ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ವೆಂತಲೇ ನಿಂದಿಸುತ್ತ ಅವಕ್ಕೆ ವಿರೋಧವಾಗಿ ಒಂದು ಮಾತನ್ನಾ ದರೂ ಆಡದೆ ಇರುವರು. ಶಾಸ್ತ್ರ ವ್ಯತಿರಿಕ್ತವಾಗಿ ಪೂರ್ವಿಕರಿಂದ ಆಚರಿಸಲ್ಪಡದ ವಾಡಿಕೆಗಳಷ್ಮನ್ನು ನಾವು ಬಳಕೆ ಯಲ್ಲಿಟ್ಟು ಕೊಂಡಿಲ್ಲ ? ಮೇಚ್ಚವಿದ್ಯಾ ಭ್ಯಾಸವೆಂದು ನಿಷೇಧಿಸಲ್ಪಟ್ಟ ಯವನಿ ಹೊಣವಿದ್ಯಾ ಬ್ಯಾಸಗಳನ್ನು ಯಾವ ಶಾಸ್ತ್ರಾಧಾರದಿಂದ ಆಚರಣೆಯಲ್ಲಿ ತಂದಿರುವರೋ ? ಅಂತಹ ಜನಗ ಳಿಂದ ಮಾಡಲ್ಪಟ್ಟ ಕಾಗದಗಳಮೇಲೆ ಬರಿಯಲಿಕ್ಕೆ ಅವರ ದೇಶಗಳಲ್ಲಿ ಸಿದ್ಧ ಮಾಡಿದ ವಸ್ತು ಗಳನ್ನೆಲ್ಲ ಉಪಯೋಗಿಸುವುದಕ್ಕೆ ಯಾವಶಾಸ್ತ್ರಗಳು ಅನುಮತಿ ಕೊಟ್ಟಿವೆ ? ಅವರಿಂದ ಮುದ್ರಿಸಲ್ಪಟ್ಟು, ಉಚ್ಛಿಷ್ಟ ಪದಾರ್ಥವಾಗಿ ಭಾವಿಸಲ್ಪಡುವ ಅಂಬಲಿಯಿಂದ ಅಂಟಿಸಲ್ಪಟ್ಟ ರಕ್ಷಾ ಪತ್ರ (ಬೈಂಡು)ಗಳನ್ನು ಪುಸ್ತಕಗಳನ್ನು ಯಾವ ಪೂರ್ವಕಾಲದವರು ಓದುತ್ತ ಲಿದ್ದರು ? ಅವರ ಭಾಷೆಯಿಂದಲೂ, ಅ ರೂಪಗಳಿಂದಲೂ ಮುದ್ರಿಸಲ್ಪಟ್ಟ ನಾಣ್ಯಗಳು ಪವಿತ್ರಸ್ಥಾನಗಳಲ್ಲಿಯೂ, ದೇವಾಲಯಗಳಲ್ಲಿಯೂ ಕಾಣಿಕೆಗಳಾಗಿಯೂ ವೈದಿಕ ಕರ್ಮ ಗಳಲ್ಲಿ ದಕ್ಷಿಣೆಗಳಾಗಿಯೂ ತೆಗೆದುಕೊಳ್ಳಲ್ಪಡಲು ಹೇಗೆ ಅರ್ಹವಾದುವು ? ಇದಕ್ಕೆ ಯಾವಶಾಸ್ತ್ರದ ಆಧಾರವಿರುವದು ? ಯಾವ ಪೂರ್ವಾಚಾರ ಸಮ್ಮತವನ್ನು ಕೊಡು ವರು ? ಇವುಗಳನ್ನು ಹೇಗೆ ಅಂಗೀಕರಿಸತೊಡಗಿದರೋ ಹಾಗೆಯೇ ಸಂಘದ ಪರೋ ವೃದ್ಧಿಗೆ ಸಹಾಯಕವಾದ ನೂತನಾಚಾರವು ಯಾವುದಾದರೂ ಸಮಾದರಣೀಯವಾ ಗಿಯೇ ಇರುವುದು. ” ಸತ್ಯವನ್ನು ಹುಡುಕುವುದರಲ್ಲಿ ಆಸಕ್ತನಾದ ರಾಮಮೋಹನನು ಬಾಲ್ಯದಿಂದಲೂ ಮಹಮ್ಮದೀಯ ಮತಗ್ರಂಧಗಳನ್ನೂ, ಹಿಂದೂಮತ ಗ್ರಂಧಗಳನ್ನೂ, ಬೌದ್ಧಜೈನಮತ ಗ್ರಂಧಗಳನ್ನೂ, ವೇದವೇದಾಂತಗಳನ್ನೂ ಶೋಧಿಸುವಿಕೆಯ, ಅವುಗಳಿಂದ ಈತನ ಮನ ಸ್ಸಿನಲ್ಲಿ ಈಶ್ವರ ಸದ್ಭಾವ ಮತ್ತು ಅವನ ಏಕತ್ವ ಇವುಗಳನ್ನು ಕುರಿತು ಸ್ಥಿರಪಟ್ಟ ಮಹ ತರವಾದ ಜ್ಞಾನವು ಇದುವರೆಗೆ ವಿಜೃಂಭಿಸಿ ಪ್ರಕಾಶಿಸಿದ ರೀತಿಯ ಸಂಗ್ರಹವಾಗಿ ಪಾಠಕರಿಗೆ ತಿಳಿಸಿರುವೆವು. ಇಂತಹ ಅಸಾಧಾರಣ ಪ್ರಜ್ಞಾವಂತನಾದ ಈ ರಾಮಮೋ ಹನನು ಇದುವರೆಗೆ ಕೈ ಸ್ತ ಮತ ಧರ್ಮಗಳನ್ನು ಅಷ್ಟು ಹೆಚ್ಚಾಗಿ ತಿಳಿದುಕೊಳ್ಳದೆ ಹೋದುದು ಸ್ವಲ್ಪ ಆಶ್ಚರ್ಯಕರವಾಗಿಯೇ ತೋರುವುದು ; ಆದರೆ ಈತನು ಈ ಕೊರತೆ ಯನ್ನು ನಿವಾರಿಸಿಕೊಳ್ಳಬೇಕೆಂತಲೇ 1816 ರಲ್ಲಿ ಇರಾಂಪುರದಲ್ಲಿ ಪ್ರಸಿದ್ಧ ವಾದ ಕೀರಿ ವಾರ್ಡ್, ಮಾರ್ಷಮರ್ಾ ಎಂಬ ವಾದಿರಿಗಳೊಡನೆ ಸ್ನೇಹಮಾಡಿ, ಅವರ ಮತಾಭಿ ಪ್ರಾಯಗಳನ್ನು ಗ್ರಹಿಸತೊಡಗಿದನೆಂದು ತೋರುತ್ತದೆ. ಈತನು ಪ್ರಾರಂಭದಲ್ಲಿ ಇಂಗ್ಲೀ ಸುಭಾಷೆಯಲ್ಲಿ ಬರೆಯಲ್ಪಟ್ಟ ಬೈಬಲನ್ನು ಸಂಪೂರ್ಣವಾಗಿ ಓದಿದನು; ಅದರೂ ಭಾವಾಂತ ರಿಸಿದ ಗ್ರಂಥಗಳನ್ನೋದಿ ತಿಳಿದುಕೊಳ್ಳುವ ಜ್ಞಾನಕ್ಕಿಂತ ಮೂಲಗ್ರಂಥಗಳು ಯಾವ ಭಾಷೆ ಯಲ್ಲಿ ಹುಟ್ಟಿದುವೋ ಅಂತಹ ಭಾಷೆಯ ಗ್ರಂಧವನ್ನೇ ಓದುವುದರಿಂದ ಉಂಟಾಗುವ ಜ್ಞಾನ ವು ಉತ್ತಮವಾದುದೆಂದು ತಿಳಿದು ಬೈಬಿಲ್ ಮೊದಲಲ್ಲಿ ಬರೆಯಲ್ಪಟ್ಟ ಹೀಬೂಭಾಷೆಯ ನ್ನು ಕಲಿಸುವುದಕ್ಕೆ ಒಬ್ಬ ಯೆಹೂದಿಯನನ್ನು ನಿಯಮಿಸಿಕೊಂಡನು. ಇದನ್ನು ಕುರಿತು