ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಇಲ್ಲಿರುವ ಮೂಲಗ್ರಂಥಗಳಿಂದ ಅನೇಕ ವಾಕ್ಯಗಳನ್ನು ತೆಗೆದು ಭಾಷಾಂತರದಲ್ಲಿನ ದೋಷಗ ಇನ್ನೆಲ್ಲ ಹೊರಪಡಿಸಿ ನಿರ್ಣಯಮಾಡಿದನು. 1 ಯೇಸುಕ್ರಿಸ್ತನ ರಕ್ತದಿಂದ ಪ್ರಪಂಚವು ಪವಿತ್ರವಾಯಿತೆಂದು ಬೈಬಿಲಿನಲ್ಲಿ ಎಲ್ಲಿ ಯ ಹೇಳಲ್ಪಟ್ಟಿಲ್ಲ, ನಿಮ್ಮ ಲಹೃದಯದಿಂದ ತನ್ನ ಪಾಪಗಳನ್ನೊಪ್ಪಿಕೊಂಡ ಪಶ್ಚಾತ್ತಾಪ ಪಡುವುದೇ ಪವಿತ್ರತೆಗೆ ಕಾರಣವೆಂದು ಬೈಬಿಲ್ ಸಾರಿ ಹೇಳುವದು, 2 ಯೇಸುವು ದೇವರ ಮಗನೆಂದು ಹೇಳುವುದು ಅತಿಶಯೋಕ್ಕಿ, ಬೈಬಿಲ್‌'ನಲ್ಲಿ ಎಲ್ಲಿ ಯ ಇದನ್ನು ಹೇಳಿಲ್ಲ. ಪ್ರಸಿದ್ಧ ಪುರುಷರಲ್ಲಿ ಈತನೂ ಒಬ್ಬನೆಂತಲೂ ಭಕ್ತಾಗ್ರೇಸರನಾಗಿ ಆ ಭಜ್ಞಾನಗಳನ್ನು ಮಧುಗೆ ಬೋಧಿಸಿ ಅವರನ್ನು ಸನ್ಮಾರ್ಗಕ್ಕೆ ತಂದನೆಂಬುದನ್ನು ಮಾತ್ರ ಒಪ್ಪಿಕೊಳ್ಳಬಹುದು. - 3 ಪಾಪ ಪುಣ್ಯಗಳನ್ನು ಕುರಿತು ೧೨ಂತ್ಯ ವಿಚಾರಣೆಯೊಂದು ಆಗುವುದೆಂಬುದು ಸದಾ ಯುಕ್ತಿಯುಕ್ತವಾದುದಲ್ಲವೆಂದು ಈತನು ಖಂಡಿಸಿದನು, ಇಂಥಾ ವಿಷಯಗಳನ್ನುಳ್ಳ ಗ್ರಂಥ ಗಳನ್ನು ನೋಡಿ ಡಾಕ್ಟರ್‌ ಮಾರ್ಷಮೆ್ರರು ಮೌನವಾಗಿರಲಿಕ್ಕಿ೦ತ ಬೇರೊಂದು ಉಪಾಯ ತೋರದೆ ಸುಮ್ಮನಾದರು, ತರುವಾಯ ಇಂಡಿಯ ಗೆಜೆಟ್ ಪತ್ರಿಕಾಧಿಪತಿಯು ರಾಮ ಮೋಹನರಾಯನು ವಿದ್ಯಾಚರ್ಚೆಯಲ್ಲಿ ಅಜೇಯನೆಂತಲೂ ಅದ್ವಿತೀಯನೆಂತಲೂ ಬರೆದನು. ಮತ್ತು ಇಂಗ್ಲೆಂಡಿನಲ್ಲಿರುವ ಮಂತ್ರೀ ರಿಪಾಜಿಟೆರಿ' ಎಂಬ ಪತ್ರಿಕಾಧಿಪತಿಯು ಈ ಗ್ರಂಥವು ಎಲ್ಲಕ್ಕಿಂತ ಉತ್ಕೃಷ್ಟವಾಗಿರುವದಲ್ಲದೆ ಯೂನಿಟೇರಿರ್ಯ ಮತಾಭಿಮಾನಿಗಳಿಗೆ ಮಹೋಪ ಕಾರಿಯಾಗಿದೆ ಎಂದೂ ಹೊಗಳಿ ಬರೆದನು. 