ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ

  • !

5 ಅಧಿಕಾರಿಗಳಲ್ಲಿ ಬಹು ಮಂದಿ ದೇಶಭಾಷೆಯನ್ನು ತಿಳಿಯದವರಾಗಿರುವುದರಿಂದ ಅವರು ತಮ್ಮ ವಿಧಾಯಕ ಕೃತ್ಯಗಳನ್ನು ಕ್ರಮವಾಗಿ ನಡೆಸಲು ಅಶಕ್ತರಾಗಿರುವರು, ಪ್ರಜೆ ಗಳು ತಮ್ಮ ಸ್ಥಿತಿಗಳನ್ನು ಸ್ವಂತವಾಗಿ ಹೇಳಿಕೊಳ್ಳಲಿಕ್ಕೆ ಅವಕಾಶವಿಲ್ಲದೆ ತೊಂದರೆಯಾಗಿರು ವುದು. ಆದುದರಿಂದ ಪಾಲನಾಧಿಕಾರಿಗಳಿಗೆ ದೇಶಭಾಷೆಯ ಜ್ಞಾನವು ಅಗತ್ಯ 6 ನ್ಯಾಯನಿರ್ಣಯಗಳನ್ನೂ, ಶಿಕ್ಷೆಗಳನ್ನೂ, ಅಧಿಕಾರಿಗಳ ತರ ಕರ್ತವ್ಯ ಗಳನ್ನೂ ಕುರಿತು ಆಗಾಗ್ಗೆ ಸರ್ಕಾರದವರು ಪ್ರಚುರಿಸುವ ಅಪ್ಪಣೆಗಳೆಲ್ಲವೂ ಬಹಿರಂಗವಾಗಿ ಗ್ರಂಥಗಳಲ್ಲಿ ಪ್ರಕಟಿಸಲ್ಪಡತಕ್ಕದ್ದು. 7 ನ್ಯಾಯಸ್ಥಾನಗಳಲ್ಲಿ ಬಳಕೆಯಲ್ಲಿರುವ ಪಾರಸಿ ಬರಹವು ಈಗಿನ ನ್ಯಾಯಾಧಿ ಕಾರಿಗಳಿಗೂ ನ್ಯಾಯವನ್ನು ಕೋರತಕ್ಕವರಿಗೂ ಕೂಡ ತಿಳಿಯದೆ ಇದೆ. ಇದರಿಂದ ಆ ಭಾಷಾಪ್ರಯೋಗವನ್ನು ತಗ್ಗಿಸಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯುವಂತೆ ಏರ್ಪಡಿಸಿದರೆ ಅಧಿಕಾರಿಗಳಿಗೆ ತಿಳಿದಿರುವುದಲ್ಲದೆ ಕ್ರಮಕ್ರಮವಾಗಿ ಪ್ರಜೆಗಳಿಗೆ ಕೂಡ ಆ ಭಾಷಾ ಜ್ಞಾನಾ ಭಿವೃದ್ಧಿಯನ್ನು ಪಡೆಯಬೇಕೆಂಬ ಕೋರಿಕೆ ಹೆಚ್ಚುವುದು. 8 ಪ್ರಜಾಪಕ್ಷದಲ್ಲಿ ಕೆಲಸಮಾಡತಕ್ಕ ನ್ಯಾಯವಾದಿಗಳ (ವಕೀಲರ) ವೃತ್ತಿಯಲ್ಲಿ ಸಾಕಾದಷ್ಟು ವಿದ್ಯೆಯನ್ನು ಕಲಿತವನಾಗಿದ್ದರೆ ಹಿಂದುವಾಗಲಿ, ಮಹಮ್ಮದೀಯನಾಗಲಿ ಸಮವಾಗಿಯೇ ಕೆಲಸ ಮಾಡಬಹುದು, ಆದರೆ ಪ್ರಜೆಗಳಿಗೆ ಬಹುಮಟ್ಟಿಗೆ ಹಿಂದೂಗಳ ಲಿಯೇ ನಂಬಿಕೆ ಹೆಚ್ಚಾಗಿರುವುದು. 