ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ವಿನಲ್ಲಿ ಬಾಲನಾದ ರಾಜಾರಾಂ, ಮಿಸ್‌ ಹೇರಳ, ಮಿಸ್ ಕೇಡಲ್, ಮಿಸ್ಟರ' ಜೋಸ'ಹೇರ್' ಮಿಸ್ಟರ ರ್ಜಾ ಹೇರ್, ಮಿಸ್ ಕಾರ್ಪೆಂಟರ್, ನನ್ನ ತಾಯಿ, ನಾನು, ಹಂರ್ಟಿ ಸಕೇಲ್ ಮಿಸೆಸ' ಲೇಲೀಸ್ಮಿತಿ', ನನ್ನ ಭಾಗ್ಯ, ಮಿಸ' ಈಡಾಸ', ಮಿಸ್' ಫಾಸ್ಪರ, ಡಾಕ್ಟರ' ಜೇರಾ ಡ'೯, ಮಿಸ್ಟರ ಕೋರ್, ಮಿಸ್ಟರ' ಫಾಸ್ಪರ, ಮಿಸ್ಟರ' ಕೇಡಲ್, ಮಿಸ್ಟರ' ಬೇಸಾಡ್ ಡ್ರೆಸ್‌, ರಾಂರತ್ನ, ರಾಂಕರಿ ಮೊದಲಾದವರೆಲ್ಲರೂ ಸೇರಿದೆವು. ಸುಮಾರು ಒಂದೂವರೆ ಗಂಟೆಗೆ ದ್ರಾವಕಗಳಿಂದ ಕೆಡದಂತೆ ಕಾಪಾಡಿದ್ದ ರಾಮಮೋಹನನ ಕಳೇಬರವನ್ನಿಟ್ಟಿದ್ದ ಪೆಟ್ಟಿಗೆಯನ್ನು ಹೊರಕ್ಕೆ ತಂದಿಟ್ಟರು, ಹಿಂದೆ ಬರುತ್ತಲಿದ್ದವರೆಲ್ಲರೂ ದುಃಖ ಸೂಚಕಗ ಳಾದ ವಸ್ತ್ರಗಳನ್ನು ಧರಿಸಿದ್ದರು. ಆ ಪೆಟ್ಟಿಗೆಯನ್ನು ಹೂಳಿಡುವುದಕ್ಕೆ ನಿಯಮಿಸಲ್ಪಟ್ಟ ಸ್ಥಾನಕ್ಕೆ ತೆಗೆದೊಯ್ದು, ಅಲ್ಲಿ ಇಟ್ಟಿಗೆಗಳಿಂದ ಕಟ್ಟಿಸಿದ ಸಮಾಧಿಯಲ್ಲಿ ಅದನ್ನು ಇಳಿಸಿ ದರು, ಹಿಂದೆ ಇದ್ದ ಜನರ ರೋದನಗಳು ಹೊರತಾಗಿ ಹೈಸ್ತ ಮತಾಚಾರದ ಪದ್ದತಿಗಳು ಯಾವುವೂ ಅಲ್ಲಿ ಜರುಗಿಸಲ್ಪಡಲಿಲ್ಲ. ಮುಖ್ಯವಾಗಿ ರಾಮಹರಿ ಎಂಬವನ ದುಃಖವು ಅನಿವಾರವಾಗಿದ್ದಿತು. ಆಗಿನ ವೃತ್ತಾಂತಗಳು ತುಂಬ ಪರಿತಾಪಕರಗಳಾಗಿದ್ದುವು. ಡಾಕ್ಟರ ಕಾರ್ನೆ೦ಟರು ಅಲ್ಲಿದ್ದವರ ಮುಖಗಳನ್ನು ನೋಡಿ, ನನ್ನ ಸ್ನೇಹಿತನು ಅಪೇಕ್ಷಿ ಸಿದ್ದಂತೆಯೇ ನಡೆಸಿರಿ ಎಂದು ಹೇಳಿ ಆ ವಿಷಯವಾಗಿ ಅದುವರೆಗೆ ರಚಿಸಿ ತಂದಿದ್ದ ಕೆಲವು ಪದ್ಯಗಳನ್ನು