ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ 1104 ಲೂ ಹೆಚ್ಚಾಗಿ ನಂಬಿಕೆಗಳನ್ನು ಕೊಡುವ ದೃಷ್ಟಾಂತಗಳುಂಟೆಂತಲೂ ಜೀಸಸ್' ದೇವರ ಮಗ ನೆಂದು ಹೇಳುವುದಕ್ಕಿಂತಲೂ ಆತನು ದೇವರ ದಿವ್ಯ ಮತವನ್ನು ಬೋಧಿಸಲಿಕ್ಕೆ ಹುಟ್ಟಿದ ಒಬ್ಬ ಮಹಾತ್ಮನೆಂದು ಒಪ್ಪಿಕೊಳ್ಳುವುದು ಯುಕ್ತವೆಂತಲೂ ಹೇಳಿ ನನಗೆ ಹಿಂದೀಭಾಷೆಯಿಂದ ಇಂಗ್ಲಿಷಿಗೆ ಭಾಷಾಂತರಿಸಿ ಬರೆದ ಒಂದು ಗ್ರಂಥವನ್ನು ಕೊಟ್ಟನು. 1833 ನೇ ಬುಧವಾರ-ಡಾಕ್ಟರ್ ಕಾರ್ಪೆಂಟರವರೊಡನೆ ನಾನು ಸ್ಟೀಪರ್ಲ್ಬಗೊ ವಿಗೆ ಭೋಜನಕ್ಕಾಗಿ ಹೋದೆನು ಅಲ್ಲಿ ಡಾಕ್ಟರ್‌ ಚೇರಾಡ್೯, ಡಾಕ್ಟರ್‌ ಸೀಮರ್ಡಡ್, ಫಾಸ್ಟರ್, ಬೋಸ್, ಎಲ್ಕಿ ಲೀ ಮತ್ತು ಇಸ್‌ಫೆಂಟ್ ಇವರುಗಳನ್ನು ದರ್ಶಿಸಿದೆನು, ಊಟ ಮಾಡುತ್ತಿದ್ದಾಗ ಸಂತೋಷಕರವಾದ ಸಂಭಾಷಣೆಗಳು ಜರುಗಿದುವು. ರಾಜಾ ರಾಮಮೋ ಹನರಾಯರು ತನ್ನ ಪ್ರಸ್ತುತ ಮತಪರವಸಾನಕ್ಕಾಗಿ ಎಷ್ಟೆಷ್ಟು ಅಭ್ಯಂತರಗಳನ್ನು ಎದು ರಿಸಿ ದಾಟಬೇಕಾಗಿ ಬಂದುದೆಂಬುದನ್ನು ಸಾವಕಾಶವಾಗಿ ಹೇಳಿದರು, ಚೇಸಸ್ಸನು ಮರಳಿ ಬದುಕಿದನೆಂತಲೂ, ಪ್ರಜೆಗಳೆಲ್ಲರೂ ಕೂಡ ಒಂದಾನೊಂದು ಕಾಲದಲ್ಲಿ ಬದುಕಿ ಏಳುವಂತ ಲೂ, ನಂಬುವುದೇ ಕ್ರೈಸ್ತರ ಮತವೆಂದು ತಿಳಿಯತ್ತೇನೆಂದು ಹೇಳಿದರು. - ಸೆಂಬರ್ 12ನೇ ಗುರುವಾರ-ನಾನು ಅಲ್ಲಿಯೇ ಮಲಗಿಕೊಂಡೆನು ಫಲಾಹಾ ರದ ಕಾಲದಲ್ಲಿ ಮನಸ್ಸನ್ನು ಸಂತೋಷಗೊಳಿಸುವ ಸಂಭಾಷಣೆಗಳು ನಡೆದುವು. ನಾನು ರಾಮಮೋಹನನಿಗೆ ಹಿಂದು, ಅರೇಬಿಯ, ಮಹಾಸಮದ್ರಗಳಲ್ಲಿನ ದ್ವೀಪಳಲ್ಲಿ ವಾಸಗಮ ಡುವ ಸಿದ್ದಿಜನರ ಚರಿತ್ರೆಯನ್ನು ಹೇಳಿದೆನು. ಆದರೆ ಆತನು ಅವರ ಸ್ಥಿತಿಯನ್ನು ಇದುವ ರಿಗೇನೇ ಮಿಷನರಿಗಳಿಂದ ಕೇಳಿದ್ದುದರಿಂದ ಈಗ ಅಷ್ಟರ ಅಕ್ಕರೆಯಿಂದ ಅದನ್ನು ಕೇಳಲಿಲ್ಲ, ಮಿಸ್ ಕೇಡಲ್, ಮಿಸ್ ಕ್ಯಾಸಲ್, ರಾಮಮೋಹನರಾಯ, ನಾನು ಸೇರಿ ಅವರ ಬಂಡಿಯ ಲ್ಲಿ ಬ್ರಿಸ್ಟಲ್‌ಗೆ ಬಂದೆವು. ಸೆಪ್ಟಂಬರ್ 13ನೇ ಶುಕ್ರವಾರ.-2 ಗಂಟೆಗೆ ರೋಗಿಗಳನ್ನು ನೋಡಿ 4 ಗಂಟೆ ಹೊ ತಿಗೆ ಸ್ನೇಹಿತರನ್ನೆಲ್ಲ ಭೋಜನಕ್ಕೆ ಬರಬೇಕೆಂದು ಆಮಂತ್ರಣ ಪತ್ರಗಳನ್ನು ಕಳುಹಿಸಿದೆನು. ರಾಜಾ ರಾಮಮೋಹನರಾಯರು, ಎ:ಕೇಡಲ್, ಮಿಸ್ ಕ್ಯಾಸಲ್, ಡಾಕ್ಟರ್ ಜೆರಾ ಡ'೯, ಡರ್ಬ್ಲಿ ನಿವಾಸಿಯಾದ ಮಿಸ್ಟರ್ ವೋ, ಮಿಸ್ಟರ್‌ ಬೋಸ್‌, ಜೋಕೊಟ್ಸ್‌ ಮೊದ ಲಾದವರೆಲ್ಲರೂ ಬಂದರು, ರಾಜತಂತ್ರಗಳನ್ನು ಕುರಿತು ಸಂಭಾಷಣೆ ಜರುಗಿತು. ಅದರಲ್ಲಿ ರಾಮಮೋಹನನು ಲಿಬರಲ್ ಕಕ್ಷಿಯವರ ಪಕ್ಷವಾಗಿ ವಾದಿಸಿದನು. ಸೆಪ್ಟೆಂಬರ್ 14ನೇ ಶನಿವಾರ-ನಾನು ಸ್ಟೀಪಲ್‌'ರ್ಟ ಗೋವಿಗೆ ಹೋದೆನು, ಅಲ್ಲಿ ಡಾಕ್ಟರ್ ಕಾರ್ಪೆಂಟರನ್ನು ನೋಡಿದೆನು, ರಾಮಮೋಹನನ ಸಂಗಡ ಒಳೋ ಹಿತವಾದ ಸಂಭಾಷಣೆ ಜರುಗಿತು. ಸೆಪ್ಟೆಂಬರ್ 55ನೇ ಭಾನುವಾರ-ರಾಜಾ ರಾಮಮೋಹನರಾಯರು ಮಿಸ್ ಕೇಡ ೮ ಎಂಬುವಳ ಬಂಡಿಯಲ್ಲಿ ಕುಳಿತು ಹೋಗುತ್ತಾ, ನನ್ನ ನ್ಯೂ, ನನ್ನ ಹೆಂಡತಿಯನ್ನೂ ಪ್ರಾರ್ಥನಾ ಮಂದಿರದ ತನಕ ಕರೆದುಕೊಂಡು ಹೋದರು. ಡಾಕ್ಟರ್‌ ಪ್ರೊಜೆಡ'೯ ಎಂಬು