವಿನ ಏಳಿಗೆಯು ಕುಂದಲೆಂದೆಣಿಸುವ ಹಗೆಗಳ ಎದೆಯು ತಲ್ಲಣಿಸಿ ಬಂಡಾಯಿತು, ತೋರವಾದ ಹಿಳಲುಗಳನ್ನೊಳಗೊಂಡಿರುವ ದೊಡ್ಡ ಗೂಳಿಗಳು ಹೋಳಗಳ ದಡಗಳನ್ನು ಗೂಟಾಡುತ, ಕಾಳಗದಲ್ಲಿ ರಘುವು ಹಗೆಗಳನ್ನಿರಿಯುವ ಲೀಲೆಯ ಪರಿಯನ್ನು ತೋರುತಲಿದ್ದುವು. ಋತು ಧರ್ಮದಿಂದ ಏಳೆಲೆಯ ಬಾಳೆಗಳೊಳಗೆ ಹೂಗಳು ಕಾಣಿಸಿದುವು, ಗಾಳಿಯು ಅವುಗಳೊಳಗಣ ಧೂಳಿಯನ್ನು ತಂದು, ಆನೆಗಳಮೇಲೆ ಎರ ಚಿತು, ಆನೆಗಳಿಗೆ ಇದಿರಾನೆಗಳು ಬಂದುವೆಂದು ಹೊಟ್ಟೆಯಕಿಚ್ಚು ಹೆಚ್ಚಿದಂತಾಯಿತು, ಮದವೇರಿತು, ತಮ್ಮ ಮೈಗಳೊಳಗೆ ಏಳವಯ ವಗಳಿಂದ ಮದಜಲಧಾರೆಯನ್ನು ಕರೆದುವು, ಮಳೆಗಾಲವೆಲ್ಲ ಕಳೆಯಿತು, ಒ