ಅಲ್ಲಿ ಓದಿದನು, ಅನುತಾಪಕರಗಳಾದ ಈ ಪದ್ಯಗಳು ಮಿಸ್ ಕಾರ್ಪೆಂಟರು ಬರೆದಿರುವ ಗ್ರಂಥದಲ್ಲಿ ವೆ, ಆ ತರುವಾಯ ಮಿಸ್ಟರ' ರ್ಚಾ ಹೇರನು ರಾಮರತ್ನನ ಸಂ ಗಡ ನೀನು ಹಿಂದೂದೇಶಕ್ಕೆ ಹೋದಮೇಲೆ ನಮ್ಮ ರಾಜಾರಾಮಮೋಹನನ ಮಿತ್ರಕ ಸಂಗಡಲೂ, ಕುಟುಂಬದವರ ಸಂಗಡ ಆತನು ಪ್ರತ್ಯೇಕವಾಗಿ ಒಂದು ಪ್ರದೇಶದಲ್ಲಿ ಸಮಾಧಿಮಾಡಲ್ಪಟ್ಟಿರುವನಂತಲೂ ಸಮಾಧಿಮಾಡುವ ಕಾಲದಲ್ಲಿ ಇತರ ಮತಪ್ರಚಾರಗಳು ಯಾವುವೂ ಜರುಗಲಿಲ್ಲವೆಂತಲೂ ಹೇಳು ಎಂದನು, ಸಮಾಧಿಯನ್ನು ಮುಚ್ಚಿದಮೇಲೆ ನಾವೆಲ್ಲರೂ ನಮ್ಮ ಮನೆಗಳಿಗೆ ಮರಳಿ ಬಂದೆವು. ಇಂಗ್ಲೆಂಡಿನಲ್ಲಿ ರಾಮಮೋಹನಸಿಗೆ ಪರಿಚಿತರಾದ ಪ್ರೀಪುರುಷರಲ್ಲಿಯೂ ಆತನ ಅಭಿಪ್ರಾಯಗಳು, ಆತನ ಜೀವಿತದ ಪರಮಾರ್ಥ ಗಳು, ಮಿಸ್‌ ಮೇರಿ ಕಾರ್ಪೆಂಟರ ವಿಷಯ ವಾಗಿ ತುಂಬ ಫಲಕಾರಿಗಳಾದುವು. ಆ ಸಾಧೀಮಣಿಯು ತನ್ನ ಜೀವಿತಕಾಲವನ್ನೆಲ್ಲ ಪ್ರಕಾರಗಳನ್ನು ಮಾಡುವುದರಲ್ಲಿಯೇ ಕಳೆದಳು, ಬಡವರ ಹುಡುಗರನ್ನೂ, ಅನಾಥ ಶಿಶುಗಳನ್ನೂ, ಕರೆತಂದು ಕಾಪಾಡುತ್ತಲಿದ್ದುದೇ ಈಕೆಯು, ತನ್ನ ಜೀವಿತದಲ್ಲಿ ಮೂಡಿದ ಮುಖ್ಯ ಕಾರವು, ಈ ವಿಷಯದಲ್ಲಿ ಈಕೆಯು ಮಾಡಿದಷ್ಟು ಮಹೋಪಕಾರವನ್ನು ಇದುವರೆಗೆ ಯಾರೂ ಮಾಡಲಿಲ್ಲ, ದಯಾಶಾಲಿನಿಯದ ಈ ಅಬಲಾರತ್ನ ವು ರಾಮ ಮೋಹನನ ಸ್ತ್ರೀಜಾತ್ಯಭಿಮಾನವನ್ನು ನೋಡಿ, ಆತನು ಹಿಂದೂದೇಶದಲ್ಲಿ ಸ್ತ್ರೀಯರಿಗೆ ಮಾಡಿದ ಮಹೋಪಕಾರಗಳನ್ನು ಕೇಳಿ, ತನಗೆ ಕೂಡ ಹಿಂದೂಸ್ತ್ರೀಯರಮೇಲೆ ಅಭಿಮಾನ ಹುಟ್ಟಿದ್ದರಿಂದ ಎರಡುಸಾರಿ ಇಂಡಿಯಾದೇಶಕ್ಕೆ ಬಂದು ಇವರ ದುರವಸ್ಥೆಗಳನ್ನು ತೊಲಗಿ