ಪುಟ:ರಘುಕುಲ ಚರಿತಂ ಭಾಗ ೧.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vv ಶ್ರೀ ಶಾ ರ ದ . ಸ್ವಾಂತವನ್ನು ಪ್ರವೇಶಿಸುವಹಾಗೆ ಪ್ರವೇಶಿಸಿದನು, ಅಮೂಲ್ಯವಾದ ನಿಂಹಾಸನದಮೇಲೆ ಕುಳಿತನು,ಭೋಜನು ಮಮತೆಯಿಂದೊಪ್ಪಿಸಿದರತ್ನ ಗಳಿಂದಲೂ,ಮಧುಪಕ್ಕದಿಂದಲೂ ಮಿಳಿತವಾದ ಸತ್ತಾರಸಾಮಗ್ರಿಗಳನ್ನೂ, ದುಕೂಲಗಳೆರಡನ್ನೂ, ಕಾಂತಾಜನರ ಕಟಾಕ್ಷಗಳೊಂದಿಗೆ ಪರಿಗ್ರಹಿಸಿದ ನು, ಆಮೇಲೆ-ಚಂದಿರನ ಕಿರಣಗಳು-ಮಿರುಗುತಲಿರುವ ನೊರೆಗಳ ಸಾಲಿ ನಿಂದ ಬೆಳಗುವ ಕಡಲನ್ನು ದಡಕ್ಕೆ ತಂದುಬಿಡುವಹಾಗೆ, ವಿನಯಸಂಪನ್ನ ರಾದ ಅಂತಃಪುರಾಧಿಕಾರಿಗಳು- ದುಕೂಲಧರನಾದ ಅಜಕುಮಾರನನ್ನು ವಧುವಿನ ಸಮಿಾಪವನ್ನು ಕುರಿತು ಕರೆತಂದರು. ಹಸೆಯ ಜಗುಲಿಯಮೇಲೆ ಅಗ್ನಿಯಂತೆ ಬೆಳಗುತಲಿರುವ ಭೋಜ ಪುರೋಹಿತನು-ಅಗ್ನಿಯನ್ನು ಪ್ರತಿ ಏನಿ, ವಿಧಿಪ್ರಕಾರ ಆಜ್ಞಾದಿಗಳ ಹವನದಿಂದ ಅರ್ಚಿಸಿ, ಆ ವಯ್ಕೆ ಯನ್ನೇ ಸಾಕ್ಷಸ್ಥಾನದಲ್ಲಿಟ್ಟು, ವಧೂವರರ ವಿವಾಹ ವಿಧಿಯನ್ನು ಸಾಂಗ ವಾಗಿ ನೆರವೇರಿಸತೊಡಗಿದನು. ಆ ವೇಳೆಯೊಳಗೆ – ಹತ್ತಿರದಲ್ಲಿ ಹಬ್ಬಿದ ಅಶೋಕಲತೆಯ ತ೪ರಿನಿಂದೊಡಗೂಡಿರುವ ಚಿಗುರನ್ನೊಳಗೊಂಡ ಸಿಹಿ ಮಾವಿನಗಿಡದಂತೆ, ಅಜಕುಮಾರನು - ತನ್ನ ಕರತಲದಿಂದ ವಧುವಿನ ಕರರುಹವನ್ನು ಪಿಡಿದು ವಿಶೇಷವಾಗಿ ವಿರಾಜಿಸುತಲಿದ್ದನು. ಅಲ್ಲದೆ ರಘುರಾಜಪುತ್ರನು - ಮಣಿಕಟ್ಟಿನಲ್ಲಿ ಪುಳಕಿತನಾದನು, ಕುಮಾರಿಯು ಕೈಬೆರಳುಗಳಲ್ಲಿ ಬೆವರನ್ನುಳವಳಾದಳು, ಆ ಸಂದರ್ಭದಲ್ಲಿ ಮನೋಭ ವನು - ಅವರೀರ್ವರಲ್ಲಿಯೂ ರಾಗರಸವನ್ನು ಹಂಚುವಂತಿದ್ದಿ ತು. ಮತ್ತು - ಒಬ್ಬರ ಭಾವವನ್ನೊಬ್ಬರು ನೋಡಬೇಕೆಂಬ ಕುತೂಹಲ ದಿಂದ ಇಬ್ಬರ ಕುಡಿನೋಟಗಳೂ ಹೊರಟುವು, ನಡುವೆ ಕಲೆತುವು, ಒಡನೆ ನಾಚಿಕೆಯ ಸೆಳೆತದಿಂದ ಹಿಂದಿರುಗಿದುವು, ಅದು ಬಲು ಅಂದ ವಾಗಿದ್ದಿತು, ಜಲಿಸುತಲಿರುವ ಅಗ್ನಿಯನ್ನು ಪ್ರದಕ್ಷಿಣೆಮಾಡುವ ಕ್ರಮ ದಲ್ಲಿ - ಆ ಗಂಡುಹೆಣ್ಣುಗಳು- ಮೇರುವನ್ನು ಪ್ರದಕ್ಷಿಣೆಮಾಡುತ ಪರಸ್ಸ ರವಾಗಿ ಸಂಬಂಧಿಸಿರುವ ಹಗಲಿರುಳುಗಳಂತೆ ಶೋಭಿಸುತಲಿದ್ದ ರು. ಬ್ರಹ್ಮತೇಜಸ್ಸಿನಿಂದ ಬೆಳಗುತಲಿರುವ ಪುರೋಹಿತನಿಂದ ನೇಮಿಸಲ್ಪಟ್ಟ ಆ ಬಡನಡುವಿನ ಹೆಣ್ಣು - ಮದವೇರಿದ ಚಕೋರದಂತೆ ಚಂಚಲಾಕ್ಷಿ ಯಾಗುತ್ತಾ ಅಗ್ನಿಯಲ್ಲಿ ನೇಮದ ಅರಳನ್ನು ಸುರಿದಳು, ತುಪ್ಪ, ಬನ್ನಿಯಚಿಗುರು, ಅರಳು ಇವುಗಳನ್ನು ವಿಧಿಯಕಾರ ವಹಿಯಲ್ಲಿ