ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ಹಿ! ಲಿಲ್ಲ. ತರುವಾಯ ಆ ಲೇಖನವನ್ನು ಟಪಾಲ್ ಮೂಲಕ ಟೈಲರಿಗೆ ಕಳುಹಿ, ಮತದ್ವೇಷ ವನ್ನೇ ಮುಖ್ಯವಾಗಿ ತಿಳಿದು ಹಿಂದುಗಳನ್ನು ಆಕ್ಷೇಪಿಸಿ ಬರೆಯುವ ವ್ಯಾಸಗಳನ್ನು ಪ್ರಕಟಿ ಸುವುದೂ ಅದಕ್ಕೆ ವ್ಯತಿರಿಕ್ತವಾಗಿ ಬರೆದ ಖಂಡನೋಪನ್ಯಾಸಗಳನ್ನು ಪ್ರಕಟಿಸದೆ ಹೋಗು ವುದೂ, ಸ್ವಭಾವವಾಗಿ ಉಳ್ಳ ನಮ್ಮ ಪತ್ರಿಕೆಯ ಅನ್ಯಾಯಗಳನ್ನು ವಿವೇಕಿಗಳಾದ ಸಜ್ಜ ನರು ತಿಳಿದುಕೊಳ್ಳುವ ವೇಳೆ ಸಮಿಾಪಿಸಿದೆ. ತೊಂದರೆ ಏತಕ್ಕೆ ? ಎಂದು ಮತ್ತೊಂದು ಪತ್ರ ಬರೆದು ಅದನ್ನು ಪತ್ರಿಕಾಧಿಕಾರಿಗೆ ಕಳುಹಿಸಿದನು. ಆತನು ಇದನ್ನು ನೋಡಿದ ಕೂ ಡಲೆ ಕ್ಷಮೆಯನ್ನು ಬೇಡಿಕೊಂಡು ಮೊದಲು ತಾನು ತಿರಸ್ಕರಿಸಿದ್ದ ಲೇಖನವನ್ನು ಮರುಸಂ ಚಿಕೆಯಲ್ಲಿ ಪ್ರಚುರಿಸಿದನು. ಕೆಲವು ದಿನಗಳಾದಮೇಲೆ ಟೈಲರ್ ತನಗೆ ರಾಮಮೋಹನನು ಬರೆದಿದ್ದ ಪತ್ರಕ್ಕೆ ಹೀಗೆ ಪ್ರತ್ಯುತ್ತರವಿತ್ತನು, ರಾಮದಾಸೇ ! ನಿಮ್ಮ ಪತ್ರವನ್ನೋದಿದೆನು, ಪವಿತ್ರವಾದ ನಮ್ಮ ಮತವನ್ನು ದೂಷಿಸಿರುವುದು ಸರಿಯಲ್ಲ, ಮುಂದೆ ನಾನು ಹಿಂದೂ ಯೂನಿಟೇರಿರ್ಯ ಮತಗಳೆರಡೂ ಒಂದೇ ಎಂತಲೂ, ಇವೆರಡು ಮತಗಳೂ ಸೈತಾನನಿಂದ ಉತ್ಪನ್ನ ವಾದವುಗಳೆಂತಲೂ, ಸಿದ್ದಾಂ ತಪಡಿಸುವುದಕ್ಕಾಗಿ ಈದಿನ ಸಾಯಂಕಾಲದಲ್ಲಿಯೇ ಒಂದು ಮಹಾಸಭೆಯನ್ನು ಕೂಡಿಸ ಬೇಕೆಂದು ಯೋಚಿಸಿದೆನು, ಆದರೂ ಕೇಳಲಪೇಕ್ಷಿಸುವ ಕೆಲವು ದೊಡ್ಡ ಮನುಷ್ಯರು ಬರುವ ತನಕ ಈ ಯೋಚನೆಯನ್ನು ತಡೆಯಬೇಕೆಂದು ನನ್ನ ಪರಮಮಿತ್ರನಾದ ರಾರ್ಬಿ ರ್ಸ ಹೇಳಿದ್ದರಿಂದ ಯತ್ನ ವಿಲ್ಲದೆ ಅದಕ್ಕೆ ಒಪ್ಪಬೇಕಾಯಿತು, ಇತರ ಸಹಾಯಗಳು ಯಾವುವೂ ಇಲ್ಲದೆ ದೇವರ ಪವಿತ್ರ ಗ್ರಂಧವೆಂಬ ತೀಕ್ಷ್ಮವಾದ ಆಯುಧವೊಂದನ್ನೇ ಕೈಯಲ್ಲಿ ಹಿಡಿದ ಮನುಷ್ಯ ಮಾತ್ರನೊಬ್ಬನು ನಾಳೆ ಎಷ್ಟು ಜನ ದುರತಿಗಳ ತಲೆಯನ್ನು ತರಿದೊಟ್ಟುವನೋ ನೋಡಲಕ್ಕೆ ಸಿದ್ದವಾಗಿರಿ, ಮಹಾಶಕ್ತಿಯುಕ್ತವಾದ ಆ ವೀರಖಡ್ಗ ವನ್ನು ನೀನೂ ನಿನ್ನ ಮಿತ್ರನಾದ ರಾವಂಮೋಹನನ ಮತ್ತು ಪತಿತನಾದ ಆದಮನಂತವರೆಷ್ಟು ಮಂದಿಯಾದ ರೂ ಇದಿರಿಸಲಾರರೆಂದು ತಿಳಿದುಕೊಳ್ಳುವುದು. ' “ ಹೀಗೆ ನಿನ್ನ ವಿರೋಧಿ ಆರ್‌. ಟೈಲರ್ ೨' ತರುವಾಯ ಯಾವ ಕಾರಣದಿಂದಲೋ ಟೈಲರ್ ಸಭೆಗೂಡಿಸುವ ಹೆಸರನ್ನೇ ಎತ್ತದೆ ಕೆಲವು ದಿನಗಳನ್ನು ಕಳೆದನು. ತರುವಾಯ ಉತ್ತರ ಪ್ರತ್ಯುತ್ತರರೂಪವಾಗಿ ವಿವಾದಮಾಡಲಾ ರಂಭಿಸೆ, ಈತನು ಪ್ರತಿಲೇಖನದಲ್ಲಿಯ ಮುಖ್ಯ ವಿಷಯಗಳನ್ನೆಲ್ಲಾ ಬಿಟ್ಟು,ಅನುಪಯೋಗವೂ, ಅಪ್ರಸ್ತುತವೂ ಆದಮಾತುಗಳಿಂದ ಹೆದರಿಸುತ್ತ ಬಂದನು. ರಾಮಮೋಹನನೂ ಅದಕ್ಕೆ ಕ್ರಿಸ್ತ ಮತ, ಹಿಂದೂಮತಗಳೆರಡೂ ಒಂದೇ ಎಂದು ಒಪ್ಪಿಕೊಳ್ಳುವುದೇ, ಅಥವಾ ತಕ್ಕ ಕಾರಣಗಳಿಂದ ಖಂಡಿಸುವುದೇ, ಇವುಗಳನ್ನು ಳಿದು ನಿಷ್ಟ್ರಯೋಜನಗಳಾದ ಪ್ರಸಂಗಗಳಿಂದ ಹೆದರಿಸುವುದು ವಿದ್ಯಾವಂತರ ಪದ್ಧತಿಗೆ ವಿರೋಧವಾದುದೆಂದು ಬರೆಯುತ್ತಾ ಅಲ್ಲಲ್ಲಿ ಮೃದುಪದಗಳಿಂದಲೂ, ಪ್ರಹಸನಗಳಿಂದಲೂ ಅವರ ಮತದಲ್ಲಿನ ಆಕ್ಷೇಪಾರ್ಹಗಳಾದ ವಿಷಯಗಳನ್ನು ಮಾತ್ರ ಹೊ ರಪಡಿಸುತ್ತಲೂ ಬರೆದನು, ಪಾಪ ! ಟೈಲರ್‌ ತಾನು ಮಾಡತಕ್ಕುದೇನೂ ತೋರದೆ