ಪುಟ:ರಘುಕುಲ ಚರಿತಂ ಭಾಗ ೧.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ಶ್ರೀ ಶಾ ರ ದಾ . [ಅ wwwm ಎಂದನು ; ಅಲ್ಲಿಗೆ ನಾನು ಸುಮ್ಮನಾಗಲಿಲ್ಲ. ಅಡಿಗಡಿಗೂ ದಕ್ಷಿಣೆಯ ಸ್ವೀಕಾರಕ್ಕೆ ಬಲಾತ್ಕರಿಸಿದೆನು, ಇದರಿಂದ ಗುರುವಿಗೆ ಸಿಟ್ಟು ಹತ್ತಿತು, ಧನದ ವಿಷಯದಲ್ಲಿ ನನ್ನ ಬಡತನವನ್ನು ಗಣಿಸಲಿಲ್ಲ, ತರುವಾಯ - “ ನೀನು ನನ್ನಲ್ಲಿ ಕಲಿತಿರುವುದು ಹದಿನಾಲ್ಕು ವಿದ್ಯೆಗಳು, ಆದಕಾರಣ ವಿದ್ಯೆಗಳ ಲೆಕ್ಕವನ್ನನುಸರಿಸಿ ಹದಿನಾಲ್ಕು ಕೋಟ ದ್ರವ್ಯವನ್ನು ದಕ್ಷಿಣೆ ಯನ್ನಾಗಿ ನನಗೆ ತಂದುಕೊಡು ,, ಎಂದನು. ನಾನಾದರೋ ಇಂತಹ ಕಟ್ಟಿಗೆ ಸಿಲುಕಿದೇನೆ. ಪ್ರಭುಶಬ್ದ ವೊಂದೇ ನಿನಗೆ ಉಳಿದಿದೆ ಎಂಬು ದನ್ನು ಪೂಜಾಪಾತ್ರೆಯಿಂದ ತಿಳಿದುಕೊಂಡೆನು. ಗುರುವಿಗೊಪ್ಪಿಸಬೇ ಕಾದ ವಿದ್ಯಾಮಲ್ಯವಾದರೋ ಹೇರಳವಾದುದು, ಆದಕಾರಣ ಈಗ ನಿನ್ನನ್ನು ನಿರ್ಬಂಧಿಸಿ ತೊಂದರೆಗೊಳಿಸಲು ನಾನು ಇಷ್ಟ್ಯಪಡುವುದಿಲ್ಲ ಎಂದನು. ಅರಸು ಅದ್ವಿತೀನೆನಿಸಿದವನು, ಜಿತೇಂದ್ರಿಯನಾಗಿ ಧರಾ ತನೆಂದು ಹೆಸರುಗೊಂಡಿರುವನು, ಉಡುರಾಜನಂತೆ ಬೆಳಗುತಲಿದಾನೆ. ವೇದವಿದರೊಳಗೆ ಅಗ್ರೇಸರನೆನಿಸಿರುವ ಆ ದ್ವೀಪವರನ ವಚನವನ್ನು ಕೇಳಿ ಮರಳಿ ಇಂತೆಂದನು.- - ಎಲೈ ಮುನಿವರನೇ ! CC ವರತಂತು ಮಹರ್ಷಿಯ ಶಿಷ್ಯನಾದ ಕೌತ್ಸ ಮುನಿಯು-ಸಕಲ ಶಾಸ್ತ್ರಪಾರಂಗತನಾಗಿ, ಗುರುದಕ್ಷಿಣೆಯ ಧನ ವನ್ನು ಬೇಡಲಿಕ್ಕೆ ರಘುವಿನಬಳಿಗೆ ಬಂದಿದ್ದನು, ಆದರೆ ಅಲ್ಲಿ ಕೋರಿ ಕೆಯು ಕೈಗೂಡಲಿಲ್ಲ, ಬರಿಗೈಲಿ ಬೇರೊಬ್ಬ ದಾತನನ್ನು ಅರಸುತ ಹೋದನು,, ಎಂಬೀಹೊಸದಾದ ಲೋಕಾಪವಾದವು ನೆಗಳಿದರೆ, ರಘುವು ಲಘುವಾಗುವುದಿಲ್ಲವೆ ? ಅಥವಾ ರಘುವಂಶವೇ ಲಘುವಂಶವಾಗುವುದಿ ಲ್ಲವೆ ? ನನಗೀ ಅಪಕಿರಿಯುಂಟಾಗಬೇಡ. ಆದಕಾರಣ ಗುರುಧನಾ ಭಿಲಾಪಿಯಾದ ನೀನು-ಪಾವನವಾಗಿ, ಪೂಜ್ಞವೆನಿಸಿರುವ ನನ್ನ ಅಗ್ನಿಹೋ ತ್ರದ ಮನೆಯಲ್ಲಿ ಎರಡು ಮೂರು ದಿನಗಳು ಮಾತ್ರ ನಾಲ್ಕನೆಯ ಅಗ್ನಿ ಯಂತೆ ತಾಳ್ಮೆಯಿಂದಿರು, ಅಪ್ಪರೊಳಗೆ ನಿನ್ನ ಪ್ರಯೋಜನವನು ಸಂಪಾದಿಸಲಿಕ್ಕೆ ಪ್ರಯತ್ನಿಸುವೆನು ಎನಲು, ಆತನ ಅಮೋಘವಾದ ಪ್ರತಿ ಜ್ಞಾವಚನವನ್ನು ಕೇಳಿ ದ್ವೀಜವರನಾದ ಕೌನ್ಸನು - ಸಂತುಷ್ಯನಾಗಿ, ಹಾಗೆಯೇ ಆಗಲೆಂದು ಒಪ್ಪಿಕೊಂಡನು. ಬಳಿಕ ರಘುವೂ ತನ್ನ ಧರೆಯ ಸಾರವನ್ನೆಲ್ಲ ಪರಿಗ್ರಹಿಸಿದೆ ಎಂದರಿತು, ಕುಬೇರನಿಂದ ಧನವನ್ನು