ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ቅሶ ಕಂಪೆನಿಯವರಿಗೆ ತಮ್ಮ ಆಳಿಕೆಯ ಅಭಿವೃದ್ಧಿಯಲ್ಲಿಯ, ದ್ರವ್ಯಾರ್ಜನೆಯಲ್ಲಿಯೂ ಇದ್ದ ಷ್ಟು ಅಭಿಮಾನವು ಸಹಗಮನ ಪದ್ದತಿಯನ್ನು ನಿಲ್ಲಿಸಿ ನಾಗರಿಕತೆಯನ್ನು ಹೆಚ್ಚಿಸುವ ವಿಷಯ ದಲ್ಲಿ ಇಲ್ಲದೆ ಹೋಯಿತು, ಮತ್ತು ಈ ದುರಾಚಾರವನ್ನು ಬಿಡಿಸಿದಲ್ಲಿ ಪ್ರಜೆಗಳ ಮತವಿಷ ಯದಲ್ಲಿ ಪ್ರವರ್ತಿಸಿದಂತೆ ಆಗುವುದೆಂದು ತಿಳಿದು, ಆಗಿನ ಅಧಿಕಾರಿಗಳು ಅಲ್ಲಲ್ಲಿ ಎಷ್ಟೆಷ್ಟು ಭಯಂಕರಗಳಾದ ಮರಣಗಳು ಜರುಗುತ್ತಿದ್ದರೂ ಅಲಕ್ಷದಿಂದ ಆ ಕಡೆಗೆ ತಿರುಗಿನೋಡದೆ ಈ ದುರಾಚಾರವು ಕ್ರಮಕ್ರಮವಾಗಿ ತೊಲಗಿಹೋಗಬೇಕೇ ಹೊರತು ನಾವು ಈಗ ಯಾವು ದನ್ನೂ ಮಾಡಲಿಕ್ಕಾಗದೆಂದು ಹೇಳುತ್ತಾ, ತಾವು ಸುಮ್ಮನೆ ಇದ್ದುದಲ್ಲದೆ ಅವರ ಆಧೀನದ ಇಲ್ಲದ ಇಂಡಿಯಾದಲ್ಲಿರುವ ಇತರ ಯೂರೋಪಿರ್ಯ ಮಿಷನುಗಳಿಗೆ ಸುದಾ ಕೆಲವು ರಾಜ ಕೀಯ ರಹಸ್ಯ ಕಾರಣಗಳಿಂದ ನೀವು ಯಾರಾದರೂ ಸಹಗಮನವನ್ನು ಕುರಿತು ಯಾವ ವಿಧವಾದ ಮಾತನ್ನಾಗಲಿ, ನಾಲಿಗೆಯಿಂದ ಉಚ್ಚರಿಸಲೇಬಾರದು' ಎಂದು ಕಠಿನವಾದ ಆಜ್ಞೆಯನ್ನಿತ್ತಿದ್ದರು. ಒಂದುಸಾರಿ ಯಾವನೋ ಒಬ್ಬ ಪಾದಿಯು ಒಂದು ಕಡೆ ತನ್ನ ವಾರ್ತಾಪತ್ರದಲ್ಲಿ ಈ ಘೋರ ದುರಾಚಾರವನ್ನು ನಿಲ್ಲಿಸಿಬಿಡಿರೆಂದು ಹಿಂದುಗಳನ್ನೆಲ್ಲಾ ಪ್ರಾರ್ಧಿಸಿದಂತೆ ಒಂದು ಲೇಖನವನ್ನು ಪ್ರಕಟಿಸಲು ಅವನನ್ನು ತಕ್ಷಣವೇ ಹಿಂದೂದೇಶ ದಿಂದ ತೊಲಗಿ ಹೋಗೆಂದು ಆಜ್ಞೆ ಮಾಡಿದರು. ಲಾಡ೯ ರ್ಟೆಮತ್‌ (ಸರ್‌ಜರ್ಾ ಷೋರ್) ಕಾಲದ ತನಕ ದೊರೆತನದವರು ಇದೇ ಪದ್ದತಿಯನ್ನವಲಂಬಿಸಿದ್ದರು, ಆದರೆ ಕೊನೆಗೆ ಪ್ರಸಿದ್ಧನಾದ “ ಲಾಡ*೯ ವೆಲೆ ಸಿ » ಎಂಬ ಸರ್ವಾಧಿಪತಿ ಮಾತ್ರ ಇದನ್ನು ಕುರಿತು ಸ್ವಲ್ಪ ಶ್ರದ್ಧೆಗೆ ತೆಗೆದುಕೊಂಡನು. ಅದೇ ನೆಂದರೆ :-ಅವನ ಕಾಲದಲ್ಲಿ (1805) “ ಈ ಘೋರಕೃತ್ಯವನ್ನೇತಕ್ಕೆ ತಪ್ಪಿಸಬಾರದು ? 