ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೧೦೫ ಅಲ್ಲಿಯ ಕೆಲಸಗಳಲ್ಲಿ ರಾತ್ರಿಯೆನ್ನದೆ, ಹಗಲೆನ್ನದೆ ಯಾವಾಗಲೂ ಅತ್ಯಾಸಕ್ತಿಯಿಂದ ಕೆಲಸ ಮಾಡುತ್ತ ಬಂದುದರಿಂದ ಆತನು ಸ್ವಲ್ಪಮಟ್ಟಿಗೆ ವಿಶ್ರಾಂತಿಯನ್ನು ಪಡೆಯುವುದು ಅಗತ್ಯ ವಾಗಿದ್ದಿತು. ಅದುದರಿಂದ ಈ ಪ್ರದೇಶಕ್ಕೆ ಬಂದಮೇಲೆ ಕೆಲವು ದಿನಗಳ ತನಕ ಹಾಗೆಯೇ ನಡೆಯಿತು. ಅಷ್ಟರಲ್ಲಿ ಆತನಿಗೆ ನಿತ್ಯದ ಸೌಖ್ಯಸ್ಥಾನಕ್ಕೆ ಸೇರುವ ದಿನಗಳು ಸನ್ನಿಹಿತವಾದುವು. ಪರಮೇಶ್ವರನು ಆತನನ್ನು ಯಾವ ಯಾವ ಕಾವ್ಯಗಳನ್ನೆಸಗುವುದಕ್ಕಾಗಿ ಸೃಷ್ಟಿಸಿದನೋ ಆ ಕಾ ಲ್ಯಗಳೆಲ್ಲವೂ ನೆರವೇರಿ ಆತನ ಕಷ್ಟಗಳು ಸಫಲವಾದುದರಿಂದ ಈ ಮತಾತ್ಮನಿಗೆ ಮುಂದೆ ಶಾಶ್ವತ ಸೌವೇ ಶರಣವಾಗಿದ್ದಿತು. ಆದುದರಿಂದ ಬ್ರಿಸ್ಟಲ್ ನಗರಕ್ಕೆ ಬರುವುದಕ್ಕೆ ತನ್ನ ಮಿತ್ರರನ್ನು ನೋಡುವುದೆಂಬುದು ನಿಮಿತ್ತ ಮಾತ್ರವಾಗಿ, ಪುನರಾವೃತ್ತಿ ರಹಿತವಾದ ದಿವ್ಯ ಲೋಕಕ್ಕೆ ಅವರಿಂದ ಕಳುಹಲ್ಪಡುವುದೇ ಮುಖ್ಯ ಕಾರ್ಯ ವಾಗಿದ್ದಿತು. ಬ್ರಸಲ' ನಗರವನ್ನು ಪ್ರವೇಶಿಸಿದ ಮೊದಲುಗೊಂಡು ಪ್ರತಿನಿತ್ಯವೂ ಡಾಕ್ಟರ್‌ ಕಾ ರ್ಪೆಂಟರು ರಾಮಮೋಹನನ ಬಳಿಗೆ ಬಂದು ಸ್ವಲ್ಪ ಹೊತ್ತು ಮಾತನಾಡಿಕೊಂಡು ಹೋಗು ತಲಿದ್ದನು. ಒಂದೊಂದು ವೇಳೆ ರಾಮಮೋಹನನು ಕಾರ್ಪೆಂಟರವರ ಮನೆಗೆ ಹೋಗುತ್ತಲಿ ದನು, ಪ್ರತಿದಿನವೂ ಸಾಯಂಕಾಲದ ವೇಳೆಯಲ್ಲಿ ಇವರಿಬ್ಬರೂ ತಂಗಾಳಿಗಾಗಿ ಊರ ರಗಣ ಮೈದಾನಕ್ಕೆ ಹೋಗಿ ಬರುತ್ತಿದ್ದರು. ರಾಮಮೋಹನನು ಎರಡುವೇಳೆ ಡಾಕ್ಟರ್ ಕಾರ್ಪೆಂಟರವರ ಪ್ರಾರ್ಥನಾ ಮಂದಿರಕ್ಕೆ ಹೋಗಿ ಬಂದನು, ಮಿಸ ಕ್ಯಾ ಸಬ್ಬಳ ಮನೆಯಲ್ಲಿ ಒಂದು ಭಾಗವನ್ನು ಬಾಡಿಗೆಗೆ ತೆಗೆದುಕೊಂಡು, ಉಪನ್ಯಾಸಗಳನ್ನೆಲ್ಲ ಬರೆಯುವುದರಲ್ಲಿ ಅದು ತಪ್ರಜ್ಞೆಯುಳ್ಳ ರ್ಜಾ ಫಾಸ್ಟರ್‌ ಎಂಬ ಘಾದಿರಿಯೊಬ್ಬು ವಾಸಮಾಡುತ್ತಿದ್ದನು, ಮೊ ದಲುಮೊದಲು ಆತನಿಗೆ ರಾಮಮೋಹನನನ್ನು ಹೊಗಳುವವರಲ್ಲಿ ಸ್ವಲ್ಪ ಮಟ್ಟಿಗೆ ಈರ್ಷೆ ಯುಂಟಾದರೂ ಆತನೊಂದಿಗೆ ಒಂದೆರಡುವೇಳೆ ಕಲೆತು ಮಾತನಾಡಿದ ಕೂಡಲೇ ಈ ಅಭಿಪ್ರಾ ಯುವು ಮಾರ್ಪಟ್ಟಿತು, ಕೆಲವು ದಿನಗಳಲ್ಲಿಯೇ ಇಮಬ್ಬರೂ 'ರಮಮಿತ್ರರಾದರು, ಈ ಅಂಶವು ಈತನು ತನ್ನ ಸ್ನೇಹಿತನಿಗೆ ಬರೆದ ಪತ್ರದಿಂದ ವ್ಯಕ್ತವಾಗುವುದು. ಡಿಸೆಂಬರು 11 ನೆ ತಾರೀರಿನಲ್ಲಿ ರಾಮಮೋಹನನನ್ನು ಸತ್ಕರಿಸುವುದಕ್ಕಾಗಿ ಒಂದು ಸಭೆಗೂಡಿತು. ರಾಮಮೋಹನನ ನಿವಾಸವವನವೇ ವಿಶಾಲವಾಗಿಯ,ಸೌಖ್ಯ ಪ್ರದವಾಗಿಯ ಇದ್ದುದರಿಂದ ಸಭೆಗೂಡುವುದಕ್ಕೆ ಆ ಸ್ಥಳವೇ ಏರ್ಪಡಿಸಲ್ಪಟ್ಟಿತು. ಈ ಸಭೆಗೆ ಹಲವರು ಬಂದು ಸೇರಿದರು. ಅವರಲ್ಲಿ ಮನುಷ್ಯನ ಜ್ಞಾನವನ್ನು ಪೂರ್ತಿಯಾಗಿ ತೂಗಿದಂತೆ ತಿಳಿದು ಕೊಳ್ಳಲಿಕ್ಕೆ ಸಮರ್ಥರಾದ ವಿದ್ವಾಂಸರು ಕೆಲವರಿದ್ದರು, ಅವರೆಲ್ಲರೂ ಯೂನಿಟೇರಿರ್ಯ ಸಭೆಯಲ್ಲಿ ನಡೆಯುವಂತೆಯೇ ಕ್ರಮಾನುಸಾರವಾಗಿ ಸ್ವಲ್ಪ ಸ್ವಲ್ಪ ಹೊತ್ತು ರಾಮಮೋಹನನ ಯೋಗ್ಯತಾದಿ ವಿಶೇಷಗಳನ್ನು ಕುರಿತು ಪ್ರಶಂಸಿಸಿದರು, ತರುವಾಯ ಈತನು ಅವರು ತೋರಿಸಿದ ಗೌರವಕ್ಕೆ ಪ್ರತ್ಯುಪಕೃತಿಯಾಗಿ ತನ್ನ ಕೃತಜ್ಞತಾಸೂಚಕ ವಂದನೆಗಳನ್ನು ಉಪ ನ್ಯಾಸರೂಪವಾಗಿ ಅರ್ಪಿಸಿದನು, ಆ ಸಭೆಯಲ್ಲಿದ್ದವರೆಲ್ಲರೂ ಆತನ ವಾಗೈಖರಿಗೂ, ಸೇತು ನಿರಾಣಕ್ಕೂ, ಮೃದುಭಾಷಣಕ್ಕೂ ತುಂಬ ಸಂತೋಷ ಪಟ್ಟರು, ಸೆಪ್ಟಂಬರ್ 16ನೇ ತಾರೀ 14