ಪುಟ:ರಘುಕುಲ ಚರಿತಂ ಭಾಗ ೧.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vo ಶ್ರೀ ಶಾ ರ ದ . vowmments ಅಸದಳವೆನಿಸಿದ ಬ್ರಹ್ಮ ಶಿರವೆಂಬ ಅಸ್ತ್ರವನ್ನು ಹರನ ಅನುಗ್ರಹದಿಂದ ಪಡೆದಿದ್ದ ಈತನಿಂದ ಖರನೇ ಮುಂತಾದ ರಕ್ಕಸರಿಗೆ ಮನೆಯಾದ ಜನಸ್ಥಾನಕ್ಕೆ ಏನು ತೊಂದರೆ ಬರುವುದೋ ಎಂದು ಅಳುಕಿ, ಈತನೊ ಡನೆ ಸಂಧಿಯನ್ನು ಮಾಡಿಕೊಂಡು, ಬಳಿಕ ಕೊಬ್ಬಿದವನಾಗಿ, ಇಂದ್ರನೇ ಮೊದಲಾದವಗನ್ನು ಜಯಿಸಲೆಳಸಿ ಹೊರಟನು. ಹೇರಳವಾದ ವೀಳಯ ಬೆಲೆಯ ಬಳ್ಳಿಗಳು ಹಬ್ಬಿರುವ ಅಡಿಕೆಯ ಮರಗಳಿಂದಲೂ, ಏಲಕ್ಕಿಯ ಲತೆಗಳಿಂದ ಆವರಿಸಲ್ಪಟ್ಟಿರುವ ಚಂದನತಗುಗಳಿಂದಲೂ, ರಮಣೀಯ ವಾಗಿರುವ ಮಲಯ ಪರ್ವತದ ಬುಡದಲ್ಲಿನ ಬೈಲುಗಳೊಳಗೆ, ಹಸನಾದ ಹೊಂಗೆಯ ಚಿಗರುಗಳ ಹಾಸಿಗೆಯ ಮೇಲೆ ಹಾಯಾಗಿ ಕುಳಿತು, ಅಡಿಗ ಡಿಗೆ ಸುಖಿಸಬೇಕೆಂದು ನಿನಗೆ ಬಯಕೆಯಿದ್ದರೆ, ಹಸನ್ಮುಖಳಾಗಿ ಈತನ ಕೈ ಹಿಡಿಯಲು ಅನುಕೂಲಳಾಗು, ಹಾಗಾದರೆ – ಎಲ್ ಭಾಮಾಮಣಿ ! ಈತನೋ, ಕನ್ನೆ ದಿಲೆಯಂತೆಸೆವ ಮೈ ಬಣ್ಣದಿಂದ ಬೆಳಗುತಲಿದಾನೆ, ನೀನಾದರೆ ಗೋರೋಚನದಂತೆ ಗೌರವರ್ಣದಿಂದ ತಳತಳಸುತಲಿದ್ದೀಯೆ. ಈ ನಿಮ್ಮಿಬ್ಬರ ಕರಗ್ರಹಣಮಂಗಳವು-ಕಾರುಗಿಲ ಮೋಡಮಿಂಚುಗಳ ಕೂಟದಂತೆ ಮೇಲೆಮೇಲೆ ಶುಭಕರವೆನಿಸುವುದಲ್ಲದೆ, ಪರಸ್ಪರ ಶೋಭಾ ಕರವಾಗಿ ಪರಿಣಮಿಸುವುದು ಎಂದು ಹೇಳಿ, ಆಕೆಯ ಭಾವೋದ ಯವನ', ಇದಿರುನೋಡುತಲಿದ್ದಳು. ಅಂತಾ ಸುನಂದೆಯ ಬಹು ತರವಾದ ಹಿತೋಪದೇಶಕ್ಕೆ ಭೋಜ ಸಹೋದರಿಯಾದ ಇಂದುಮತಿಯ ಚಿತ್ತವು ಎಡೆಗುಡಲಿಲ್ಲ. ದಿನಕರನನ್ನು ನೋಡದೆ ಕಣ್ಮುಗಿದಿರುವ ತಾವರೆಯಲ್ಲಿ ತಣ್ಣ ದಿರನ ಕಿರಣಗಳಿಗೆ ಎಡೆಯುಂಟೆ ? ಇಂತು ಅನುರೂ ಪನಾದ ಪತಿಯನ್ನು ವರಿಸಲೆಳಸಿ ಐತರುತಲಿರುವ ಇಂದುಮತಿಯು - ಇರುಳಿನಲ್ಲಿ ಸಂಚರಿಸುವ ದೀವಿಗೆಯಂತೆ ಆವಾವ ಭೂವಲ್ಲಭನನ್ನು ಅತಿಕ್ರಮಿಸಿ ಮುಂದರಿದು ಬಂದಳೊ, ಆಯಾ ಧರಾನಾಥರೆಲ್ಲರೂ ರಾಜ ವೀಧಿಯ ಇಕ್ಕೆಲದ ಉಪ್ಪರಿಗೆಗಳಂತೆ ಕ್ರಮವಾಗಿ ಕಾಂತಿಶೂನ್ಯರಾ ಗುತ ಬಂದರು, ಅಲ್ಲಿಂದ ಮುಂದೆ ಇಂದುಮತಿಯು - ಮಲ್ಲಡಿಯನಿಡುತ ರಘು ನಂದನನ ಸನಿಹಕೆ ಬರುತ್ತಿರಲು, ಅಜಕುಮಾರನು - ಈ ಕನ್ಯಾರತ್ನವು ತನ್ನನ್ನು ವರಿಸುವಳೂ, ಇಲ್ಲವೆ ಜರಿದು ಮುಂಜರಿವಳೋ ಎಂದು