ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ 94 ರಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಇದು ನಡೆದ ಕೆಲವು ದಿನಗಳ ತರುವಾಯ ಕಾಶೀನಾಥತರ್ಕಪಂಚಾನನನೆಂಬ ಪ್ರಸಿದ್ಧ ಪಂಡಿತನು ಧರ್ಮಸ್ಥಾಪನಾಭಿಲಾಷಿ” ಎಂಬ ಹೆಸರಿನಿಂದ ಕೆಲವು ಪ್ರಶ್ನೆಗಳನ್ನು ಬರೆದು ಒಂದು ವರ್ತಮಾನಪತ್ರದಲ್ಲಿ ಪ್ರಚುರಿಸಿದನು, ಆ ಪ್ರಶ್ನೆಗಳಿಗೆಲ್ಲಾ ರಾಮಮೋಹನನು ತಕ್ಕ ಉತ್ತರಗಳನ್ನು ಬರೆದು ಪ್ರಕಟಿಸಿದನು, ಅದರಮೇಲೆ ರಾಮಮೋಹನನ ವಿರೋಧಿ ಯಾದ ತಾಕೂರ್'ನಂದಲಾಲ್ ಎಂಬುವನು ಆ ಪಂಡಿತನನ್ನು ತುಂಬ ಪ್ರೋತ್ಸಾಹಪಡಿಸಿ, ಆತನಿಂದ ತನ್ನ ಪ್ರಥಮಪ್ರಶ್ನೆಗಳಿಗೆ ರಾಮಮೋಹನನು ಕೊಟ್ಟ ಉತ್ತರಗಳನ್ನು ಆಕ್ಷೇಪಿಸ ತಕ್ಕ ಪಾಷಂಡಪೀಡನ' ಎಂಬ 225 ಪುಟಗಳ ಗ್ರಂಧವನ್ನು ಬರೆಯಿಸಿ, ಪ್ರಚುರಪಡಿಸಿದನು. ಈ ಗ್ರಂಥದಲ್ಲಿ ರಾಮಮೋಹನನ ಉದ್ದೇಶಗಳು ಶ್ರುತಿಸ್ಮೃತಿಪುರಾಣಗಳಿಂದ ಖಂಡಿಸಲ್ಪಡದೆ ಇದ್ದರೂ ಅವನು ಪಾಷಂಡನೆಂತಲೂ, ನಗರಾಂತವಾಸಿಯೆಂತಲೂ, ಇವೇ ಮೊದಲಾದ ನೀಚ ವಾಕ್ಯ ಪರಂಪರೆಯಿಂದಲೇ ಪ್ರತಿಪುಟವೂ ತುಂಬಿದ್ದಿತು, ರಾಮಮೋಹನನು ಇದಕ್ಕೆ ಪ್ರತ್ಯು ತರವಾಗಿ ಪಧಪ್ರದಾನ' ಎಂಬ ಹೆಸರಿನಿಂದ ಒಂದು ಗ್ರಂಧವನ್ನು ಪ್ರಚುರಿಸಿದನು. ಇದ ರಲ್ಲಿ ಆತನು ತನ್ನ ಪ್ರತಿಪಕ್ಷದವರ ಆಕ್ಷೇಪಣೆಗಳಿಗೆ ಕ್ರಮವಾದ ಖಂಡನೆಗಳನ್ನು ಬರೆದು ದಲ್ಲದೆ ಅವರಂತೆ ದುರಾಲಾಪಗಳನ್ನು ತೋರಿಸದೆ ಬಹಳ ಸೈರಣೆಯಿಂದ ಅಲ್ಲಲ್ಲಿ ದ್ವಂದ್ವಾರ್ಥ ಗಳನ್ನು ಕೊಡುವ ಮೃದುವಾಕ್ಯಗಳಿ೦ದ ತನ್ನ ಅಸಮ್ಮತಿಯನ್ನು ಮಾತ್ರ ತೋರಿಸಿದನು. ಹೀಗೆ ತನ್ನ ಮೇಲೆ ಪಂಡಿತರು ಮಾಡುತಲಿದ್ದ ಕುತರ್ಕಗಳೆಲ್ಲಕ್ಕೂ ಶ್ರುತಿಸಮ್ಮತವಾದ ಪ್ರತ್ಯುತ್ತರಗಳನ್ನು ಕೊಡುತ್ತ, ಗ್ರಂಧಗಳನ್ನು ಬರೆಯುತ್ತ, ಎದುರಿಗೆ ಚರ್ಚಿಸುವಾಗ ಸುದಾ ಅವರ ಬಳಿಯಲ್ಲಿ ಮರಾದೆಯನ್ನೇ ತೋರಿಸುತ್ತಾ, ತನ್ನ ವಿದ್ಯಾ ವಿಜಯಛೇರಿಯ ಧ್ವನಿಯನ್ನು ಮತ್ತಷ್ಟು ಮುಗಿಲುಮುಟ್ಟುವಂತೆ ವಿವಾದಕಾಲದಲ್ಲಿ ಬರೆಯಲ್ಪಟ್ಟ ಪೂರೊಗ್ರಂಥ ಗಳಲ್ಲದೆ ಮತ್ತೆ ಕೆಲವು ಗ್ರಂಥಗಳನ್ನು ಬರೆದನು, ಅವುಗಳ ವಿವರಣೆಯನ್ನು ಇಲ್ಲಿ ಸಂಗ್ರಹ ವಾಗಿ ತಿಳಿಸುವೆವು. 1 ಬ್ರಹ್ಮನಿಷ್ಠೆ, ಗೃಹಸ್ಥ ಲಕ್ಷಣ-ಇದು ಗೃಹಸ್ಥನಾದಮೇಲೆ ಬ್ರಹ್ಮಪಾಸನೆ ಯನ್ನು ಹೇಗೆ ಮಾಡಬೇಕೆಂಬ ವಿಷಯವನ್ನು ಕುರಿತು ಬರೆಯಲ್ಪಟ್ಟಿರುವುದು, ಇದು ಶಾಲೀ ವಾಹನಶಕೆ 1747 ರಲ್ಲಿ ಮುದ್ರಿತವಾಯಿತು. 2 ಗಾಯತ್ರೀಪರಮೋಪಾಸನಾ ವಿಧಾನೆ--ಇದರಲ್ಲಿ ವೇದಾಧ್ಯಯನದ ಆವಶ್ಯಕ ವಿಲ್ಲದೆ ಗಾಯತ್ರಿಯನ್ನೇ ಉಪಾಸಿಸಬಹುದೆಂಬ ಅಂಶವು ಹಲವು ಕಾರಣಗಳಿಂದ ದೃಢಪಡಿಸ ಲ್ಪಟ್ಟಿದೆ. ಇದು ಸಂಸ್ಕೃತದಲ್ಲಿಯೂ ಬಂಗಾಳಿಭಾಷೆಯಲ್ಲಿಯೂ ಬರೆಯಲ್ಪಟ್ಟಿದೆ, 1827 ರಲ್ಲಿ ಇದರ ಇಂಗ್ಲೀಷು ಭಾಷಾಂತರದ ಪ್ರತಿಯು ಮುದ್ರಿಸಲ್ಪಟ್ಟಿತು. 3 ಗಾಯತ್ರಿಯ ಅರ್ಥ-ಇದರಲ್ಲಿ ಎರಡು ಭಾಗಗಳಿವೆ. 1 ಉಪೋದ್ಘಾತ, 2 ಗ್ರಂಧ, ಇದರಲ್ಲಿ ಬ್ರಾಹ್ಮಣುಂದ ಜಪಿಸಲ್ಪಡುತ್ತಿರುವ ಗಾಯತ್ರಿಮಂತ್ರವು ಬ್ರಹ್ಮ ಪಾಸನೆಯನ್ನೇ ಬೋಧಿಸುವುದೆಂಬ ಅರ್ಧವನ್ನು ಸ್ಪಷ್ಟ ಪಡಿಸಿದೆ. 4 64ನುಘಾ .ಇದರಲ್ಲಿಯ ಮೇಲಿನ ಗ್ರಂಧದಂತೆ 2 ಭಾಗಗಳಿವೆ. ಇದರಲ್ಲಿ