1) ಎಂದು ಒಂದು ಮನವಿಯನ್ನು ಬರೆದು ವಿಲಾಯಿತಿಯ ಕಾರಸ್ಥಾನಕ್ಕೆ ಕಳುಹಿದನು. ಅದರ ಪರವಸಾನವು ಹೇಗೆ ಆಯಿತೋ ನನಗೆ ತಿಳಿಯದು. ಇವನ ತರುವಾಯ ರಾಜ ಪ್ರತಿನಿಧಿಗಳಾಗಿ ಬಂದ ಲಾರ್ಡ್ ಮಿಂಟೋ, ಮತ್ತು ಲಾರ್ಡ್ ಹೇಸ್ಟಿಂಗ್ಸ್ ಇವರೂ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಯೋಚಿಸುತ್ತಿದ್ದರು. ಆದರೆ ಪ್ರಜೆಗಳು ಇದಿರುಬೀಳುವ ರೇನೋ ' ಎಂಬ ಭಯವೂ, ಹಿಂದೂಮತಾಚಾರಗಳಲ್ಲಿ ತಾವು ಪ್ರವೇಶಿಸುವುದಾದರೆ ಪಾರ್ಲಿಮೆಂಟಿನವರು ಏನು ಹೇಳುವರೋ ಎಂಬ ಭಯವೂ ಒಂದಕ್ಕೊಂದು ಜತೆಯಾಗಿ ಅವರು ಮಾಡಲೆಳಸಿದ ಕೆಲಸವನ್ನು ಧಾರಾಳವಾಗಿ ನಡೆಸಲು ಅವರು ಅವಕಾಶ ಕೊಡದೆ ಹೋದುವು, ಬದರಿಂದ ಅವರು ಈ ದುರಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸದೆ ಹೋ ದರು. ಸ್ವಲ್ಪಮಟ್ಟಿಗೆ ತಗ್ಗು ವುದೆಂದೆಣಿಸಿ, ಕೆಲವು ಪದ್ಧತಿಗಳನ್ನು ಆಚರಣೆಯಲ್ಲಿ ತರಬೇ ಕೆಂದು ಆಲೋಚಿಸಿದರು. ತರುವಾಯ ಅವರ ಸ್ಥಾನಕ್ಕೆ ಬಂದ ಲಾಡ್೯ ಅಂಯರಸ್ತ್ರನು ತನ್ನ ಕಾಲದಲ್ಲಿ ಮೊದಲು ಯೋಚಿಸುತ್ತಿದ್ದವರಿಗೆ ತಕ್ಕಂತೆ ಸ್ವಲ್ಪ ಧೈಯ್ಯ ವಾಗಿ ಕೆಲಸಮ ಡಿದನು, ಆದರೆ ಈತನು ಸುದಾ ಒಂದೇ ಸಾರಿ ಈ ಆಚಾರವನ್ನು ನಿಲ್ಲಿಸುವುದು ಸರಿಯಲ್ಲ ವೆಂತಲೇ ತಿಳಿದಿದ್ದನು, ಮನುಷ್ಯನನ್ನು ವೃದ್ಧಿಗೆ ತರುವ ಉಪಾಯಸಾಧನಗಳೆಲ್ಲವೂ ಕ್ರಿಯಾರೂಪವಾಗಿಮಾರ್ಪಡುವ ತನಕ ಆ ಸಾಧನೆಗಳು ಆಲೋಚನೆಗೆ ವಿರೋಧವಾಗಿಯೇ ಕಾಣಿಸುತ್ತಿರುವುವು, ಲಾಡ್೯ ಅಂಹರಸ್ಸನು ಸಹಗಮನ ಮಾಡುವ ಸ್ತ್ರೀಯರ ಸಂಖ್ಯೆ ತಗ್ಗು