ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಟ‌', ಕೇಸಲ್', ಕೇಡಲ್ ಮೊದಲಾದವರಿಗೂ ಕೃತಜ್ಞತಾಸೂಚಕವಾದ ವಂದನೆಗಳನ್ನ ಪಿ೯ ಸುವೆನು ಎಂದು ಹೇಳಿದನು. - ಶನಿವಾರದ ದಿನ ಶವಪರೀಕ್ಷೆ ನಡೆಯಿತು, ಮೆದುಳಿನಲ್ಲಿ ಸಣ್ಣ ಬೊಕ್ಕೆಗಳಿದ್ದು ಅವು ಗಳೊಳಗಿನಿಂದ ಕೀವಿನಂತಹ ಪದಾರ್ಥವೊಂದು ಹುಟ್ಟಿ, ಅದರಿಂದ ಅಲ್ಲಿಯ ಸಣ್ಣ ಪೊರೆಯೊಂ ದು ಕಪಾಲವನ್ನು ಅಂಟಿಕೊಂಡಿತ್ತು, ಹಾಗೆ ಆಗುವುದಕ್ಕೆ ಯಾವುದಾದರೂ ಪೂರ್ವದ ರೋಗವು ಕಾರಣವಿರಬಹುದೆಂದು ನಿಶ್ಚಯಿಸಿದರು, ಎದೆಯಲ್ಲಿಯೂ, ಶ್ವಾಸಕೋಶಗಳ ಇಯ, ಜಠರದಲ್ಲಿಯ ಯಾವ ವ್ಯಾಧಿಯೂ ಇರಲಿಲ್ಲ. ರಾಮಮೋಹನನು ಮತಾಚಾರ ನಿರ್ಬಂಧಗಳಿಗೆ ಒಳಪಟ್ಟು ನಡೆಯತಕ್ಕ ವನಲ್ಲವೆಂದು ನಮ್ಮ ವಾಚಕರು ಇದುವರೆಗೆ ತಿಳಿದುಕೊಂಡೇ ಇರುವರು, ಆದರೆ ತಾನು ಮತವನ್ನು ಪೂರ್ಣವಾಗಿ ಪ್ರತ್ಯಜಿಸಿದರೆ ತನ್ನ ಅನುಚರರು ಸುದಾ ಹಾಗೆಯೇ ಮಾಡುವರೆಂತಲೂ, ಆ ಪದ್ಧತಿಯು ಅವರಿಗೆ ಲಾಭಕರವಾಗಿ ಇರಲಾರದೆಂತಲೂ, ತನ್ನ ಸಂತತಿಯವರಿಗೆ ಪೂರ್ವಾ ರ್ಜಿತವಾದ ಅಧಿಕಾರಗಳು ನಶಿಸುವವೆಂತ ತಿಳಿದು, ಈತನು ಸಾಧ್ಯವಾದಮಟ್ಟಿಗೆ ವ್ಯವ ಹಾರಗಳಲ್ಲಿ ತನ್ನ ಮತವನ್ನು ಕಾಪಾಡಿಕೊಳ್ಳುತ್ತಲೇ ಬಂದನು, ಮರಣಾನಂತರದಲ್ಲಿ ಈತನ ಮೈಮೇಲಣ ವಸ್ತ್ರಗಳನ್ನು ತೆಗೆದುಹಾಕಿದಾಗ ಸುದಾ ಜನಿವಾರಗಳು ಇದ್ದುವು. ಇಂಗ್ಲೆಂಡಿಗೆ ಈತನು ಬಂದಾಗ ಸಂಗಡ ಬಂದವರಿಬ್ಬರಲ್ಲಿ ಒಬ್ಬ ನು ಬ್ರಾಹ್ಮಣನು ; ಸ್ವಲ್ಪ ಕಾಲಕ್ಕೆ ಮುಂಚೆ ಹೇರ್' ಮೊದಲಾದ ಸ್ನೇಹಿತರ ಸಂಗಡ ಆತನು ನಾನು ಇಂಗ್ಲೆಂಡಿನ ಲ್ಲಿಯೇ ಮೃತಿಹೊಂದಿದರೆ ನನ್ನ ಶವವನ್ನು ಸಾಧಾರಣಸ್ಥಳದಲ್ಲಿಡದೆ ಕ್ರಿಸ್ತಿಯರ ಮತಾ ಚಾರಪದ್ಧತಿಗಳನ್ನ ವಲಂಬಿಸದೆ, ಎಲ್ಲಿಯಾದರೂ ಪ್ರತ್ಯೇಕವಾದ ಸ್ಥಳದಲ್ಲಿ ಸ್ವಲ್ಪ ಭೂಮಿ ಯನ್ನು ಕೊಂಡುಕೊಂಡು, ಅಲ್ಲಿ ಸಮಾಧಿಮಾಡಿ, ಅದರಮೇಲೆ ಒಂದು ಸಣ್ಣ ನುಂದಿ ರವನ್ನು ಕಟ್ಟಿಸಿ, ಅದರಲ್ಲಿ ಮರಾದೆಯುಳ್ಳ ಬಡವನೊಬ್ಬನನ್ನು ಇರಿಸಿ, ಆ ಸಮಾಧಿ ಯನ್ನು ಕಾಪಾಡುತ್ತ ಬರುವಂತೆ ಮಾಡಿರಿ ' ಎಂದುಹೇಳಿದ್ದನು. ಆದುದರಿಂದ ಆತನ ಸ್ನೇಹಿತರೆಲ್ಲರೂ ಅದೇ ಅಭಿಪ್ರಾಯವನ್ನನುಸರಿಸಿ ಪ್ರವರ್ತಿಸುವುದಕ್ಕೆ ನಿಶ್ಚಯಿಸಿಕೊಂಡು ಪ್ರತ್ಯೇಕ ಸ್ಥಳಕ್ಕಾಗಿ ಪ್ರಯತ್ನ ಮಾಡುತ್ತಲಿದ್ದರು, ಅಷ್ಟರಲ್ಲಿ ಮಿಸ್‌ ಕ್ಯಾಸಲ' ಎಂಭಾ ಕೆಯು ಸ್ಥಳದ ನಿಮಿತ್ತವಾಗಿ ಅವರು ಶ್ರಮಪಡಬೇಕಾದ ಅಗತ್ಯವಿಲ್ಲದಂತೆ ತನ್ನ ಭವ ನದ ಹಿಂದೆ ಇರುವ ತೋಟದಲ್ಲಿ ಕೆಲವು ವೃಕ್ಷಗಳ ಕೆಳಗೆ ಇದ್ದ ಒಂದು ಉತ್ತಮ ದೇಶವನ್ನು ಕೊಟ್ಟಳು, ಅದಕ್ಕಾಗಿ ಆತನಸ್ನೇಹಿತರೆಲ್ಲರೂ ತುಂಬ ಸಂತೋಷಿಸಿ ಅಕ್ಟೋ ಬರ 18 ನೆಯ ದಿನ ಹಗಲು ಎರಡುಗಂಟೆಯವೇಳೆಯಲ್ಲಿ ಆ ಮಹಾತ್ಮನ ಭೌತಿಕ ಶರೀ ರವನ್ನು ಇವರ ಮತಾಚಾರ ಪದ್ಧತಿಗಳುಯಾವುವನ್ನೂ ಅವಲಂಬಿಸದೆಯೇ ಹೂತಿಟ್ಟರು. ಅ ಸಮಾಚಾರವನ್ನು ವಿಶದವಾಗಿ ತಿಳಿದುಕೊಳ್ಳುವುದಕ್ಕೆ ಮರಳಿ ಒಂದುಸಾರಿ ಈಸ್ಟ್ರ್ಲಿ ಯವರ ದಿನಚರೈಯ ಪುಸ್ತಕವನ್ನು ನಾವು ನೋಡೋಣ. 1833ನೆ ವರುಷದ ಆಕ್ಟೋಬರ' 18ನೇ ತಾರೀಖು ಶುಕ್ರವಾರ ಸ್ಟೀಪರ್ಲ್ಬಗೋ 15