182ನೇ ಸಂವತ್ಸರದಲ್ಲಿ ಡಾಕ್ಟರ್‌ ಮಾರ್ಷಮೆ್ರ ಎರಡನೆಯ ಅಪೀಲಿಗೆ ಬದಲು ಬರೆದು ತನ್ನ ಖಂಡನೆಗಳಿಗೆ ರಾಮಮೋಹನನ ಪ್ರತ್ಯುತ್ತರವು ಜಾಗ್ರತೆಯಲ್ಲಿ ಬಾರದ್ದರಿಂದ ಪ್ರೆಸ್ಸಿನ ಅಧಿಕಾರಿಗಳು ಮಾಡಿಕೊಂಡ ಕಟ್ಟಳೆಗಳನ್ನರಿಯದೆ, ಮುಂದೆ ಈ ತನು ಪ್ರತ್ಯುತ್ತರ ಬರೆಯಲಿಕ್ಕೆ ತೋರದೆ ಸುಮ್ಮನೆ ಆದನೆಂದು ತಿಳಿದು ರಾಮಮೋಹನನು ಪ್ರಕಟಿಸಿದ್ದ ಫಸ್ಟ್ ಅಂಡ' ಸೆಕೆಂಡ್ ಅಪೀಲ್ಸ್' ಎಂಬ ಎರಡು ವ್ಯಾಸಗಳನ್ನೂ, ತಾನು ಬರೆದ ಖಂಡನೆಗಳನ್ನೂ ಸೇರಿಸಿ ಒಂದು ಸಂಪುಟವಾಗಿ ಇಂಗ್ಲೆಂಡಿನಲ್ಲಿದ್ದ ತನ್ನ ಸ್ನೇಹಿತರಿಂದ ಅಲ್ಲಿಯೇ ಅಚ್ಚು ಹಾಕಿ ಸಿದನು, ಆದರೆ 1924 ರಲ್ಲಿ ಯೂನಿವೇರ್ಯ ಸಂಘದವರು ರಾಮಮೋಹನನಿಂದ ಬರೆಯ ಲ್ಪಟ್ಟ ನಾನು ಹೇಳಿದ ರೀತಿಗಳು ಸೌಖ್ಯಕ್ಕೆ ಮಾರ್ಗಗಳು' ಎಂಬ ಗ್ರಂಥಗಳನ್ನೂ ಫಸ್ಟ್; ಸೆಕೆಂಡ್ ಅಂಡ್ ಫೈನಲ್ ಅಪೀಲ್ ಎಂಬ ಮರು ವ್ಯಾಸಗಳನ್ನೂ ಸೇರಿಸಿ ಒಂದು ಸಂಪುಟ ವಾಗಿ ಪ್ರಚುರಿಸಿದನು. 1928ರಲ್ಲಿ ಈ ಸಲವೂ ಇದು ಅಮೆಕಾಖಂಡದಲ್ಲಿ ಮರಳ ಮುದ್ರೆ ಸಲ್ಪಟ್ಟಿತು. 1834ರಲ್ಲಿ ಲಂರ್ಡ ನಗರದಲ್ಲಿ ಇದು ಮೂರನೆಯಸಾರಿ ಅಚ್ಚು ಹಾಕಲ್ಪಟ್ಟಿತು. ಆಗ ರಾಮಮೋಹನನು ಆ ಪಕ್ಷಣದಲ್ಲಿಯೇ ಇದ್ದನು, ಈ ಮೇರೆಗೆ ಈತನ ಪ್ರಸಿದ್ದಿ ಯು ಯರೋಪ್ ಅಮೆರಿಕಾ ಖಂಡಗಳತನಕ ವ್ಯಾಪಿಸಿತು. ಹೀಗೆ ಮಾರ್ಷಮೆ್ರ ಸಂಗಂ ವಿವಾದಗಳು ಜರುಗುತ್ತಿದ್ದ ಕಾಲದಲ್ಲಿಯೇ ಶ್ರೀರಾಮ ಟ