ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೩ ಒಬ್ಬನು ಪಶ್ಚಿಮದೇಶದಲ್ಲಿ ಸತ್ತು ಹೋಗಿ ಬಹು ದಿನಗಳಾದುವೆಂದು ತಾವೇ ಹೇಳಿದ್ದಿರಿ. ಆದುದರಿಂದ ಉಳಿದವಬ್ಬರೇ ಎಂದು ನಿಶ್ಚಯಿಸಿಕೊಂಡೆನು. ಫಾದಿರಿ-(ಮೂರನೆಯವನೊಂದಿಗೆ) ನೀನು ಏನೂ ಇಲ್ಲವೆಂದು ಹೇಗೆ ಹೇಳಿದೆ? ತೃತೀಯ-ನೀವು ಮೂವರೆಂದು ಹೇಳುತ್ತಿದ್ದರೂ ಆ ಮೂವರೂ ಸೇರಿ ಒಬ್ಬನೇ ಎಂದು ಹೇಳುತ್ತಾ, ಕೆಲವು ಜನರು ಅವನೊಬ್ಬನನ್ನು ಹಿಡಿದುಕೊಂಡು ಗಿಡಕ್ಕೆ ನೇತುಹಾಕಿ ಈಗ್ಗೆ 28 ನೂರು ವರ್ಷಗಳ ಹಿಂದೆಯೇ ಕೊಂದುಹಾಕಿದಹಾಗೆ ಹೇಳಿದ್ದಿರಿ, ಆದುದರಿಂದ ಮತ್ತೇನೂ ಉಳಿಯಲಿಲ್ಲವೆಂದು ತಿಳಿದುಕೊಂಡೆನು. ಫಾದಿರಿ-ನೀವೆಲ್ಲರೂ ಪರಿಶುದ್ಧಗ್ರಂಥವನ್ನೂ, ಪ್ರಜೆಗಳ ಪಾಪಕ್ಕಾಗಿ ಜೀಸಸು ತನ್ನ ಪ್ರಾಣವನ್ನೊಪ್ಪಿಸಿದ ವಿಷಯವನ್ನೂ ನಂಬಲಿಲ್ಲವಾದುದರಿಂದ ನಿಮಗೆ ನರಕವೇ ಶಾಶ್ವತವಾದ ವಾಸವಾಗುವುದು, ಅದುಹಾಗಿರಲಿ, ಏಸುಕ್ರಿಸ್ತನು ಮರಳಿ ಮೂರನೆಯ ದಿನ ಬದುಕಿ ಬಂದ ವಿಷಯವನ್ನಾದರೂ ನಂಬುವಿರಾ ? ಶಿಷ್ಯನು--ನಿಮಗೆ ಹೆಚ್ಚು ಸಂಬಳವನ್ನು ಕೊಟ್ಟು ಹತ್ತು ಸಾವಿರ ಮೈಲುಗಳ ದೂರಕ್ಕೆ ಕಳುಹಿಸಿದುದು ಇದನ್ನು ಹೇಳುವುದಕ್ಕೇನೇ ? ಇಂತಹ ವಿಪರೀತ ವಿಷಯಗಳು ಬೇಕಾಗಿದ್ದರೆ ನಮ್ಮ ಮತಸಂಪ್ರದಾಯದಲ್ಲಿ ಬೇಕಾದಷ್ಟಿಲ್ಲವೆ? ಅನೇಕ ತಲೆಗಳೂ, ಅನೇಕ ಕೈಗಳೂ ಉಳ್ಳ ವರೂ, ಸತ್ತು ಹುಟ್ಟಿದವರೂ, ನಮ್ಮಲ್ಲಿ ಸಮೃದ್ಧಿಯಾಗಿರುವರು. ನಿಮಗೆ ಬೇಕಾಗಿದ್ದಲ್ಲಿ ಕೆಲವು ಸಾಧನಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಿರಿ. ರಾಮಮೋಹನನ ಇಂಗ್ಲಿಷ್ ಗ್ರಂಥಗಳ ಪ್ರಥಮ ಸಂಪುಟ 265 ರಿಂದ 288 ರವರೆಗೆ ಇರುವ ಪುಟಗಳಲ್ಲಿ ಈ ವಿಷಯವು ತುಂಬ ನಗು ಬರುವಂತೆ ಬರೆಯಲ್ಪಟ್ಟಿರುವುದು, ಗ್ರಂಥ ವಿಸ್ತರಭೀತಿಯಿಂದ ಅದನ್ನೆಲ್ಲಾ ಇಲ್ಲಿ ಬರೆಯಲಾಗಲಿಲ್ಲ, 1823ನೇ ಸಂವತ್ಸರದಲ್ಲಿ ಅಮೆರಿಕಾದಲ್ಲಿನ ಕೇಂಬ್ರಿಡ್ಜ್ ನಗರನಿವಾಸಿಯ, ಯಸಿ ಟೇರಿರ್ಯ ಮತಸ್ಥನೂ ಆದ ಹೆರ್ವೈ ಎಂಬ ಮತಬೋಧಕನೊಬ್ಬನು (1) ಕ್ರಿಸ್ತನ ತವು ಹಿಂದೂ ದೇಶದಲ್ಲಿ ಪ್ರಬಲಿಸುವುದೆಂದು ನಂಬುವುದಕ್ಕೆ ಏನಾದರೂ ಆಧಾರಗಳಿವೆಯೇ (2) ಇದ್ದಲ್ಲಿ ಎಷ್ಟರಮಟ್ಟಿಗೆ ಇವೆ ? ಇದುವರಿಗೆ ಕೆಲಸಮಾಡುತ್ತಿರುವ ಫಾದಿರಿಗಳಿಂದ ಏನಾದರೂ ಒಳ್ಳೆ ಫಲಿತಾಂಶವು ಕಾಣಬರುತ್ತಿದೆಯೆ ? ಎಂಬ ಪ್ರಶ್ನೆಗಳನ್ನು ಒಂದು ವ್ಯ ತ್ಯಾಂತ ಪತ್ರದ ಮೂಲಕ ಹಿಂದೂ ದೇಶದಲ್ಲಿ ಯಾರಾದರೂ ಪ್ರತ್ಯುತ್ತರವನ್ನು ಕೊಡಬಹು ದೆಂದು ಪ್ರಾರ್ಥಿಸಿ ಪ್ರಕಟಿಸಿದನು. ರಾವ.ಮೋಹನನು ಅದಕ್ಕೆ 1824ನೇ ಫೆಬ್ರವರಿಯಲ್ಲಿ ಪ್ರತ್ಯುತ್ತರವನ್ನು ಬರೆದು ಆ ಬೋಧಕರಿಗೆ ಕಳುಹಿ, ಸ್ವದೇಶ ಪ್ರಜೆಗಳ ಉಪಯೋಗಾರ್ಥ ವಾಗಿ ಗ್ರಂಥರೂಪವಾಗಿ ಮುದ್ರಿಸಿ ಪ್ರಕಟಿಸಿದನು. 1825ರಲ್ಲಿ ಈ ಪುಸ್ತಕವು ಲಂರ್ಡ ಪಟ್ಟದಲ್ಲಿ ಮುದ್ರಿಸಲ್ಪಟ್ಟಿತು. ಈ ಪ್ರತ್ಯುತ್ತರದಲ್ಲಿ : ರೋರ್ಮ ಕ್ಯಾಥೋಲಿಕ್, ಪ್ರೋಟಿ ಸೈಂಟ್, ಬ್ಯಾಧರ್ರಚಚ್೯” ಎಂಬ ಹೆಸರುಗಳಿಂದ ಕೆಲಸಮಾಡುವ ಸಾಮಾಜಿಕರೆಲ್ಲರೂ ಅನ್ನಾ ತುರರಾಗಿ ಪರಿತಪಿಸುವ ವಿದ್ಯಾ ವಿಹೀನರಾದ ನೀಚಜಾತಿಯವರಿಗೆ ಪ್ರಾಪಂಚಿಕ ಲಾಭ