ಪುಟ:ರಘುಕುಲ ಚರಿತಂ ಭಾಗ ೧.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V) ಶ್ರೀ ಶಾ ರ ದ . ಈ ದಿಲೀಪನೇ - ಶತಮಖನಮೇಲಣ ಹೊಟ್ಟೆ ಕಿಚ್ಚನ್ನು ತೀರಿಸಿಕೊ ಳ್ಳಲಿಕ್ಕೆಂಬಂತೆ ತೊಂಭತ್ತೊಂಭತ್ತು ಯಾಗಗಳನ್ನು ಮಾಡಿ, ಆ ಇಂದ್ರನ ಪ್ರೀತಿಯನ್ನು ಕಳೆದುಕೊಳ್ಳಬಾರದೆಂದು ನೂರನೆಯ ಯಾಗವನ್ನು ನಿಲ್ಲಿಸಿದನು. ಆ ದಿಲೀಪ ಭೂಪನು - ಭೂಮಿಯನ್ನಾಳುತ್ತಿರುವಲ್ಲಿ - ಮದವತಿಯರಾದ ಮತ್ತಕಾಶಿನಿಯರು - ಉದ್ಯಾನವೇ ಮೊದಲಾದ ಸ್ಥಲ ಗಳಿಗೆ ಪ್ರಯಾಣಮಾಡುತ್ತ, ಮಾರ್ಗದಲ್ಲುಳಿದು ನಿದ್ದೆ ಗೈವ ವೇಳೆಯೊಳಗೆ, ಅವರ ಉಡಿಗೆತೊಡಿಗೆಗಳನ್ನು ಅಲುಗಿಸಲಿಕ್ಕೆ ವಾಯುವೇ ಅಂಜುತಲಿ ದ್ದನು, ಹೀಗಿರಲು, ಇನ್ನುಳಿದವರು ಅಪಹರಿಸಲು ಕೈನೀಡುವುದಕ್ಕೆ ಸಾಮರ್ಥ್ಯವೆಲ್ಲಿಯದು ?ಆ ದಿಲೀಪಾವನಿಪಾಲನ ಸತ್ಪುತ್ರನಾದ ರಘುವೇ ಈಗ ಸಾಮ್ರಾಜ್ಯವನ್ನಾಳುತಲಿದಾನೆ, ಆ ಮಹೋದಾರನೇಸಲ್ಪಸ್ಸವನ್ನೂ ದಾನವನ್ನಾಗಿ ಕೈಗೊಂಬ ವಿಶ್ವಜಿತ್ತೆಂಬ ಯಾಗವನ್ನೆಸಗಿ, ನಾಲ್ಗೆ ಸೆಗ ಳಲ್ಲಿಯೂ ಸೂರೆಗೊಂಡು ತಂದು ಬೆಳೆಯಿಸಿದ ಸಂಪತ್ಸಮೃದ್ಧಿಯನ್ನು, ಮೃದ್ಭಾಂಡಗಳು ಮಾತ್ರವೇ ಉಳಿಯುವಂತೆ ಮಾಡಿರುವನು. ಈ ಮಹಾನುಭಾವನ ಸರಿಯು – ಗಿರಿಯನ್ನೇರಿರುವುದು, ಕಡಲನ್ನು ಹೊಕ್ಕಿರುವುದು, ಪಾತಾಳಕ್ಕೆ ಇಳಿದಿರುವುದು, ಸ್ವರ್ಗಾದಿ ಲೋಕ ಗಳನ್ನು ಹತ್ತಿರುವುದು, ದಿಗಂತಗಳೊಳಗೆ ಹರಡಿರುವುದು, ಹೀಗೆ - ತಡೆಯಿಲ್ಲದೆ ಎಲ್ಲೆಲ್ಲಿಯೂ ವ್ಯಾಪಿಸಿರುವ ಯಶಸ್ಸನ್ನು, ದೇಶದಿಂದಲಾಗಲಿ, ಕಾಲದಿಂದಲಾಗಲೀ ಇಷ್ಟೆಂದು ಅಳೆಯಲಿಕ್ಕೆ ಅಳವಲ್ಲ. ನಾಕಲೋಕ ನಾಯಕನಾದ ಇಂದ್ರನನ್ನನುಸರಿಸಿ ಜಯಂತನುದಿಸಿರುವಹಾಗೆ, ಆ ರಘು ಭೂದೇವೇಂದ್ರನನ್ನನುಸರಿಸಿಯೇ ಈ ಅಜಕುವರನು ಜನಿಸಿ ಇದಾನೆ. ಹರಯದ ಹೊಮ್ಮಿ ನಿಂದಿರುತ, ಪಳಗಬೇಕಾಗಿರುವ ಪಡ್ಡೆಗರುವು-ಗೂಳಿಗೆ ಣೆಯೆನಿಸಿ, ಹೊರೆಯನ್ನು ಹೊರಲು ತಾನೂ ಹೆಗಲುಕೊಡುವಂತೆ, ಬಹುಕಾಲದಿಂದ ಬಂದಿರುವ ರಘುಸಾಮ್ರಾಜ್ಯದ ಗುರುತರ ಭಾರವನ್ನು ಹೊರಲು, ಧುರಂಧರನಾದ ತಂದೆಗೆಣೆಯೆನಿಸಿ, ಜೊತೆಗೆ ಈತನೂ ಊಡಾ ಗಿರುವನು ; ಅನುಕೂಲವಾದ ಕುಲ, ಎಣೆಯಾದ ಲಾವಣ್ಣ, ಓರಗೆಯಾಗಿ ಪೊಸತೆನಿಸಿದ ವಯಸ್ಸು, ಸಮಾನವೆನಿಸಿದ ಸುಶೀಲ, ಮತ್ತು - ಜ್ಞಾನ ದಯಾದಾಕ್ಷಿಣಾದಿ ಸುಗುಣಗಳು, ಇವಿಷ್ಟೂ ಇಂತು ಕಂಗೊಳಿಸುತಲಿ ಗವಲ್ಲಿ - ನೀನು-ನಿನಗೆ ಅನುರೂಪನಾದ ಈ ಭೂಪತಿ ಪುತ್ರನನ್ನು