ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ಸ್ಟಾಕ್ಷಿಗೆ ಯೋಗವೆಂದು ತೋರಿದ ಅಭಿಪ್ರಾಯದಲ್ಲಿಯೇ ಸ್ಥಿರಬುದ್ಧಿಯುಳ್ಳವನಾಗಿ ರಾ ಮಮೋಹನನ ಬಾಹ್ಯಾಭ್ಯಂತರಗಳಲ್ಲಿನ ಪರಿಶುದ್ಧ ಗುಣಗಳಿಗೆ ಬಹಳವಾಗಿ ಸಂತೋಷಿಸು ತಲೂ, ತಾನು ಜೀವಿಸಿರುವ ತನಕ ರಾಮಮೋಹನನ ದೇಶೋದ್ಧರಣ ಕಾರಕ್ಕೆ ತನ್ನ ಕೈಯಲ್ಲಾದಮಟ್ಟಿಗೆ ಸಹಾಯಮಾಡುತ್ತಲೂ ಇದ್ದನು. ರಾಮಮೋಹನನ ಕೈ ಸರ ಮತಧಮ್ಮಗಳನ್ನೆಲ್ಲ ತಿಳಿದುಕೊಂಡ ತರುವಾಯ ಇಂಜೀಲ್ ಎಂಬ ಆ ಕ್ರಿಸ್ತ್ರೀಯ ಗ್ರಂಧಗಳನ್ನು ತನ್ನ ದೇಶ ಭಾಷೆಗಳಲ್ಲಿ ಬರೆಯಬೇಕೆಂ ದು ಯೋಚಿಸಿ ಆಡಂ ಮತ್ತು ರೆವರೆಂಡ್ ಟಿಸಿ ಎಂಬಿವರ ಸಹಾಯದಿಂದ ಆ ಕೆಲಸಕ್ಕೆ ಪ್ರಾ ರಂಭಿಸಿದನು, ಆದರೆ ಸ್ವಲ್ಪ ದಿನಗಳಲ್ಲಿಯೇ ಟಿಸ್ ಎಂಬವನು ಮತ ವಿಷಯಗಳಲ್ಲಿ ರಾಮ ಮೋಹನನ ಅಭಿಪ್ರಾಯಕ್ಕೆ ವಿರುದ್ಧವಾದ ತಾತ್ಸರವುಳ್ಳವನಾಗಿ, ಈ ಸಮಾಜವನ್ನು ಬಿಟ್ಟು ಹೋದನು. ಆದುದರಿಂದ ಆ ಕಾರಕ್ಕೆ ಎಷ್ಟು ವಂತಾಯಿತು, ಹೀಗೆ ಈತನು ತನ್ನ ಕೋರಿಕೆಯನ್ನು ನೆರವೇರಿಸಿಕೊಳ್ಳದೆ ಹೋದರೂ ಈ ಕ್ರಿಯವತಬೋಧಕರ ಸಹವಾಸ ದಿಂದ ತನಗೆ ಓದಲಿಕ್ಕೆ ಅನುಕೂಲಿಸಿದ ಗ್ರಂಥಗಳಲ್ಲಿ ಇದುವರೆಗೆ ಯಾವ ಮತ ಸಂಪ್ರದಾಯ ಗಳಲ್ಲಿಯೂ ಹೇಳಲ್ಪಡದಿದ್ದ ಹೊಸ ನೀತಿಯೊಂದನ್ನು ಕಂಡು ಹಿಡಿದನು, ಅದು ನಿನ್ನಲ್ಲಿ ಪರರು ಹೇಗೆ ನಡೆದುಕೊಳ್ಳಬೇಕೆಂದು ಅನೇಕ್ಷಿಸುವೆಯೋ ಹಾಗೆಯೇ ನೀನೂ ಪರರ ವಿಷಯ ದಲ್ಲಿ ನಡೆದುಕೊಳ್ಳತಕ್ಕುದು' ಎಂಬುದೇ, ಇದನ್ನೇ ಆರಂಭಪೀಠಿಕೆಯಾಗಿ ತೆಗೆದುಕೊಂಡು, ಆ ಗ್ರಂಧಗಳಲ್ಲಿನ ನೀತಿಗಳನ್ನೆಲ್ಲ ಒಟ್ಟುಗೂಡಿಸಿ ನಾನು ಹೇಳುವ ನೀತಿಗಳು ಸೌಖ್ಯಕ್ಕೆ ಮಾರ್ಗಗಳು ಎಂಬ ಹೆಸರಿಟ್ಟು 1820 ರಲ್ಲಿ ಒಂದು ಪುಸ್ತಕವನ್ನು ಪ್ರಚುರಿಸಿದನು, ಇಂ ಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟ ಆ ಗ್ರಂಧವನ್ನು ದೇಶೀಯರು ಓದಿ, ಅವರ ಮತ ತತ್ವಗ ಳನ್ನೂ, ಜೀಸಸ್ ಎಂಬ ಮಹಾತ್ಮನ ಯೋಗ್ಯತೆಗಳನ್ನೂ ತಿಳಿದುಕೊಳ್ಳತಕ್ಕದ್ದೆಂದು ಆಲೋ ಚಿಸಿ, ಬಂಗಾಳೀ ಸಂಸ್ಕೃತ ಭಾಷೆಗಳಲ್ಲಿಯೂ ಅದನ್ನು ಬರೆದು ಮುದ್ರಿಸಿದನು. ಈ ಪ್ರಯ ತ್ನಕ್ಕೆ ಮತಬೋಧಕರಾದ ಪಾದ್ರಿಗಳು ತಮ್ಮ ಕೃತಜ್ಞತೆಯನ್ನು ಹೊರಪಡಿಸುವುದಕ್ಕೆ ಬದ ಲಾಗಿ, ಇವನನ್ನು ದ್ವೇಷಿಸತೊಡಗಿದರು, ಇದಕ್ಕೆ ಕಾರಣವಿಲ್ಲದೆ ಇರಲಿಲ್ಲ, ರಾಮಮೋ ಹನನು ಈ ಗ್ರಂಥದಲ್ಲಿ ಬೇಸಸ್ಸು ಹೇಳಿದ ಅಂತ್ಯ ವಿಚಾರಣೆ ಮೊದಲಾದ ಮತ ಎಷಯಗಳೊಂ ದನ್ನೂ ಸೇರಿಸದೆ ಪೀಠಿಕೆಯಲ್ಲಿ ಹೀಗೆ ಬರೆದನು:- ಈ ಕಾಲದಲ್ಲಿ ಮತಗಳು ಒಂದೇವಿಧ ವಾಗಿಲ್ಲದೆ ಹಲವುಬಗೆಗಳಾಗಿವೆ. ಮೂಢರಾದ ಕೆಲವರು ಸತ್ಯವೆಂಬುದಿಂತದೆಂದು ತಿಳಿಯ ಲಾರದೆ ಇದ್ದರೂ ಇತರ ಮತಗಳನ್ನಾಕ್ಷೇಪಿಸುವುದೇ ತಮ್ಮ ಉದ್ಯೋಗವೆಂದು ತಿಳಿದು ಹಾಗೆ ನಡೆಯುವರು, ಕೆಲವರು ವಿದ್ಯಾವಂತರಾಗಿದ್ದರೂ ಮತಾಭಿಮಾನದಿಂದ ಅಗಸ್ತ್ರನು ಸಮುದ್ರವನ್ನು ಮೂರುಹಿಡಿ ನೀರಾಗಿ ಮಾಡಿ ತನ್ನ ಮೂತ್ರವಾಗಿ ಬಿಟ್ಟು ಬಿಟ್ಟನಂತ ಅದರಿಂದಲೇ ಸಮುದ್ರದನೀರು ಉಪ್ಪಾಗಿರುವುದೆಂತಲೂ, ಇವೇ ಮುಂತಾದ ಅಸಂಬದ್ಧ ಪ್ರ ಸಂಗಗಳನ್ನು ಹೇಳಿದಕೂಡಲೇ ಸತ್ಯ, ಸತ್ಯ ಎಂದು ತಲೆದೂಗುವರು. ಆದುದರಿಂದ ಯೇಸು ಕ್ರಿಸ್ತನ ಸ್ವಾಭಿಮಾನ ಪೂರಿತಗಳಾದ ಮತಬೋಧೆಗಳನ್ನು ಳಿದು, ಪ್ರಪಂಚದಲ್ಲಿ ಎಲ್ಲಾ ಜಾತಿ