ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ff ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಸಾಕ್ಷಗಳಲ್ಲಿ ಕೆಲವು ಅಂಶಗಳನ್ನು ಆಕ್ಷೇಪಿಸಿದ್ದುದರಿಂದ ರಾಮಮೋಹನನು ಅವುಗಳಿಗೆ ಪ್ರತ್ಯುತ್ತರಗಳನ್ನು ಕೂಡ ಬರೆದು ಆ ಗ್ರಂಥಗಳಲ್ಲಿ ಸೇರಿಸಿದನು. ಈತನು ಲಂರ್ಡಪಟ್ಟಣದಲ್ಲಿ ಇದ್ದಷ್ಟು ದಿನಗಳೂ ಒಂದೂದೇಶದ ಸ್ಥಿತಿಗಳನ್ನು ಕುರಿ ತೇ ತುಂಬಾ ಶ್ರದ್ಧೆಯಿಂದ ಕೆಲಸಮಾಡಿದರೂ, ಮಧ್ಯ ಮಧ್ಯದಲ್ಲಿ ಅಲ್ಲಿನ ಕೆಲವು ಸಾಮಾ ಚಿಕ ವಿಷಯದ ಗ್ರಂಧಗಳನ್ನು ಕೂಡ ಬರೆಯುತ್ತಾ, ತನಗೆ ಪರವ:ಸಂತೋಷಕರವಾದ ವಿಷಯಗಳನ್ನು ಮರೆಯದೆಯೇ ಇದ್ದನು, ಶಾಸನನಿಲ್ಯಾಣಕ್ಕೆ ತಾನು ಕೊಟ್ಟ ಸಾಕ್ಷ್ಯಗ ಳನ್ನು ಹೀಗೂಹಾಗೂ ಪ್ರಚಾರಮಾಡು, ಹೇಳಿ ಬರೆಯಿಸುತ್ತಿದ್ದನೆಂದು ಹೇರ್ ದೊರೆ ಹೇಳಿರುವನು, ಕುಶಾಗ್ರಬುದ್ಧಿಯುಳ್ಳ ಈ ಮಹನೀಯನಿಗೆ ಶಬ್ದಗಳನ್ನು ಹುಡುಕಿಕೊಳ್ಳು ವುದಕ್ಕೂ, ಅವುಗಳನ್ನು ಮರಳಿ ತಿದ್ದಿಕೊಳ್ಳುವುದಕ್ಕೂ ಅವಕಾಶವಿರಲಿಲ್ಲ. ಇಂತಹ ಅಸ್ತ್ರ ತಿಮಾನಪ್ರತಿಭಾ ಪ್ರಭಾವನಾದ ಈ ಮಹಾತ್ಮನು ಅವಕಾಶವಿದ್ದಷ್ಟು ಕೆಲಸಗಳನ್ನು ಮಾ ಡುತ್ತಿದ್ದಾಗ ಸುದಾ ಗ್ರಂಧಗಳನ್ನು ಬರೆಯುತ್ತಲಿದ್ದದ್ದು ಆಶ್ಚಯ್ಯ ಕರವಲ್ಲ, ರಾಮಮೋಹನನು ಮುಖ್ಯವಾಗಿ ಸ್ವತಂತ್ರಾಭಿಪ್ರಾಯಗಳನ್ನೇ ಉಳ್ಳವನಾಗಿದ್ದರೂ ಆತನು ತನ್ನ ಸದಾಚಾರಣೆಗಳಿಂದಲೂ, ಒಳ್ಳೆ ಮನಸ್ಸಿನಿಂದಲೂ, ಅಲ್ಲಿನ ಭಿನ್ನಾಭಿಪ್ರಾಯ ಸಮಾಜಗಳವರಿಗೆಲ್ಲ ತಲೆಯಲ್ಲಿ ನಾಲಗೆಯಂತೆ ಇದ್ದನು. ಇದರಿಂದ ಶಾಸನನಿಲ್ಯಾಣ ಕಾಲ ದಲ್ಲಿ ರ್ಕ ಸರೈಟಿವ್ ಸಂಘದವರೂ, ಲಿಬರಲ್ ಸಂಘದವರೂ, ಈತನಲ್ಲಿ ಸಮಾನವಾದ ಗೌರವವನ್ನೂ ಸುಹೃದ್ಭಾವವನ್ನೂ ಪಡೆದಿದ್ದುದರಿಂದ ಇಂಗ್ಲೆಂಡಿನಲ್ಲಿ ತಾನು ನೆರವೇರಿಸಬೇ ಕಾಗಿದ್ದ ಮುಖ್ಯ ಕಾರವೊಂದನ್ನು ಆತನು ಜಯಪ್ರದವಾಗಿ ನಡೆಸಿದನು, ಸತ್ಯಕ್ಕೆ ದೈವ ಬಲವಿರುವುದೆಂದು ಆತನ ಮನಸ್ಸಿನಲ್ಲಿ ಯಾವಾಗಲೂ ಬೇರೂರಿರುವ ನಂಬುಗೆಯನ್ನನುಸರಿಸಿ ಉಳಿದ ಮುಖ್ಯ ಕಾರಗಳಲ್ಲಿ ಕೂಡ ಆತನು ಹಾಗೆಯೇ ಜಯವನ್ನು ಪಡೆದನು. ಧರ್ಮ ಸಭೆಯವರ ಪಕ್ಷದಲ್ಲಿ ಅದಕ್ಕೆ ಮುಂಚೆ ಬೀದಿಯವರಿಂದ ಒಪ್ಪಿಸಲ್ಪಟ್ಟು, ಪಾರ್ಲಿಮೆಂಟಿನ ವರಿಂದ ಚರ್ಚಿಸಲ್ಪಡುತ್ತಿದ್ದ ವಿಜ್ಞಾಪನೆಯನ್ನು ಸರಕಾರದವರು ಅಂಗೀಕರಿಸದೆ, 183 2 ನೇ ಜುಲೈ 11 ರಲ್ಲಿ ಅದನ್ನು ತಳ್ಳಿ ಹಾಕಿದ್ದೇವೆಂಬ ತೀರಾನವನ್ನು ಹೇಳಿದರು. ಆಗ ರಾಮ ಮೋಹನನು ಅಲ್ಲಿಯೇ ಇದ್ದನು, ಮತ್ತು ಡಿಲೀಶ್ವರನ ಪ್ರತಿನಿಧಿತ್ವವನ್ನು ಅಂಗೀಕರಿಸಿ, ಆತನ ವಿಜ್ಞಾಸನೆಯಂತೆ ಪ್ರತಿವರ್ಷದಲ್ಲಿಯೂ ಮೂರುಲಕ್ಷ ರೂಪಾಯಿಗಳ ವೇತನವನ್ನು ಹೆಚ್ಚಿಸಿದರು. ಮೇಲಿನ ವ್ಯವಹಾರವು ಮುಗಿದ ಕೆಲವು ದಿನಗಳ ಮೇಲೆ ಪಾರ್ಲಿಮೆಂಟಿನವರು ಇದುವರಿಗೆ ಯೂರೋಪಿಯನರು ಹಿಂದೂದೇಶದಲ್ಲಿ ಒಕ್ಕಲುತನವನ್ನು ಏರ್ಪಡಿಸಿಕೊಳ್ಳು ವುದಕ್ಕೆ ಅಪ್ಪಣೆ ಕೊಡಬಹುದೆ ? ಕೂಡದೆ ? ಎಂಬ ಅಂಶವು ಚರ್ಚೆಗೆ ಬಂತು, ಅದರಲ್ಲಿ ರಾಮಮೋಹನನ ಅಭಿಪ್ರಾಯವೂ ತೆಗೆದುಕೊಳ್ಳಲ್ಪಟ್ಟಿತು, ಈತನು ಇದರಿಂದ ಉಂಟಾ ಗುವ ಲಾಭನಷ್ಟಗಳನ್ನೆಲ್ಲ ವಿವರವಾಗಿ ತೋರಿಸಿ, ನಷ್ಟಗಳಿಗಿಂತ ಲಾಭಗಳೇ ಹೆಚ್ಚಾಗಿರುವು ವೆಂದು ನಿರೂಪಿಸಿದನು, ಅವುಗಳನ್ನಿಲ್ಲಿ ಸಂಗ್ರಹವಾಗಿ ತಿಳಿಸುವೆವು.