ಪುಟ:ರಘುಕುಲ ಚರಿತಂ ಭಾಗ ೧.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મક ಶ್ರೀ ಕಾ ರ ದ . ಪೊಡವಿಯೊಡೆಯನ ಪಾದಪದ್ಮಗಳು ಪಲತೆರನಾದ ಬಣ್ಣ ಮಂ ತಾಳು ತಲಿದ್ದು ವು. - ಇಂತು ನಾಲ್ಕನೆಯ ಅಧ್ಯಾಯಂ - » ಶ್ರೀ? ಶ್ರೀ ಶಾರದಾಮ್ಯಾಮೈ ನಮಃ. ಐದನೆಯ ಅಧ್ಯಾಯಂ, w ಸೂಚನೆ || ಗರುಧನವ ಬೇಡಿ ಆತ್ಸಂ | ಗುರುತರವನ ದಾನಗೈದು ರಘುವರ್ಟಿಸಿದಂ ! ಗುರುವರ ದುದಿಸಿದ ನಜನುಂ | ಗುರುಗುಣದಿಂ ಮರದು ಭೂಜ ನಗರಿಗೆ ಸಾರ್ದo | ನರತಂತುವೆಂಬ ಮುಹರ್ಮಿಯೋರ್ವನುಂಟು, ಕೌತ್ಪನೆಂಬ ವಿದ್ಯಾ ರ್ಥಿಯು ಆತನ ಬಳಿಯಲ್ಲಿ ಸಕಲ ವಿದ್ಯೆಗಳನ್ನೂ ಸಾಂಗವಾಗಿ ಕಲಿತನು. ಗುರುದಕ್ಷಿಣೆ ಕೊಡಬೇಕಾಗಿ ಬಂದಿತು. ದಕ್ಷಿಣಾದ್ರವ್ಯವನ್ನು ಸಂಘ ದಿಸಲು ರಘುಭೂಪಾಲನ ಬಳಿಗೆ ಬಂದನು, ಅದುವರೆಗೆ ವಸುಮತೀಶನು ಸರ್ವಜಿತ್ತೆಂಬ ಯಾಗವನ್ನಾಚರಿಸಿ, ಬೊಕ್ಕಸವು ಬರಿದಾಗುವಂತೆ ಸರ ಇವನ್ನೂ ದಕ್ಷಿಣೆಗೆ ವೆಚ್ಚ ಮಾಡಿ ಬರಿಗಯ್ದವನಾಗಿದ್ದನು. ಲೋಕದ ಲೆಲ್ಲ ಹರಡಿಕೊಂಡಿರತಕ್ಕೆ ಒಳ್ಳೆಯ ಹೆಸರುವಾಸಿಯನ್ನು ಪಡೆದಿರುವ ಒಳ್ಳಡೆಯ ಪೊಡವಿಯೊಡೆಯನು- ಅತಿಥಿಗಳನ್ನು ಸತ್ಕರಿಸುವುದರಲ್ಲಿ ಬಹು ಸಮರ್ಥನು, ಶಾಸ್ತ್ರಜ್ಞಾನದಿಂದ ಬೆಳಗುತಲಿರುವ ಕೌತ್ಸಮುನಿ ಕುಮಾ ರನು ಅತಿಥಿಯಾಗಿ ಬಂದಿರುವನೆಂಬ ಸುದ್ದಿಯು ದ್ವಾರಪಾಲಕನಿಂದ ತಿಳಿಯಿತು, ಉಚಿತ ರೀತಿಯಿಂದ ಇದಿರ್ಗೊಳ್ಳಲು ರಾಜಾರ್ಹವಾದ ಚಿನ್ನದ ಪಾತ್ರೆಯೊಂದೂ ಇರಲಿಲ್ಲ. ಮಣ್ಣಿನ ತಟ್ಟೆ ಬಟ್ಟಲುಗಳಲ್ಲಿಯೇ