9 ನ್ಯಾಯಾಧಿಕಾರಿಗಳ ಕೈಕೆಳಗಿರುವ ಉದ್ಯೋಗಸ್ಥರ ವೇತನಗಳು ಪಟ್ಟಣಗ ಇಲ್ಲಿ ತಮ್ಮ ಕುಟುಂಬದ ವೆಚ್ಚಕ್ಕೆ ಸಾಕಾದಮಟ್ಟಿಗೂ ಇಲ್ಲದೆ ಅತ್ಯಲ್ಪವಾಗಿರುವುದರಿಂದ ಅವರು ಆ ವೆಚ್ಚವನ್ನು ಸಂಪಾದಿಸಿಕೊಳ್ಳುವುದಕ್ಕೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸುವರು, ಅದುದರಿಂದ ಅವರ ಸ್ಥಿತಿಗಳಿಗೂ ಅಧಿಕಾರಗಳಿಗೂ ಅನುಕೂಲವಾದ ವೇತ ನವನ್ನು ಕೊಡಬೇಕು. 10 ನ್ಯಾಯ ವಿಧಿಗಳಿಗೆ ಏರ್ಪಡಿಸಿರುವ ಕಾನೂನುಗಳೆಲ್ಲವೂ ತ.೦ಬಾ ವಿದ್ಯಾವಂತ ರಿಗೆ ಹೊರತು ಉಳಿದವರಿಗೆಲ್ಲರಿಗೂ ತಿಳಿಯದೆ ಇರುವುದು ದೊಡ್ಡ ಕೊರತೆಯಾಗಿದೆ. ಆದುದ ರಿಂದ ಸಾಮಾನ್ಯವಾಗಿ ಹಳ್ಳಿಗಳಲ್ಲಿರುವವರಿಗೆಲ್ಲ ಅನುಕೂಲಿಸುವಂತೆ ಪ್ರತಿ ಒಂದು ಕಾನೂ ನೂ ದೇಶಭಾಷೆಗಳಲ್ಲಿ ಬರೆಯಿಸಲ್ಪಡತಕ್ಕದ್ದು, ದೊಡ್ಡ ದೊಡ್ಡ ಗ್ರಾಮಗಳ ಚಾವಡಿಗ ಇಲ್ಲಿ ಆ ಶಾಸನಗಳನ್ನಿರಿಸಿ, ಅವುಗಳ ಕಾವಲಿಗಾಗಿ ಅಲ್ಪ ವೇತನದ ಒಬ್ಬ ಆಳನ್ನು ನಿಯಮಿಸಿ, ಯಾರಾದರೂ ಅವುಗಳನ್ನು ನೋಡಿಕೊಳ್ಳುವುದಕ್ಕೂ, ಅಗತ್ಯವಾದರೆ ಪ್ರತಿಗಳನ್ನು ಬರೆದು ಕೊಳ್ಳುವುದಕ್ಕೂ ಅವಕಾಶ ಕೊಡತಕ್ಕದ್ದು. 11 ಕೆಲವು ಸಂದರ್ಭಗಳಲ್ಲಿ ನ್ಯಾಯವನ್ನು ತಿಳಿದುಕೊಳ್ಳುವುದು ಕಷ್ಟವಾಗಿರು ವುದು. ಆದುದರಿಂದ ಒಂದೊಂದು ವಿಷಯದಲ್ಲಿಯ ಬುದ್ದಿಯನ್ನು ಬಹು ಸೂಕ್ಷ್ಮ ವಾಗಿ ವಿನಿಯೋಗಿಸಬೇಕಾಗಿರುವುದು, ಈ ಸೂಕ್ಷ್ಮ ವಿಚಾರವನ್ನು ಒಬ್ಬೊಬ್ಬನೇ ಮಾಡ 13