ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨# ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಮಾನವನ್ನೆಲ್ಲ ಕೇಳಿ, - ನೀವು ಆತುರಪಡಬೇಡಿ, ಇಷ್ಟು ಗಟ್ಟಿಯಾಗಿ ಏತಕ್ಕೆ ಕೂಗಿಕೊಳ್ಳ ಬೇಕು, ನಿಮ್ಮ ಅಂಗವಸ್ತ್ರವನ್ನು ನಾನು ತರಿಸಿಕೊಡುವೆನು ಸೈರಿಸಿ ' ಎಂದು ಹೇಳಿ ಆ ತೋಟಗಾರನನ್ನು ಗದರಿಸಿ, ವಸ್ತ್ರವನ್ನು ಬ್ರಾಹ್ಮಣನಿಗೆ ಕೊಡಿಸಿ ಅವನ ಸಂಗಡ ಹೀಗೆ ಸಂಭಾಷಿಸಿದನು:- ರಾಮ- ಏನು ಸ್ವಾಮಿಾ, ಈಗ ಸಂತೋಷವಾಯಿತೆ ? - ಬ್ರಾಹ್ಮ -ನನ್ನ ವಸ್ತ್ರವನ್ನು ನನಗೆ ಕೊಡಿಸಿದ್ದರಿಂದ ಸಂತೋಷಪಡಬೇಕಾದುದೇನಿದೆ? - ರಾಮ-ನಿನಗೆ ಸಂತೋಷಕ್ಕೆ ಅವಕಾಶವೇ ಇಲ್ಲವೇ? ಪಾಪ ! ಹಾಗಾದರೆ ನಿನ್ನ ಕೈಯಲ್ಲಿರುವ ಹೂವುಗಳನ್ನು ಇಲ್ಲಿಂದ ಕೊಯ್ದು ಕೊಂಡು ಹೋಗುವದಾದರೂ ನಿನಗೆ ಸಂತೋಷಪ್ರದವಲ್ಲವೋ ? ಬ್ರಾಹ್ಮ -.-ಅದೂ ಅಲ್ಲ, ಈ ಹೂಗಳನ್ನು ನಾನು ಅಲಂಕರಿಸಿಕೊಳ್ಳುವೆನೆ ? ದೇವರ ಪೂಜೆಗಲ್ಲವೆ ಇದನ್ನೊ ಯ್ಯುವ್ರದು ? ರಾಮ- ಈ ಪುಷ್ಪಗಳಿಂದ ದೇವರನ್ನು ಪೂಜಿಸಿದರೆ ಅವನು ಸಂತೋಷಪಡುವನೆಂದು ನಂಬುತ್ತೀಯೋ ? ಬ್ರಾಹ್ಮ--ಹೌದು, ನಂಬುವೆನು. ರಾಮದೇವರು ನಿನ್ನ ಪೂಜೆಗೆ ಸಂತೋಷಪಟ್ಟರೆ ಅದು ನಿನಗೆ ಸಂತೋಷವನ್ನು ಕೊಡಲಾರದೆ ? ಜಾಹ್ನ -ಹೌದು, ನನಗೆ ಅದಕ್ಕಿಂತ ಪರಮಸಂತೋಷವಾವುದು ? ಎಂದು ಉತ್ತರ ಕೊಟ್ಟು ತನ್ನ ದಾರಿಯಲ್ಲಿ ಹೋದನು. ರಾಮಮೋಹನನ ಶಾಸ್ತ್ರೀಯ ಸಿದ್ಧಾಂತಗಳನ್ನು ಖಂಡಿಸಲಾರದ ಒನರು “ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಪದ್ದತಿಗಳೇ ಯೋಗ್ಯವಾದುದರಿಂದ ಅವುಗಳನ್ನೇ ನಾವು ಆಚರಿ ಸುವೆವು' ಎಂದು ಮೂರ್ಖ ತನದಿಂದ ಹಟಾ ಹಿಡಿದಿರುವುದನ್ನು ನೋಡಿ, ಆತನು ಒಂದು ಪುಸ್ತಕದಲ್ಲಿ ಬರೆದುದೇನಂದರೆ;_ಯಾವುದಾದರೂ ಒಂದು ಪೂರ್ವದ ಆಚಾರವು ಶಾಸ್ತ್ರ ಸಮ್ಮತವಾಗಿಯೂ ಕೆಲವುಕಾಲ ನಮ್ಮ ವಾಡಿಕೆಯಲ್ಲಿಯೂ ಇದ್ದು ಕೆಲವು ದಿನಗಳಮೇಲೆ ನಮ್ಮ ಅಜ್ಞಾನವಶದಿಂದ ಅದು ತಪ್ಪಿ ಹೋಗಿದ್ದಲ್ಲಿ ಮರಳಿ ಅದನ್ನು ಉಪಕ್ರಮಿಸಬೇಕೆಂದು ಯತ್ನಿಸಿದರೆ, ತತ್‌ಕ್ಷಣವೇ ಪ್ರಜೆಗಳಿಗೆ ಲೌಕಿಕಸಂಬಂಧವಾದ ದ್ರವ್ಯಲಾಭಗಳನ್ನು ಮಾತ್ರ ಕೊಡಲಾರದುದಾಗಿದ್ದರೂ ಇದನ್ನು ಹೊಸದಾಗಿ ಆಚರಿಸತೊಡಗುವಲ್ಲಿ ಈ ಪದ್ಧತಿ ನಮ್ಮ ಬಳಕೆಯಲ್ಲಿ ಇಲ್ಲ, ಇದನ್ನು ಮಾಡಕೂಡದು' ಎಂದು ಗದ್ದಲ ಹತ್ತಿಸತಕ್ಕ ಯುಕ್ತಾ ಯುಕ್ತ ಜ್ಞಾನವಿಲ್ಲದ ಮನುಷ್ಯನನ್ನು ನೋಡಿ ಇವರನ್ನು ಮಾರ್ಗಕ್ಕೆ ತರುವುದು ಬಹು ಕಷ್ಟವೆಂದು ಎಣಿಸುತ್ತೇನೆ, ಇವರೆಲ್ಲರೂ ಪೂರ್ವಕಾಲದವರು ಆಚರಿಸದೆಯೂ, ಶಾಸ್ತ್ರ ಸಮ್ಮತವಲ್ಲದೆಯೂ ಇರುವೆ ಹೊಸದಾರಿಯೆಂದು ತಮಗೆ ಲೌಕಿಕ ಸಂಬಂಧವಾದ ದ್ರವ್ಯ ಲಾಭವನ್ನುಂಟು ಮಾಡುವುದಾಗಿ ತಿಳಿದಕೂಡಲೆ ಅದು ಸಶಾಸ್ತ್ರಿಯವಾದ ಪೂರ್ವಾಚಾರ