ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರ್h ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಅಂತಹ ಲೋಕಬಾಂಧವನು ಈ ದಿನದಲ್ಲಿಯೇ ಅಸ್ತಮಿಸಿದನು, ಅಕ್ಕಟಾ ! ದುರ್ದಶೆ ಯನ್ನು ಹೊಂದಿರುವ ಓ ಹಿಂದೂ ಮಾತೆಯೇ ! ನಿನ್ನ ಪ್ರಜೆಗಳ ಸೌಖ್ಯಕ್ಕೆ ಆಧಾರವಾದ ಮರವು ಈ ದಿನದಲ್ಲಿಯೇ ಮುರಿದುಬಿದ್ದು ಹೋಯಿತಲ್ಲವೆ ? ಕೂರವಾದ ದೈವದ ಕೃತ್ಯವೇ ನೆಂದು ಹೇಳಬಹುದು ? ದುಃಖಿಸುವುದರಿಂದ ಯಾವ ಲಾಭವೂ ಇಲ್ಲ ಪ್ರಕೃತಿಸಂಬಂಧದ ದೆಸೆಯಿಂದ ನಾವು ವಿಚಾರಪಟ್ಟರೂ ನಮ್ಮ ಕಥಾನಾಯಕನ ನಿರ್ಮಲಕೀರ್ತಿದ್ಯುತಿಯು ಒಂದುವೇಳೆಯಾದರೂ ಮರೆಯಾಗತಕ್ಕದ್ದಲ್ಲ, ಆತನ ಭೌತಿಕ ದೇಹವು ನಶಿಸಿದರೂ, ದೇಶ ಕ್ಷೇಮವನ್ನು ಕುರಿತು ಆತನ ಹೃದಯದಲ್ಲಿ ಯಾವಾಗಲೂ ನೆಲೆಗೊಂಡಿದ್ದ ಅಭಿಪ್ರಾಯಗ ಇನ್ನು ತಿಳಿಸುವ ದಿವ್ಯವಾಕ್ಯಗಳು ನಶಿಸದೆ ಇಂದಿಗೂ ಗ್ರಂಧರೂಪವಾಗಿ ಉದ್ಯೋಪಿಸುತ್ತ ಆತನನ್ನು ನಮ್ಮ ಹೃದಯಸೀಠದಲ್ಲಿ ಅಧಿವಸಿಸುತ್ತಿರುವಂತೆ ಮಾಡಿ ನನಗೆ ಘನವಾದ ಸನಾ ರ್ಗಗಳನ್ನೂ ನೀತಿವರ್ತನವನ್ನೂ ಮನುಷ್ಯ ಸ್ವಾತಂತ್ರ ವನ್ನೂ ಬೋ ಧಿಸುತ್ತಾ ಆಚಂದ್ರಾ ರ್ಕವಾಗಿ ಸುಸ್ಥಿರಗಳಾಗಿವೆ.' ರಾಮಮೋಹನರಾಮನು ತನ್ನ ಜೀವಿತಕಾಲದಲ್ಲಿ ನಗಿಸಿದ ಕಾರಗಳಿಗಾಗಿ ಮುಂದಿನ ತಲಾಂತರದ ಜನಗಳು ಬಹಳಾಗಿ ಸಂತೋಷಿಸಿ ತನಗೆ ಕೃತಜ್ಞರಾಗಿ ಇರುವರೆಂದು ನಂಬಿ ದನು, ಆದರೆ ಈಗಿನತನಕ ನಮ್ಮಗಳಿಂದ ಅಂತಹ ಪ್ರತ್ಯಕ್ಷನಿದರ್ಶನವಾವುದೂ ತೋರದೆ ಹೋಗಿದೆ, ಅದೃಷ್ಟವಶದಿಂದ ದ್ವಾರಕಾನಾಥರಾ ಕೊರವರು ಇಂಗ್ಲೆಂಡಿಗೆ ಹೋಗಿ ಆತನ ಸಮಾಧಿಯನ್ನು ಮಾತ್ರ ನೆಟ್ಟಗೆ ಮಾಡಿಸಿಬಂದರು, ಆದರೂ ಎಲೆ ಹಿಂದೂ ಸಹೋದರರೇ ! ಹಿತಚಿಂತಕರ ಜ್ಞಾಪಕಾರ್ಥವಾಗಿ ಅವರವರ ಸ್ವರೂಪವಿಗ್ರಹಗಳನ್ನು ಸ್ಥಾಪಿಸುವುದೇ ಮೊದಲಾದ ಕಾರ್ಯಗಳಿಗೆ ಮುಂದಾಳುಗಳಾಗಿ ನಿಲ್ಲತಕ್ಕ ನೀವು ರಾಜಾರಾಮಮೋಹನರಾಯನ ಪ್ರತಿಮೆಯೊಂದನ್ನು ಮಾಡಿಸಿ ಲಾರ್ಡ್ ಎಲ್ಲಿಯಂ ಬೆಂಟಿಂಕ್ ರವರ ಪ್ರತಿಮೆಗೆ ಬಲಗಡೆಯಲ್ಲಿ ಪ್ರತಿಷ್ಠಿ ಸಲಾರಾ ? - ದೇಶವಾಸಿಗಳಾದ ಮಹಾ ಕವಿಗಳಿರಾ ! ಪ್ರವಾಹಗಳಂತೆ ಹರಿದು ಬರುತ್ತಿರುವ ನಿಮ್ಮ ವಾಗಮೃತಧಾರಾ ನಿಷೇವಣದಿಂದ ದೇಶಾಭಿಮಾನಿಗಳ ಹೃದಯಗಳು ಸದಯದಿಂದ ಕರಗುವಂತೆ ನಿಮ್ಮಗಳ ಕವಿತಾನೈಪುಣ್ಯವನ್ನು ಹೊರಪಡಿಸಿ, ನಮಗೆ ಮಹೋಪಕಾರಗಳನ್ನು ಮಾಡಿ ನಮ್ಮನ್ನು ರುಣಿಗಳನ್ನಾಗಿ ಮಾಡಿ ಗತಿಸಿದ ರಾಮಮೋಹನನ ಪವಿತ್ರವಾದ ಜೀ ವನ ಚರಿತ್ರೆಯನ್ನು ನಿಮ್ಮ ದೇಶಭಾಷೆಗಳಲ್ಲಿ ಬರೆದು ಸ್ವಲ್ಪಮಟ್ಟಿಗಾದರೂ ಗುಣಭಾಗವನ್ನು ತೀರಿಸಿಕೊಳ್ಳಲಾರಿರಾ ? ಮಿತ್ರರತ್ನ ಗಳೆನಿಸಿದ ವಾಚಕಮಹಾಶಯರೇ ! ಯಾವನು ಹಿಂದೂದೇಶದವರ ದುಸ್ಟಿ ತಿಗಳನ್ನು ಕ್ರಮಪಡಿಸುವುದಕ್ಕೆ ತನ್ನ ಶರೀರವನ್ನೂ, ಬುದ್ಧಿಯನ್ನೂ, ಧನವನ್ನೂ, ಅರ್ಪಿಸಿ ದನೆ, ಯಾವನು ಮನುಷ್ಯಾಭಿವೃದ್ಧಿಗೆ ಯುಕ್ತವಾದ ಸೇವೆಯೇ ಈಶ್ವರಭಕ್ತಿಗೆ ನಿದರ್ಶನ ಎಂಬ ನೀತಿಯನ್ನನುಸರಿಸಿ, ಘನತೆಯುಳ್ಳವರಲ್ಲಿ ಘನಮಹಿಮನೆನಿಸಿಕೊಂಡು, ಮಹಾಕಾರಗ ಛನ್ನೆಲ್ಲ ತಲೆಯಮೇಲೆ ಹಾಕಿಕೊಂಡು ನಿರ್ವಹಿಸಿದನೋ, ಯಾವನ ವಾಕ್ಯಗಳನ್ನು ಅಮೆ