ಪುಟ:ರಘುಕುಲ ಚರಿತಂ ಭಾಗ ೧.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶ್ರೀ ಕಾ ರ ದ . [ ಅ ಈ ಹೂವಿನ ಹಾರವನ್ನು ಹಿಡಿದಂತೆ ವಿಲಾಸದಿಂದ ನಿನ್ನ ಕೈ ಹಿಡಿ ಯುವೆನು ಎಂದು ಆತನ ಅಭಿಮತ ; ತಲೆಯನ್ನು ಡೊಂಕುಮಾಡುವು ದರಿಂದ ಮರೆಮಾಡಿಕೊಳ್ಳತಕ್ಕ ಆವುದೋ ಒಂದು ಡೊಂಕು ಇವನಲ್ಲಿರು ವುದು, ಇವನು ಅನರ್ಹನು ಎಂಬುದು ಆಕೆಯ ಆಶಯ. - ಬೇರೊಬ್ಬ ಅರಸು - ಓರೆನೋಟದ ಸೊಬಗುಳ್ಳವನಾಗಿ, ಕಾಲ್ಪೆ ರಳುಗಳ ತುದಿಯನ್ನು ತುಸಮಡಿಸಿ, ಚಿನ್ನದ ಕಾಲುಮಣೆಯನ್ನು ಹೆಜ್ಜೆ ಯಿಂದ ಕೆರೆಯುತಲಿದ್ದನು, ಬೆರಳಿನುಗುರಿನ ಹೊಳವು – ಅಡ್ಡಲಾಗಿ ಹರಡುತಲಿದ್ದಿತು ; ಎಲ್ ವಧುವೇ ! ನೀನು ಹೆರರನ್ನು ತೊರೆದು ಇಲ್ಲಿಗೆ ಬಂದು ನನ್ನನ್ನು ವರಿಸು ಎಂದು ಅವನ ಅಪ್ಪ ; ಕಾಲಿನಿಂದ ನೆಲವನ್ನು ಗೀಚುವುದು ನಿರ್ಭಾಗ್ಯಲಕ್ಷಣವೆಂದು ಇಂದುಮತಿಯ ಅಭಿಪ್ರಾಯ. ಇನ್ನೊಬ್ಬ ನರನಾಥನು - ತಾನು ಕುಳಿತಿರುವ ಮಂಚದ ಒರಗು ದಿಂಡಿನಮೇಲೆ ವಿಡದ ತೋಳನ್ನಿಟ್ಟು, ಎತ್ತರವಾದ ಹೆಗಲುಳ್ಳವನಾಗಿ, ಹಿಂದಕ್ಕೆ ಓರೆಯಾಗಿ ತಿರುಗಿಕೊಂಡು, ತನ್ನ ಮಿತ್ರನೊಡನೆ ಮಾತನಾಡ ತೊಡಗಿದನು, ಅವನ ಕೊರಳಿನಲ್ಲಿನ ನೀಳವಾದ ಹೂವಿನ ಹಾರದ ತುದಿಯು - ಎಡದ ಟೊಂಕದ ಕೆಳಗಡೆಯಲ್ಲಿ ಜೋಲಾಡುತಲಿದ್ದಿತು, ಎಲೆ ಸುದತಿ ! ನೀನು ನನ್ನ ಪಾಣಿಗ್ರಹಣವನ್ನು ಮಾಡಿಕೊಂಡರೆ - ನಿನ್ನನ್ನು ನನ್ನ ಈ ಎಡದ ತೊಡೆಯಮೇಲೆ ಕುಳ್ಳರಿಸಿಕೊಂಬೆನು ಎಂ ಬುದು ಅವನ ಭಾವ ; ಕಾಳಗದಲ್ಲಿ ಹಗೆಗಳಿದಿರಾದರೆ ಇವನು ಹಿಮ್ಮೆ ಟ್ಟುವ ಹೇಡಿ ಎಂಬುದು ಇಂದುಮತಿಯ ಅಂತರಂಗ ಮಗುದೊಬ್ಬ ತರುಣ ಮಹೀಪಾಲನು-ವಿಲಾಸವತಿಯಾದ ವನಿತೆ ಯರು - ತಮ್ಮ ಕಿವಿಗಳಿಗಲಂಕರಿಸಿಕೊಳ್ಳುವ ಗೇದಗೆಯ ಹೂವಿನ ಬಿಳಯ ರೇಕನ್ನು ಹಿಡಿದು, ವಿಲಾಸಾರ್ಥವಾಗಿ ಉಗುರುಗಳಿಂದ ಸೀಳುತ ಲಿದ್ದನು. ಎಲಣ ಲಲನೆಯೇ! ನನ್ನನ್ನು ವಿವಾಹಮಾಡಿಕೊಂಡರೆ, ಇಂತಹ ಸುಕುಮಾರವಾದ ಕುಸುಮಗಳನ್ನು ನಿನಗೆ ಅಲಂಕರಿಸುವೆನು ಎಂದು ಆತನ ಹೃದಯಗತ ; ಇವನು - ನಖದಿಂದ ತೃಣವನ್ನು ಛೇದಿಸುವ ದುರ್ಲಕ್ಷಣನು ಎಂಬುದು ರಾಜಪುತ್ರಿಯ ರಹಸ್ಯ"