ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಬಂಗಾಳಿಭಾಷೆಯಲ್ಲಿ ರಾಮಮೋಹನನ ಚರಿತ್ರೆಯನ್ನು ಬರೆದಾತನು “ರಾಮಮೋಹನನು ಆರು ತಿಂಗಳಲ್ಲಿಯೇ ಈ ಭಾಷೆಯಲ್ಲಿ ಬರಿಯುವುದಕ್ಕೂ ಓದುವುದಕ್ಕೂ ಸಾಕಾದಷ್ಟು ಜ್ಞಾನವನ್ನು ಪಡೆದನು ' ಎಂದು ಬರೆದಿರುವನು. ಆದರೆ ಇದೇನೂ ಆಶ್ಚರ್ಯಕರವಲ್ಲ ವೆಂದು ಹೇಳಬಹುದು ಇವನಿಗೆ ಇದುವರಿಗೇನೆ ಅರಬ್ಬಿ ಭಾಷೆಯಲ್ಲಿ ಪರಿಪೂರ್ಣವಾದ ಜ್ಞಾನವುಂಟಾಗಿದ್ದಿತು, ಮಹಮ್ಮದೀಯರೆಲ್ಲರೂ ಈತನನ್ನು ಮೌಲ್ವಿ ರಾಮಮೋಹನ ರಾಯನೆಂದು ಕರೆಯುತಿದ್ದರು. ಹೀಬ್ರೂ ಭಾಷೆಯು ಬಹುಮಟ್ಟಿಗೆ ಅರಬ್ಬಿ ಭಾಷೆಯನ್ನೇ ಹೋಲಿರುವುದು, ಒಂದಂಶವನ್ನು ಒಂದಾವರ್ತಿ ನೋಡಿದ ಮಾತ್ರದಿಂದಲೇ ಆ ವಿಷಯ ವನ್ನು ಸಾಯುವತನಕ ಮರೆಯದಷ್ಟು ಕುಶಾಗ್ರಬುದ್ಧಿಯುಳ್ಳ ಈತನು ಆರುತಿಂಗಳಲ್ಲಿ ಆ ಭಾ ಪೆಯಲ್ಲಿ ಜ್ಞಾನವನ್ನು ಸಂಪಾದಿಸುವುದು ಅಸಾಧ್ಯವಲ್ಲ, ಆಗ ರೆವರೆಂಡ್‌ ವಿಲ್ಲಿಯಂ ಆಡಂ ಎಂಬ ಬಾಪ್ಟಿಸ್ಸು ಮತಬೋಧಕನಾಗಿದ್ದನು. ರಾಮಮೋಹನನು ಅವನನ್ನು ಪರಿಚಿತ ನಾಗಿ ಮಾಡಿಕೊಂಡು, ಯುನಾನಿ ಭಾಷೆಯಲ್ಲಿ ಪಾಠವನ್ನೋಡುತ್ತಾ, ಈ ಮೂಲಕ ದಿನೇ ದಿನೇ ಸ್ನೇಹವನ್ನು ಬೆಳಸಿ, ಕೆಲವು ಕಾಲದ ಮೇಲೆ ಅವನನ್ನು ಸನ್ಮಾರ್ಗಕ್ಕೆ ತಂದನು, ಈ ಆಡಂ ದೊರೆಯು ರಾಮಮೋಹನನಿಗೆ ಎಂದಿಗಾದರೂ ತಮ್ಮ ಜ್ಞಾನಸ್ನಾನಮಾಡಿಸಬೇಕೆಂದು ಯೋಚಿಸಿದ್ದನು. ಪಾಪ !! ಇದಕ್ಕೆ ವಿರೋಧವಾಗಿ ಆ ದೊರೆಯೇ ಸ್ವಧರ್ಮವನ್ನು ಬಿಟ್ಟು ಬಿಡಲೆಳಸಿದನು, ರಾಮಮೋಹನನಿಂದ ಸಕಾರಣವಾಗಿ ಮಾಡಲ್ಪಡುವ ವಾದಗಳು ಅವನ ಹೃದಯವನ್ನಾಕರ್ಷಿಸಿ, ಕೆಲವು ದಿನಗಳಲ್ಲಿಯೇ ಆತನಿಗೆ ಯೇಸುವು ದೇವರ ಮಗನಲ್ಲವೆಂತ ಲೂ, ಅಂತ್ಯ ವಿಚಾರಣೆಯ ದಿನವುಂಟೆಂಬುದು ಅಬದ್ಧವೆಂತಲೂ ತೋರಿತು, ಇದರಿಂದ ಇವನು ತನ್ನ ಫಾದರಿ ಉದ್ಯೋಗವನ್ನು ಪರಿತ್ಯಜಿಸಿ * ಯನಿಟೇರಿರ್ಯ ಮತವನ್ನವಲಂಬಿಸಿ, ಜೀವ ನೋಪಾಯಕ್ಕಾಗಿ ಇಂಡಿಯಾ ಗೆಜೆಟ್ ಎಂಬ ಪತ್ರಿಕಾದಿಪತ್ಯವನ್ನು ವಹಿಸಿದನು. ಪೂರ್ವ ಮತಾಭಿಪ್ರಾಯದ ಬದಲಾವಣೆಯು ಆ ಮತದವರಿಗೆಲ್ಲ ಮನೋವ್ಯಥೆಯನ್ನೂ ತೊಂದರೆ ಯನ್ನೂ ಉಂಟುಮಾಡಿದ್ದರಿಂದ ಅವರು ಎಲ್ಲಾ ಕಡೆಗಳಿಂದಲೂ ನಿಂದೆಯನ್ನೂ , ಆಕ್ಷೇಪಣೆ ಯನ್ನೂ ಮಾಡತೊಡಗಿದರು, ಮತ್ತೂ ಸೃಷ್ಟಿಯ ಆದಿಕಾಲದಲ್ಲಿ ಹುಟ್ಟಿದ ಆಡಂ ಎಂಬವನು ಸೈತಾನನ ದುರ್ಬೋಧನೆಗೊಳಗಾಗಿ ತನ್ನ ಉನ್ನ ತಸ್ಮಾ ನದಿಂದ ಭ್ರಷ್ಟನಾದಹಾಗೆ ಈಗ ಈ ಆಡಂ ದೊರೆಯು ರಾಮಮೋಹನನ ದುರ್ಬೋಧನೆಗಳಿಂದ ತನ್ನ ಪದವಿಯನ್ನು ಕಳೆದುಕೊಂ ಡು 2ನೆಯ ಆಡಂ ಆದನಾದುದರಿಂದ ಇವನನ್ನು ' ಸೆಕೆಂಡ್ ಫಾರ್ಲ ಆಡಂ ' (ಪತಿತನಾದ 2 ನೆಯ ಆಡಂ) ಎಂದು ಹೆಸರಿರಿಸಿ ಕರೆಯ ಬೇಕೆಂತಲೂ ನಿರ್ಣಯಿಸಿದರು, ಆದರೂ ಧೀರ ನಾದ ಈ ವಿಲ್ಲಿಯಂ ಆಡಂ ಆ ದುರಾತ್ಮರ ಅಪಹಾಸ್ಯಗಳನ್ನು ಲಕ್ಷ್ಮಮಾಡದೆ, ತನ್ನ ಮನ - - - -

  1. ಏಸುಕ್ರಿಸ್ತನು ದೇವರ ಮಗನೆಂತಲೂ, ಅವನು ಮನುಷ್ಯರ ಪಾಪಪರಿಹಾರಕ್ಕಾಗಿ ಸತ್ತುಹೋದನೆಂತಲೂ, ಅಂತ್ಯಕಾಲದಲ್ಲಿ ಆತನಿಂದಲೇ ಪಾಪಿಗಳ ವಿಚಾರಣೆ ಮಾಡಲ್ಪಟ್ಟು ಮೋ ಕ್ಷವು ಕೊಡುವದೆಂತಲೂ, ಹೇಳುವ ಮಾತುಗಳನ್ನು ನಂದ ಮತಕ್ಕೆ ಯೂನಿಟೇರಿರ್ಯ ಫುತವೆಂದು ಹೆಸರು.

--- -- -