ಪುಟ:ರಘುಕುಲ ಚರಿತಂ ಭಾಗ ೧.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ Vತಿ ವರಿಸಿದರೆ, ರತ್ನವು ಕಾಂಚನದೊಡನೆ ಕಲೆಯುವುದು, ಎಂದುದಹರಿಸಿ, ಮದುವುಗಳ ವದನವನ್ನು ನಿರುಕಿಸುತ ನಿಂತಳು. ಅಂತಾ ಸುನಂದನೆಯ ಮಾತು ಮುಗಿಯುತ ಬರುವಾಗಲೇ ನರೇಂದ್ರನಂದನೆಯಾದ ಇಂದುಮತಿಯು - ಲಜ್ಜೆಯನ್ನು ತಗ್ಗಿಸಿ, ಅಜ ಕುಮಾರನ ಕೊರಳಿನಲ್ಲಿ-ಮನದ ಪದುಳದಿಂ ಪಸರಿಸುತ, ವರಣದ ವಕುಳ ಮಾಲೆಯಂತಿರುವ ಪ್ರಸನ್ನ ದೃಷ್ಟಿಮಾಲೆಯಿಂದ ಆತನನ್ನು ಗ್ರಹಿಸಿದಳು. ಆ ಸುಕೇಶಿಯ ಮನದೊಳಗೆ ಧೀರತೆಗೆ ತಾವುತಪ್ಪಿತು, ಆ ತರುಣನ ಮೇಲಣ ಅಭಿಲಾಷೆಯು ಹೃದಯದೊಳಗೆ ಉಕ್ಕುತಲಿದ್ದಿ ತು, ಅದನ್ನು ಹೇಳಿ ಹೊರಪಡಿಸಿ ತೋರಲಾರದೆ ಹೋದಳು, ಆದರೂ ಶರೀರವನ್ನು ಭೇದಿಸಿ ಮೊಳೆಯುತಲಿರುವ ಪುಳಕದ ನೆಪದಿಂದ ಮನೋನುರಾಗವು ಹೊರಗೆ ಬರುತಲಿದ್ದಿ ತು, ಮೈಮರೆತವಳಂತೆ ಆನಂದಪರವಶತೆಯಿಂದ ಅಲುಗದೆ ನಿಂತಳು. ಆಗಲಾ ನೇತ್ರವತಿಯಾದ ಸುನಂದೆಯು - ಗೆಳತಿ ಯಾದ ಇಂದುಮತಿಯು ನಿಂತಿರುವ ಹೊರೆಯನ್ನು ನೋಡಿದಳು, ಇದು ಒಳ್ಳೆಯ ಸಮಯವೆಂದು ಭಾವಿಸಿ, ಎಲ್‌ ಆರೈ ! ಮುಂದೆ ಬೇರೊಂ ದೆಡೆಗೆ ತೆರಳಬಹುದಲ್ಲವೆ ? ಎಂದು ಪರಿಹಾಸಪೂರ್ವಕವಾಗಿ ಹೇಳಿದಳು, ಆ ತಾವಿನಿಂದ ಅಡಿಯನ್ನಲುಗಿಸಲಾರದೆ ನಿಂತಿರುವ ಕುಮಾರಿಯು - ಹೊಟ್ಟೆಯ ಕಿಚ್ಚನ್ನು ಹುದುಗಿಸಿಕೊಂಡು, ಭಾವವನ್ನು ಸೂಚಿಸುತಲಿರುವ ಡೊಂಕಾದ ನೋಟದಿಂದ ಸುನಂದೆಯನ್ನು ದುರದುರನೆ ನೋಡಿದಳು, ಬಳಕ-ಶರೀರವನ್ನಾ೦ತಿರುವ ತನ್ನ ಮನೋನುರಾಗವನ್ನು ಅರ್ಪಿಸುವ ಹಾಗೆ, ಮಂಗಳಕರವಾದ ಪರಿಮಳದಪುಡಿಯಿಂದಕೆಂಪಗಿರುವ ಹಾರವನ್ನು ಕುಮಾರನ ಕಂಠದಲ್ಲಿ ದಾದಿಯಾದ ಸುನಂದನೆಯ ಕೈಗಳಿಂದ ಅಂದವಾ ಗಿರುವಹಾಗೆ ಇಳಿಯಹಾಕಿಸಿದಳು. ತರುವಾಯ - ಗುಣವರೇನಾದ ಆ ವರಕುಮಾರನು - ತನ್ನ ಕೊರಳಿನಲ್ಲಿ ಅರ್ಪಿಸಲ್ಪಟ್ಟು ದಾಗಿ, ಅಗಲವಾದ ಎದೆಯಮೇಲೆ ಜೋಲಾ ಡುತಲಿರುವ ಆ ಮಂಗಳ ಕುಸುಮಮಾಲಿಕೆಯನ್ನು ವಿದರ್ಭರಾಜ ಸೋದರಿಯಿಂದ ಸಮರ್ಪಿಸಲ್ಪಟ್ಟ ಬಾಹುಪಾಶವನ್ನಾಗಿ ಸಂಭಾವಿಸಿದನು ಆಗ – ಆಹಾ ! ಕೌಮುದಿಯು - ಮೋಡದಿಂದ ಹೊರಗೆಬಂದ ಕಳಾನಿಧಿಯಲ್ಲಿ ಕಲೆಯಿತು, ಜಾಹ್ನವಿಯು ತನಗನುರೂಪವಾಗಿರುವ