ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ತ್ರಿಗೆ ಒಂದು ತೆಂಗಿನಗೊನೆಯನ್ನು ತರಿಸಿ ಕೊಟ್ಟನೆಂತಲೂ, ಆ ಗುತ್ತಿಯೊಳಗಣ ಕಾಯಿಗಳ « ಆತನು ಆಗಲೇ ಅಲ್ಲಿಯೇ ತಿಂದುಬಿಟ್ಟನೆಂತಲೂ, ಹೇಳುವರು, ಆತನಿಗೆ ಶರೀರಾ ರೋಗ್ಯವೂ, ದೇಹಬಲವೂ, ನೆಟ್ಟಗೆ ಇಲ್ಲದಿದ್ದರೆ ಹದಿನಾರು ವರ್ಷಗಳ ವಯಸ್ಸಿನಲ್ಲಿಯೇ ಕ್ರೂರಸತ್ವಶರಣ್ಯಗಳಾದ ಅರಣ್ಯಗಳಲ್ಲಿ ಸ್ವಲ್ಪವೂ ಹೆದರದೆ, ಟಿಬೆಟ್‌ ದೇಶಕ್ಕೆ ಹೇಗೆ ಹೋಗಿರ ಬಲ್ಲನು ? ಮತ್ತು ಆತನ ದೇಹಬಲವು ಅಮೇಯವಾಗಿಯ, ಅನುಪಮಾನವಾಗಿಯೂ ಇರ ದಿದ್ದರೆ ಅಷ್ಟೊಂದು ಘನಕಾರಗಳನ್ನು ಹೇಗೆ ನಿರ್ವಹಿಸಲಿಕ್ಕೆ ಸಮರ್ಥನಾಗಿದ್ದಾನು ? ದೇಹಾರೋಗ್ಯವೂ, ಒಲವೂ, ಇಲ್ಲದ್ದರ ದೆಸೆಯಿಂದಲೇ ನಮ್ಮ ಜನಾಂಗದ ಸ್ಥಿತಿಯು ದಿನ ದಿನಕ್ಕೂ ಕ್ಷೀಣವಾಗುತ್ತ ಬರುತ್ತಲಿದೆ. ದೊಡ್ಡ ದೊಡ್ಡ ಸಕಲ ಕಲಾನಿಲಯಗಳಲ್ಲಿಯ ವಿದ್ಯಾರ್ಥಿಗಳು ದೇಹೌರೋಗ್ಯ ಒಲಾಭಿವೃದ್ಧಿ ಗಳಲ್ಲಿ ಶ್ರದ್ಧೆಯನ್ನು ತೆಗೆದುಕೊಳ್ಳದೆ ಇರುವುದ ರಿಂದ ಅವರು, ಒಂದೇಸಾರಿಗೆ B, A, ಪರೀಕ್ಷೆಯಲ್ಲಿಯಾಗಲೀ NI A, ಪರಿಕ್ಷೆಯಲ್ಲಿಯಾ ಗಲೀ ಉತ್ತೀರ್ಣರಾಗುವದು ದುರ್ಘಟಕಾಧ್ಯವೆಂದು ಭಾವಿಸುತ್ತಿರುವರು. ಮುಂದೆ ಆ ಮೆಟ್ಟಿಲನ್ನು ದಾಟುವ ವೇಳೆಗೆ ಅವರು ಶಲ್ಯಾವಶೇಷರಾಗಿ ತೂರಾಡಿಕೊಂಡು ಈಚೆಗೆ ಬರು ವರು, ಇಂತವರು ತಮಗಾಗಲಿ ತಮ್ಮ ದೇಶಕ್ಕಾಗಲಿ ಯಾನ ಉಪಕಾರಗಳನ್ನು ಮಾಡ ಬಲ್ಲರು ? ರಾಮಮೋನನ ವಿಜಯಕ್ಕೆ ಆತನ ದೇಹವಾರ್ಥವೇ ಮುಖ್ಯ ಕಾಗಣ, ಕಲ್ಯ ಯಲ್ಲಿ ವಿಗ್ರಹಾರಾಧನೆಯು ಸಿರಲನದ ನಿಮಿತ್ತವಾಗಿ ಆತನು ವಾಗ್ರಣದುಂದುಭಿಯನ್ನು ಮೊಳಗಿಸುತ್ತಿರುವಾಗ, ಕೆಲವರು ದೊಡ್ಡ ಮನುಷ್ಯರು ಬಂದು ಸಾಕಾರಪೂಜೆಯನ್ನು ಎತ್ತಿ ಹಾಕಿ ನಿರಾಕರೋಪಾಸನೆಯನ್ನು ಕುರಿತು ಪ್ರಜೆಗಳಿಗೆ ಬೋಧಿಸುವುದರಿಂದ ವಿಗ್ರಹಾರಾ ಧಕ ಪಕ್ಷದವರು ಅಸೂಯಾಗ್ರಸ್ತರಾಗಿ ನಿಮ್ಮನ್ನು ಹೊಡೆಯಲಿಕ್ಕೆ ಯತ್ನಿ ಸುತ್ತಿದ್ದಾರೆಂದು ಹೇಳಿದರು, ಅದಕ್ಕಾತನು ನಕ್ಕು, ಏನದು ? ನನ್ನನ್ನು ಹೊಡೆಯುವರೆ ? ಅವರೇನು ಭೋಜನ ಮಾಡುವರು ? ಎಂದು ಪ್ರತ್ಯುತ್ತರವಿತ್ತನಂತೆ ! ವಿದ್ಯೆ, ಜ್ಞಾನ. ನಮ್ಮ ವಾಚಕರು ರಾಮಮೋಹನನ ವಿದ್ಯಾವಿಶಾರದತ್ವವನ್ನೂ , ಪ್ರತಿಭಾ ಸಂಪನ್ನ ತೆಯನ್ನೂ ಅಖಂಡಜ್ಞಾನಸಂಪೂರ್ಣತೆಯನ್ನೂ ಕುರಿತು ಇದುವರೆಗೆ ಬಹುಮಟ್ಟಿಗೆ ತಿಳಿದು ಕೊಂಡೇ ಇರುವರು. ಆದರೂ ಇಲ್ಲಿ ಕೂಡ ಸ್ವಲ್ಪ ವಿವರಿಸಿರುವೆವು. ಪಂಡಿತ ವಿದ್ಯಾಸಾಗರನು ವಂಗದೇಶದ ಇತಿಹಾಸದಲ್ಲಿ ಹೀಗೆಂದು ಬರೆದಿರುವನು ; « ರಾಮಮೋಹ ನನು ಸಂಸ್ಕೃತ, ಅರಬ್ಬಿ, ಫಾರಸೀ, ಉರ್ದು, ಬಂಗಾಳಿ, ಇಂಗ್ಲಿಷ್, ಗ್ರೀಕ್, ಲ್ಯಾರ್ಟಿ, ಫ್ರೆಂಚ್, ಹೀಬ, ಎಂಬೀ ಹತ್ತು ಭಾಷೆಗಳಲ್ಲಿ ಚೆನ್ನಾಗಿ ಬರೆಯಲಿ ಹೂ ಓದಲಿಕ್ಕೂ, ಒಲ್ಲವನಾಗಿದ್ದನು, ಈ ಭಾಷೆಗಳಲ್ಲಿ ಪುರಾತನ ನೂತನ ಗ್ರಂಥ ವಿಷ ವಿಶೇಷಗಳನ್ನೆಲ್ಲಾ ಆತನು ತಿಳಿದುಕೊಂಡಿದ್ದನು, ಸೀಮೆಯಲ್ಲಿನ ಪ್ರಮುಖರು ಪ್ರಕೃತಿ ಕಸ್ಮಜ್ಞಾನದಲ್ಲಿಯ, ನಾನಾ ಒದ್ಯೆಗಳಲ್ಲಿಯೂ, ವಾಚಕನೆ ಪುಣ್ಯ