ಪುಟ:ರಘುಕುಲ ಚರಿತಂ ಭಾಗ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬) ರಘುಕುಲಚರಿತಂ ಸಿದ್ದಳಾದ ಮದವಣಗಿತ್ತಿಯು - ವಿವಾಹೋಚಿತವಾದ ಮಂಗಳಾಲಂಕಾ ರಗಳಿಂದ ಶೋಭಿಸುತ್ತಾ, ಮನುಷ್ಯರಿಂದ ತರಳತಕ್ಕ ಪಲ್ಲಕ್ಕಿಯನ್ನೇರಿ, ಗೆಳತಿಯರ ಮಿತವಾದ ಪರಿವಾರದಿಂದ ಬೆಳಗುತ, ಕಲ್ಯಾಣಮಂಟಪದೊ ಳಗೆ - ಇಕ್ಕೆಲಗಳಲ್ಲಿಯೂ ಮುಂಚಗಳಮೇಲೆ ಅಂದವಾಗಿ ಕುಳಿತಿರುವ ಅರಸು ಮಕ್ಕಳ ನಡುವಣ ರಾಜಮಾರ್ಗದಲ್ಲಿ ಹೊರಟು ಬಂದಳು. ಬ್ರಹ್ಮನ ಸುಂದರವಾದ ಸೃಷ್ಟಿಯೊಳಗೆ ಮೊಟ್ಟಮೊದಲನೆಯದೆನಿಸಿ, ನೂರಾರುಮಂದಿ ನರದೇವಕುಮಾರರ ನೋಟಗಳಿಗೆಲ್ಲ ಒಂದೇ ಗುರಿ ಯಾಗಿರುವ ಆ ಕನ್ಸಾಪದಾರ್ಥದಲ್ಲಿ, ಮಹಾರಾಜನಂದನರೆಲ್ಲ ತಂತಮ್ಮ ಮನಗಳಿಂದ ಬಂದಿಳಿದರು. ಪೀಠಗಳಲ್ಲಿ ತಮ್ಮ ಮೈಗಳಿಂದ ಮಾತ್ರವೇ ಇರುತಿದ್ದ ರು. ತರುಗಳ ತ೪ರುಗಳ ಹೊಳವುಗಳಹಾಗೆ, ಕನ್ಯಾರತ್ನವಾದ ಆ ಇಂದುಮತಿಯನ್ನು ಬಯಸುತಲಿ ರುವ ಭೂಪತಿಗಳ ಪ್ರೇಮಗಳಿಗೆ ಮುಂ ಜರಿವ ದೂತಿಯರಂತಿರುವ ಶೃಂಗಾರಚೇಷ್ಮೆಗಳು ಬಗೆಬಗೆಯಾಗಿ ಹರಡ ತೊಡಗಿದುವು ; ಅವುಗಳ ವಿವರವೆಂತೆಂದರೆ - ಅವರೊ ರಕುಮಾರನು - ಅಂದವಾಗಿ ಅರಳಿರುವ ಒಂದು ತಾವರೆಯ ಹೂವನ್ನು ಕಾವಿನಲ್ಲಿ ಹಿಡಿದು, ವಿನೋದಕರವಾಗಿ ಸುತ್ತಾಡಿಸುತಲಿದ್ದನು, ಅದರ ಎಸಳುಗಳು ಮೇಲೆ ಹಾರಾಡುತಲಿರುವ ದುಂಬೆಗೆ ತಾಗುತಲಿದ್ದುವು, ಹೂವಿನೊಳಗಡೆಯ ರಜವು-ಮಂಡಲಾಕಾ ರವಾಗಿ ನಿಲ್ಲುತಲಿದ್ದಿತು. ಇದರಿಂದ ಎಲ್‌ ಕನೈಯೇ ! ನೀನು ನನ್ನ ಕೈಹಿಡಿದರೆ-ನಿನ್ನೊಡನೆ ಹೀಗೆ ವಿನೋದದಿಂದ ವಿಹರಿಸುವೆನು ಎಂಬುದ ಆತನ ಮನೋಗತ. ಕಯ್ಯನಲಾಡಿಸುವ ಅಂಗಚೇಷ್ಮೆಯನ್ನು ತೋರುವುದು ಅಪಲಕ್ಷಣವೆಂದು ಇಂದುಮತಿಯ ಆಶಯ. - ಮತ್ತೊಬ್ಬ ವಿಲಾಸಿಯಾದ ವಿಶ್ವಂಭರಾಧಿಪತಿಯು - ರತ್ನಗಳನ್ನು ಕೆತ್ತಿದ್ದ ಬಾಪುರಿಯನ್ನು ತೊಟ್ಟಿದ್ದನು, ಕೊರಳಿಗೆ ಹಾಕಿಕೊಂಡಿದ್ದು , ಎದೆಯಮೇಲೆ ಜೋಲಾಡುತಲಿದ್ದ ಹೂವಿನಹಾರವು, ಅಥವಾ (ವಲ್ಲಿಯು) ಹೆಗಲಿನಿಂದ ಕೆಳಗೆಸರಿದು, ಭುಜಕಿರಿಯ ತುದಿಗೆ ತಗಲಿಕೊಂಡಿದ್ದಿ ತು, ಅದನ್ನು ಕಯೀಂದೆ ಮೋರೆಯನ್ನು ಓರೆಗೆ ತಿರುಗಿಸಿ, ಮೊದಲಿದ್ದಂತೆ ಸವರಿಸಿಕೊಳ್ಳುತಲಿದ್ದನು; ಎಲೌ ಕಾಂತೆಯೇ! ನೀನು ನನ್ನನ್ನು ಒಪ್ಪಿದರೆ