ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಬಿನಲ್ಲಿ ಮರಳಿ ಅಲ್ಲಿಯೇ ಎರಡನೆಯ ಸಭೆಗೂಡಿತು, ಅದರಲ್ಲಿ ಆತನು ತನ್ನ ಕೊನೆಯ ಉಸ ನ್ಯಾಸವನ್ನು ಕೊಟ್ಟನು. ಆದಿನ ಮೊದಲು ನಡೆದ ಸಭೆಯ ಸ್ಥಿತಿಯನ್ನು ತಿಳಿದವರೆಲ್ಲರೂ ಗುಂಪುಗುಂಪಾಗಿ ಬಂದು ಸಭಾಭವನದಲ್ಲೆಲ್ಲಾ ತುಂಬಿಹೋಗಿದ್ದರು. ಸ್ಥಳಸಾಲದೆ ಹೋದ ದರಿಂದ ಬಹುಮಂದಿ ನಿಂತುಕೊಂಡೇ ನೋಡುತ್ತಿದ್ದರು. ಆಗ ರಾಮಮೋಹನನು ಸರಮ ಸಂತೋಷದಿಂದ ಹಿಂದೂದೇಶದ ಪೂರ್ವಕಾಲದ ಔನ್ನತ್ಯವನ್ನು ಕುರಿತು ಮೂರು ತಾಸುಗಳತ ನಕ ಎದ್ದು ನಿಂತು ಉಪನ್ಯಾಸ ಮಾಡಿದನು. ಆ ಉಪನ್ಯಾಸ ಮಾಡುತ್ತಿದ್ದಾಗ ಆತನ ಮುಖದಲ್ಲಿ ತೋರಿಬರುತ್ತಿದ್ದ ಶೋಕ, ವೀರ, ಶೌರ, ಅದು ತರಸಗಳಿಗೆ ಸಭೆಯಲ್ಲಿದ್ದವರೆಲ್ಲರೂ ಆಶ್ಚರ ಪಟ್ಟಿ ಇತನು ಅಪ್ರತಿಮನೆಂದು ಹೊಗಳಿದರು. ಅಕಾ ! ನಮ್ಮ ರಾಮಮೋಹನನ ಆರೋಗ್ಯದತೆಗೆ ಅದೇ ಕೊನೆಯದಿನವಾಗಿದ್ದಿತು. ಮರುದಿನ ಅಂದರೆ ಸೆಪ್ಟೆಂಬರ್ 17 ರಲ್ಲಿ ಆತನು ಮಧ್ಯಾಹ್ನದ ಊಟವನ್ನು ಸ್ವಲ್ಪ ಆಲಸ್ಯ ದಿಂದ ಮಾಡಿದನು, ಹಿಂದಿನ ದಿನ ಕೊಟ್ಟ ಉಪನ್ಯಾಸದಿಂದ ದೇಹವು ಬಳಲಿರಬಹುದೆಂದು ತಿಳಿದು, ಆತನ ಸ್ನೇಹಿತರು ಈದಿನವೆಲ್ಲವೂ ಯಾವ ಕೆಲಸವನ್ನೂ ಮಾಡದೆ ವಿಶ್ರಾಂತಿಯನ್ನು ಪಡೆಯಬೇಕೆಂದು ಹೇಳಿದರು. ಆದರೂ ಆತನಿಗೆ ಸಂಪೂರ್ಣವಾದ ವಿಶ್ರಾಂತಿಕಾಲವು ಸಿದ್ದ ವಾಗಿರುವುದೆಂದು ಯಾರಿಗೂ ತಿಳಿಯದು ಆ ಮಹಾತ್ಮನ ಮನಸ್ಸಿಗೆ ಏನಾದರೂ ತಿಳಿದಿ ತೊ ಏನೋ ! ಆದರೂ ತನ್ನ ಮನೆಒಲವು ತಗ್ಗುತ್ತಿರುವುದೆಂಬುದನ್ನು ಯಾರಿಗೂ ತಿಳಿ ಸದೆ ಆ ದಿನವೆಲ್ಲಾ ಮಲಗಿದ್ದರೂ ತನ್ನನ್ನು ನೋಡಲಿಕ್ಕೆ ಬಂದ ಸ್ನೇಹಿತರೊಂದಿಗೆಲ್ಲಾ ಸಂ ಭಾಷಣೆ ಮಾಡುತ್ತಲೇ ಇದ್ದನು. ಆ ಮರುದಿನ ಸುದಾ ಹಾಗೆಯೇ ನಡಿಸಿದನು, ಆದರೆ ಸೆಪ್ಟೆಂಬರ್ 19ನೇ ಗುರುವಾರ ದ ದಿನ ಜ್ವರವು ಪ್ರಾರಂಭಿಸಿ ಕ್ರಮಕ್ರಮವಾಗಿ ಅಭಿವೃದ್ಧಿ ಹೊಂದಿ ಅನಿವಾರವಾಗಿ ಕೊನೆಗೆ ಸೆಪ್ಟೆಂಬರ್ 27 ನೇ ಶುಕ್ರವಾರ ರಾತ್ರಿ ಗಂಟೆ 25 ನಿಮಿಷಗಳಿಗೆ ಆತನ ಪುಶುದ್ಧಾತ್ಮವು ಸತ್ಯ ದುಃಖಹೇತುಗಳಾದ ಪ್ರಕೃತಿಬಂಧಗಳ ದೆಸೆಯಿಂದ ವಿಮುಕ್ತಿಯನ್ನು ಪಡೆಯಿತು ಮಿಸ್. ಮೇರಿ ಕಾರ್ಪೆಂಟರು ಒರದ ಜೀವಹರಿತ್ರೆಯಲ್ಲಿ ರಾಮ ಮೋಹನನ ದೇಹಜಾಡ್ಯದ ವಿಷಯವಾ ಗಿಯ, ಮರಣದ ವಿಷಯವಾಗಿಯೂ, ನಿಜಸ್ಥಿತಿಯನ್ನು ವಿವರವಾಗಿ ತಿಳಿಯುವುದಕ್ಕಾಗಿ ಆತನಿಗೆ ವೈದ್ಯನಾಗಿದ್ದ ಈಸ್ಟ್ರ್ಲಿ ಎಂಬುವರ ದಿನಚರದ (Diary) ಪುಸ್ತಕದಿಂದ ಪ್ರಸ್ತು ತಾಂಶಗಳಿಗೆ ಅಗತ್ಯವಾದ ವಿಷಯಗಳು ಉದ್ಧರಿಸಿ ಬರೆಯಲ್ಪಟ್ಟಿವೆ, ಅವುಗಳಿಂದ ರಾಮಮೋ ಹನನ ಮರಣವೃತಾಂತವನ್ನೂ, ರಾಮಮೋಹನನು ಬ್ರಿಸ್ಟಲ್‌ನಗರದಲ್ಲಿದ್ದಾಗ ಜರುಗಿದ ಇತರ ಸಂಗತಿಗಳನ್ನೂ ತಿಳಿಯಬಹುದು, ಆದುದರಿಂದ ಅವನ್ನು ಭಾಷಾಂತರಿಸಿ ಇಲ್ಲಿ ಬರೆದಿರುವೆನು. ಈಸ್ಟ್ರ್ಲಿಯವರ ಡೈರಿ- ಬ್ರಿಸ್ಟಲ್ 1833 ನೆ ಇಸವಿ ಸೆಪ್ಟೆಂಬರ್ 9ನೇ ಸೋಮ ವಾರ-ನಾನು ರಾಮಮೋಹನರಾಯರನ್ನು ನೋಡುವುದಕ್ಕೆ ಸ್ಪೀಪಲ್ ರ್ಟಗೋವಿಗೆ ಹೋದೆನು, ಆತನ ಸಂಗಡ ಬಹಳ ಹೊತ್ತಿನತನಕ ಒಳ್ಳೆ ಸಂಭಾಷಣೆ ಮಾಡಿದೆನು, ಆ ಸಂಭಾಷಣೆಯಲ್ಲಿ ಆತನು ಕ್ರಿಸ್ತಮತದ ನೂತನ ನಿಬಂಧನೆಗಳಲ್ಲಿ ಚರಿತ್ರಭಾಗದ ಸಾಕ್ಷ್ಯಕ್ಕಿಂತ