ಪುಟ:ರಘುಕುಲ ಚರಿತಂ ಭಾಗ ೧.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HL ಶ್ರೀ ಕಾ ರ ದ . . ಅತಿಥಿಗಳ ಸತ್ಕಾರಕ್ಕೆ ತಕ್ಕ ಭಾಗಗಳನ್ನೊಳಗೊಂಡು, ನಿಮ್ಮ ಪ್ರಾಣ ಧಾರಣೆಗೂ ಅನುಕೂಲಗಳನಿಸಿ, ಕಾಡಿನಲ್ಲಿ ಬೆಳೆಯತಕ್ಕವುಗಳಾಗಿರುವ ಯವೆ, ಸಾವೆ ಮೊದಲಾದ ಕಾಳುಕಡಿಗಳನ್ನು ನಾಡುಗಳಿಂದ ಓಡಿಬಂದ ತೊಂಡು ದನಗಳು ತಿಂದುಹೋಗುವುದಿಲ್ಲವ ? ನಿನ್ನನ್ನು ಅಕ್ಕರೆ ಯಿಂದ ಚೆನ್ನಾಗಿ ಶಿಕ್ಷಿಸಿದ ಮಹಾಮುನಿಯು - ಗೃಹಸ್ಥಾಶ್ರಮವನ್ನು ಪಡೆಯುವಂತೆ ನಗೆಮೊಗದಿಂದ ಒಪ್ಪಿ, ನಿನಗೆ ಅಪ್ಪಣೆಯನ್ನಿತ್ತನೆ ? ಉಳಿದ ಆಶ್ರಮದವರಿಗೆಲ್ಲ ಉಚಿತವರಿತು ಉಪಕರಿಸಲು ಎರಡನೆಯ ಆಶ್ರಮವನ್ನು ಸ್ವೀಕರಿಸಲಿಕ್ಕೆ ನಿನಗೆ ಇದು - ಒಳ್ಳೆಯ ಸಮಯವಾಗಿ ದೆಯಲ್ಲವೆ ? ಎಲೈ ಮುನಿಯೆ ! ಪೂಜ್ಞನಾದ ನಿನ್ನ ಆಗಮನ ಮಾತು ದಿಂದ ನನ್ನ ಮನವು ತಣಿಯಲಿಲ್ಲ, ಮುಂದೆ ನಿನ್ನ ಅಪ್ಪಣೆಯನ್ನರಿತು ಅದರಂತೆ ನಡೆಸಲು ತವಕಿಸುತಲಿದೆ. ಗುರುಪ್ರಯೋಜನಕೋಸ್ಕರ ತಪೋವನದಿಂದ ಬಂದೆಯ ? ಅಥವಾ ಸ್ವಾರ್ಥಪರನಾಗಿ ನನ್ನನ್ನು ನೋಡ ಲಿಕ್ಕೆ ಬಂದಿರುವೆಯ ? ಎಂದಿಂತು ಮಹಾರಾಜನು ಮುನಿಗೆ ಸುಖಾಗ ಮನವಂ ಬಯಸಿ ಕುಶಲಪ್ರಶ್ನೆಯಂ ಗೈದನು. ನರತಂತು ಮುನಿಯು ಶಿಷ್ಯನಾದ ಕೌನ್ಸನು - ತನ್ನನ್ನು ಇದಿರೆ. ಳ್ಳಲು ತಂದಿರುವ ಪಾತ್ರೆಗಳಿಂದಲೇ ರಘುವಿನ ಆಸ್ತಿಯೆಲ್ಲ ವೆಚ್ಛವಾಗಿ ಹೊಗಿದೆಯೆಂಬುದನ್ನು ತಿಳಿದುಕೊಂಡನು. ಅವನ ಬಲು ಕೊಡು ಗಯ್ಯ ಮಾತನ್ನೂ ಕೇಳಿದನು. ತನ್ನ ಕೋರಿಕೆಯು ಈಡೇರುವುದೆಂಬ ಆಶೆಯು ಬಲಗುಂದಿತು. ಆದರೂ ಆತನನ್ನು ಕುರಿತು ಮಾತನಾಡತೊ ಡಗಿದನು | ಎಲೈ ಮಹಾರಾಜನೆ ! ನಾವು ಎಲ್ಲ ಭಾಗಗಳಲ್ಲಿಯೂ ನೆಮ್ಮದಿ ಯಾಗಿ ಇದೇವೆ ಎಂದು ತಿಳಿ ನೀನು ಸರ್ವರಿಗೂ ನಾಥನಾಗಿರುವಲ್ಲಿ ಪ್ರಜೆಗಳಿಗೆ ಕೊರತೆಯುಂಟಾಗಲು ಕಾರಣವೇನು ? ಭಾಸ್ಕರನು ಬೆಳ ಗುತಲಿರುವಲ್ಲಿ ಕತ್ತಲು ಕಣ್ಣಿನ ನೋಟಕ್ಕೆ ಅಡ್ಡಿಯಾಗುವುದೆಂತು ? ರೂಜ್ಯರೆನಿಸಿದವರಲ್ಲಿ ಇಂತು ಭಕ್ತಿಯನ್ನು ತೋರುವುದು ನಿನ್ನ ವಂಶ ಕಮದಿಂದ ಬಂದಿರುವ ಒಳ್ಳೆಯ ಪದ್ಧತಿಯಾಗಿದೆ. ಎಲೈ ಪುಣ್ಣಾ ತನೇ ! ಒಳ್ಳೆಯ ಸಂಪ್ರದಾಯದಲ್ಲಿ ನಿನ್ನ ಹಿರಿಯರನ್ನು ಮಾರುತಲಿ `ದೀಯೆ, ಉಚಿತವಾದ ಕಾಲವು ಕಳೆದುಹೋದಬಳಿಕ ಯಾತನೆಗಾಗಿ