ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ಮೇಲಿನ ಪಟ್ಟಿಯಲ್ಲಿ ತೋರಿಸಿದ ಸಂಖ್ಯೆಗಳೆಲ್ಲವೂ ಆಗಾಗ್ಗೆ ಪೋಲೀಸ್ ಉದ್ಯೋಗ ಸ್ಥರಿಂದ ಬರೆಯ ರಿಪೋರ್ಟುಗಳಿಂದ ಸಂಗ್ರಹಿಸಲ್ಪಟ್ಟು ಇದರಲ್ಲಿ ಒಂದು ವರ್ಷದ ಮೊ ತ್ರದ ಸಂಖ್ಯೆಯಲ್ಲಿ ಜಾತಿ ವಿವರಣೆಯನ್ನು ತಿಳಿಸುವೆವು, 1823ರಲ್ಲಿ 015 ಮಂದಿ ಸಹಗ ಮನ ಮಾಡಿದರು, ಇವರಲ್ಲಿ 274 ಬ್ರಾಹ್ಮಣರು, 35 ಕ್ಷತ್ರಿಯರು, 14 ವೈಶ್ಯರು, 292 ಶೂದ್ರರು, ಇವರಲ್ಲಿ 60 ವರ್ಷಕ್ಕೆ ಮೀರಿದ ವಯಸ್ಸಿನವರು 109 ಮಂದಿ, 40 ರಿಂದ 60 ವಯಸ್ಸಿನವರು: 226, 20 ರಿಂದ 40 ವರುಷದೊಳಗಿನವರು 208 , 20 ವರ್ಷಕ್ಕೆ ಒಳಪಟ್ಟಿ ವರು 72 ಮಂದಿ, ಈ ಅಂಕೆಗಳಿಂದ ನಿಕೃಷ್ಟ ಜಾತಿಗಳಲ್ಲಿ ಸುದಾ ಈ ಭಯಂಕರಕೃತ್ಯವು ಎಷ್ಟರಮಟ್ಟಿಗೆ ವಾಡಿಕೆಯಲ್ಲಿತ್ತೆಂಬುದು ಸ್ಪಷ್ಟವಾಗುವುದು, ಮತ್ತು ಈ ದುರಾಚಾರವು ಒಳ್ಳೆ ವಯಸ್ಸಿನ ಸ್ತ್ರೀಗಳನ್ನು ಮಾತ್ರವಲ್ಲದೆ ವೃದ್ಧರನ್ನು ಸುದಾ ಆಹುತಿಗೊಳುತ್ತಿತ್ತೆಂತಲೂ, ಬ್ರಿಟಿಷ್ ಅಧಿಕಾರಿಗಳು ಈ ಪದ್ಧತಿಯನ್ನು ನಿಲ್ಲಿಸಲಿಕ್ಕಾಗಿ ಮಾಡಿದ ಪ್ರಯತ್ನಗಳೆಲ್ಲವೂ ಸಫ ಲವಾಗದೆ ಹೋದುವೆಂತಲೂ ತಿಳಿಯಬರುತ್ತದೆ. ಇಲ್ಲಿ ಕೊಟ್ಟಿರುವ ಲೆಖ್ಯವು ಕೆಲವು ಮುಖ್ಯ ಪಟ್ಟಣಗಳದು. ಇದಲ್ಲದೆ ದೇಶದಲ್ಲೆಲ್ಲ ಇನ್ನು ಎಷ್ಟು ತುಂಬಿದ ಜೀವಗಳು ಬಲಿ ಕೊಡಲ್ಪಡುತ್ತಿದ್ದು ವೋ ನಮಗೆ ತಿಳಿಯದು, ಪ್ರಪಂಚದ ಜನರೆಲ್ಲರೂ ಈ ಘೋರಕೃತ್ಯ ವನ್ನು ಪ್ರತ್ಯಕ್ಷವಾಗಿ ನೋಡುತ್ತಲೇ ಇದ್ದರೂ ಅವರಲ್ಲಿ ಒಬ್ಬನಾದರೂ ಮಹಾಜನಮಧ್ಯ ದಲ್ಲಿ ಈ ವಿಷಯವನ್ನು ಕುರಿತು ಸಂಭಾಷಿಸದೆ ಇದ್ದರೂ ಅಂಧಹ ಸಮಯದಲ್ಲಿ ಮೊದಲು ಟಿಬೆಟ್ಟಿನಲ್ಲಿಯ ಸ್ತ್ರಗಳಿಂದ ಜಾತ್ಯಭಿಮಾನವನ್ನು ಕತ್ತು ಅಣ್ಣನಾದ ಜಗನ್ನೋ ಹನನು ತೀರಿಹೋದಾಗ ಅವನ ಶವದೊಂದಿಗೆ ಆತನ ಹೆಂಡತಿಯನ್ನು ಸುಡುತ್ತಿರುವು ದನ್ನು ಕಣ್ಣಾರನೋಡಿ 'ನಾನು ಬದುಕಿ ಇದ್ದಲ್ಲಿ ಈ ದುರಾಚಾರದ ಹುಟ್ಟಡಗಿಸಿಬಿಡು ವೆನು' ಎಂದು ಪ್ರತಿಜ್ಞೆ ಮಾಡಿದ್ದ ರಾಮಮೋಹನರಾಯನೊಬ್ಬನೇ ಆ ಅನಾಥ ಯುವ ತಿಯರ ಸಹಾಯಕ್ಕೋಸ್ಕರ ನಿಂತು, ಲಾರ್ಡ್ ವಿಲಿಯಂ ಬೆಂಟಿಂಕ್ ಕಾಲದಲ್ಲಿ ಸಹಗಮನ ವನ್ನು ಯಾರೂ ಮಾಡಕೂಡದು ಎಂಬ ಕಟ್ಟಪ್ಪಣೆ ಪ್ರಕಟಿಸಲ್ಪಡುವಂತೆ ಮಾಡಿದನು. - ಈ ದುರಾಚಾರವನ್ನು ನಿರ್ಮೂಲಮಾಡುವುದಕ್ಕೆ ಸಮ್ಮಾರದವರು ಇದುವರೆಗೆ ಹ ಲವು ಪ್ರಯತ್ನಗಳನ್ನು ಮಾಡುತ್ತಿದ್ದಂತೆ ತಿಳಿಯುತ್ತಿರುವಾಗ ಇದರ ಘನತೆಯನ್ನೆಲ್ಲಾ ರಾಮಮೋಹನನಿಗೆ ಕೊಡುವುದು ಹೇಗೆ ಎಂದು ಕೆಲವರು ಯೋಚಿಸುವರು. ಆದರೆ ಇತರ ಹೇತುಗಳಿಂದ ಸಂಪೂರ್ಣವಾಗಿ ಶ್ರದ್ಧೆಯನ್ನು ಹೊಂದದೆ ಇದ್ದ ಸಾರದವರಿಗೆ ಪ್ರೋತ್ಸಾಹ ಕೊಟ್ಟು ಪ್ರಜೆಗಳ ಪಕ್ಷವಾಗಿ ಈ ಅನರ್ಥಗಳನ್ನೆಲ್ಲ ತಿಳಿಸಿ ಸಫಲವಾಗುವ ತನಕ ದೃಢವಾಗಿ ಪ್ರಯತ್ನ ಮಾಡಿದವನು ಈ ಮಹಾತ್ಮನೇ, ಆದುದರಿಂದ ಈತನೇ ಇದಕ್ಕೆ ಕಾರಣನೆಂದು ಹೇಳುವುದು ಅತಿಶಯೋಕ್ತಿಯಲ್ಲವು. ಸಹಗಮನವು ಮಾಡಕೂಡದೆಂಬುದಕ್ಕೆ ರಾಮಮೋಹನನು ಬಂಗಾಳಿಭಾಷೆಯಲ್ಲಿ ಮೂರು ಗ್ರಂಥಗಳನ್ನು ಬರೆದು ತನ್ನ ಸ್ವಂತ ವೆಚ್ಚದಿಂದ ಅವುಗಳನ್ನು ಮುದ್ರಿಸಿ ಹಲವು ಸಾವಿರ ಪ್ರತಿಗಳನ್ನು ಉಚಿತವಾಗಿಯೇ ಜನರಲ್ಲಿ ಹಂಚಿದನು. ಒಂದೆರಡನೆಯ ಗ್ರಂಥಗಳಲ್ಲಿ