ಪುಟ:ರಘುಕುಲ ಚರಿತಂ ಭಾಗ ೧.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ કેટ ++ * * * * * * * * ೧ - • • • •/ My ನಡೆಯುತಲಿದ್ದಿ ತು, ಒಡೆಯನಾಣತಿಯಿಂದ ಮರುಭೂಮಿಗಳೆಲ್ಲ ಜಲಭೂ ಮಿಗಳಾದುವು, ಹಡಗಿನಿಂದ ದಾಟತಕ್ಕಹೊಳೆಗಳೆಲ್ಲ ಕಾಲ್ನಡೆಯಿಂದ ಸುಲ ಭವಾಗಿ ದಾಟಲನೆಯಾದುವು, ಕಾಡುಬೀಡುಗಳೆಲ್ಲ ಅಂದವಾದ ಬೀದಿಗ ೪ಾದುವು, ರಘುವು ದೊಡ್ಡ ದಂಡನ್ನು ಮೂಡಲ ಕಡಲಕಡೆಗೆ ಕರೆದೊ ಯ್ಯುತಲಿದ್ದನು, ಹರನ ಶಿರದಿಂದಿಳಿದ ಬಾಂದೊರೆಯನ್ನು ಕೊಂಡುಹೋ ಗುತಲಿದ್ದ ಭಗೀರಥನಂತೆ ಕಂಗೊಳಿಸಿದನು. ಅಲ್ಲಲ್ಲಿ ಅರಸರಿಗೆ ಬರುತ ಲಿದ್ದ ಆಯವೆಲ್ಲ ಅಡಗಿತು, ಬವರದಲ್ಲಿ ಸೋತುದರಿಂದ ತಾವು ತಪ್ಪಿದಂ ತಾಯ್ತು, ರಾಯನ ದಾರಿಗೆ ಅಡ್ಡಿಯೇ ಇಲ್ಲವಾಯಿತು. ಹೂವು, ಹಣ್ಣುಗಳನ್ನೆಲ್ಲ ಉದುರಿಸಿ, ಕೊನೆಕೊಂಬುಗಳನ್ನೆಲ್ಲ ಮುರಿದು, ಮರಗಿಡ ಬಳ್ಳಿಗಳನ್ನು ಬುಡಸಹಿತ ಕಿತ್ತೆಸೆದು, ಇದಿರಿಲ್ಲದೆ ಬರುವ ಆನೆಯ ಹಾದಿ ಯಂತಾಯ್ತು. ಗೆಲ್ದಾಳಾದ ಇಳೆಯಾಣ್ಮನು - ಇಂತು ಮೂಡಣದೆಸೆಯ ರಸರ ನಾಡುಗಳನ್ನೆಲ್ಲ ವಶಪಡಿಸಿಕೊಂಡು, ಓಲೆಯಮರಗಳ ತೋಪುಗ ಆಂದ ಕಪ್ಪಗೆ ಕಾಣಬರುವ ಕಡಲತಡಿಗೆ ಬಂದು ಸೇರಿದನು, ಅಲ್ಲಿಯೇ ಸುಕ್ಕ ದೇಶ, ತೊರೆಯ ಅಂಗಳದಲ್ಲಿ ಬೆಳೆದಿರುವ ಹುಲ್ಲು - ಹೊಳೆಯು ಹೆಚ್ಚಿ ಹರಿವಾಗ, ತಲೆಯನ್ನು ತಗ್ಗಿ ಸಿದ್ದು ತನ್ನನ್ನು ಕಾಪಾಡಿಕೊಳ್ಳುವಂತೆ, ಅಲ್ಲಿಯ ದೊರೆಗಳೂ-ರಘುವಿಗೆ ಆ ತೃಣದಂತೆ ವಿಧೇಯರಾಗಿ ಪುಣಗ ಳನ್ನು ಉಳಿಸಿಕೊಂಡರು. ಅವನಿಘಲನು-ಅಡಗದಿರುವವರನ್ನೆಲ್ಲಿ ಅಡಗಿ ಸತಕ್ಕವನು, ವಂಗದೇಶದ ದೊರೆಗಳು ಹಡಗಿನ ಬಲವನ್ನು ಕಟ್ಟಿ ಕೊಂಡು ಇದಿರುಬಿದ್ದ ರು. ಅವರ ಬೇರನ್ನು ಶೌವ್ಯದಿಂದ ಸಡಲಿಸಿದನು, ಗೆಲುವು ಕೈಗೂಡಿದುದು, ಗಂಗಾನದಿಯ ನಡುವಣ ದ್ವೀಪಗಳಲ್ಲಿ ಜಯದ ಕುರುಹಿನ ಕಂಬಗಳನ್ನು ನಡಿಸಿದನು, ಒಟ್ಟು ಹುಯ್ತಿ ದ್ದು, ಕಿತ್ತು, ಮರಳ ನಟ್ಟ ಪೈರು - ಹೊರವಾಗಿ ಬೆಳೆದು ಬಾಗಿ, ಹುಲುಸಾದ ಬೆಳೆ ಯನ್ನು ಕೊಡುವುದು ವಾಡಿಕೆ. ರಘುವು - ವಂಗದೇಶೀಯರನ್ನು ಸ್ಥಲ ತಪ್ಪಿಸಿದಂತೆ ಮಾಡಿ, ಮರಳಿ ಅಲ್ಲಿಯೇ ನಿಲ್ಲಿಸಿದನು. ಅವರು ಸಂತಸ ದಿಂದುಬ್ಬಿ, ರಘುವಿನ ಅಡಿದಾವರೆಗಳವರೆಗೂ ತಗ್ಗಿ, ತಕ್ಕ ಕಾಣಿಕೆಗಳ ನ್ನೊಪ್ಪಿಸಿ ಗೌರವಿಸಿದರು. ಅಲ್ಲಿಂದ ಮುಂದೆ - ಕವಿಶಾನದಿಯೊಳಗೆ ಆನೆಗಳನ್ನು ಸೇತುವೆಯಂತೆ ಸಾಲಾಗಿ ನಿಲ್ಲಿಸಿ, ಬಲದೊಡನೆ ಹೊಳೆಯನ್ನು ದಾಟಿದನು, ವಶರಾದ ಉತ್ಕಲರಿಂದ ದಾರಿಯನ್ನರಿತು, ಕಲಿಂಗ ದೇಶಕ್ಕೆ