ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಇದನ್ನು ನಿಷೇಧಿಸಬೇಕೆಂಬ ತನ್ನ ಅಭಿಪ್ರಾಯವನ್ನು ಶಾಸ್ತ್ರ, ದೃಷ್ಟಾಂತಗಳಿಂದ ತೋರಿಸಿ ಮೂರನೆಯ ಗ್ರಂಧದಲ್ಲಿ ಪ್ರತಿಪಕ್ಷದವರ ಆಕ್ಷೇಪಣೆಗಳಿಗೆ ಸಮಾಧಾನಗಳನ್ನು ಬರೆದನು. ಈ ಮೂರು ಪುಸ್ತಕಗಳನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಪ್ರಧಮ ಪುಸ್ತಕವನ್ನು 1818 ರಲ್ಲಿ ಮುದ್ರಿಸಿ ಪ್ರಚುರವಾಡಿದನು, ಇವುಗಳಲ್ಲಿ 2 ನೆಯ ಪುಸ್ತಕವನ್ನು (ಮಾರ್ಕ್ಸಿಸ್ ಆಫ್ ಹೇಸ್ಟಿಂಗ್ಸ್' ಎಂಬ ಗೌರರ್‌ ಜನರಲ್ಲಿನ ಪವಣಿ ಯ ಅಂಕಿತದಿಂದ ಪ್ರಕಟಿಸಿ ದನು, ಯೂರೋಪಿಯನರಲ್ಲಿ ಕೆಲವರು ಸಹಗಮನವೆಂಬುದು ಹಿಂದೂಜನರ ಪವಿತ್ರಧರ ವೆಂತಲೂ, ಅವರಿಗೆ ಮುಖ್ಯ ವಾದ ವೇದವಿಧಿಗಳನ್ನನುಸರಿಸಿ ಮಾಡಲ್ಪಡುವ ಈ ಕಾವ್ಯವನ್ನು ತಾವು ಯಾರೂ ಅಡ್ಡಿ ಮಾಡಕೂಡದೆಂತಲೂ ವಾದಿಸುತ್ತಿದ್ದರು, ಅಂತವರಲ್ಲಿ 'ಬೆರ್ತೂ? ಎಂಬವನೇ ಮುಖ್ಯನು, ಈತನ ಹೆಸರಿನಿಂದ ಏರ್ಪಟ್ಟ ಬೆರ್ತ್ ಸೊಸೈಟಿ, ಬೆತೂ ಲೇಡೀಸ' ಕಾಲೇಜ' ಎಂಬಿವ್ರ ಈಗ ಕಲ್ಕತ್ತೆಯಲ್ಲಿವೆ. ಹೀಗೆ ತಿಳಿಯುತಿದ್ದವರಿಗೆಲ್ಲ ಇದು ವಿಹಿತವಾದ ಕರ್ಮವಲ್ಲವೆಂತಲೂ, ನೂತನ ಕಲ್ಪಿತವೆಂತಲೂ ಸ್ಪಷ್ಟವಾಗಿ ತಿಳಿಸಲಿಕ್ಕೊ ಸ್ಕರವೇ ರಾಮಮೋಹನನು ಈ ಗ್ರಂಧಗಳನ್ನು ಇಂಗ್ಲಿಷನಲ್ಲಿ ಬಗೆದನು. ಈ ಪುಸ್ತಕ ಗಳನ್ನೋದಿದಮೇಲೆ ಆತನ ಅಭಿಪ್ರಾಯಗಳೆಲ್ಲವೂ ಮಾರ್ಪಟ್ಟವು, ಬೆರ್ತೂ ಪಾಠಶಾಲೆ ಯನ್ನು ಕಟ್ಟಲಿಕ್ಕೆ ಆರಂಭಿಸಿದ ಮೊದಲನೆಯ ದಿನದಲ್ಲಿ 'ಸಹಗಮನಕ್ಕೆ ಅನುಕೂಲವಾಗಿ ಪ್ರವರ್ತಿಸಿದ ಆ ಅಪಕೀರ್ತಿಯನ್ನು ತೊಲಗಿಸಲಿಕ್ಕಾಗಿ ನಾನು ಹಿಂದೂ ಸ್ತ್ರೀಯರ ಹಿತ ವನ್ನು ಅಪೇಕ್ಷಿಸಿ ಅವರ ವಿದ್ಯಾಭಿವೃದ್ಧಿಯನ್ನು ಬಯಸಿ ಈ ಪಾಠಶಾಲೆಯನ್ನು ಸ್ಥಾಪಿ ಸುತ್ತಿದ್ದೇನೆ' ಎಂದು ಹೇಳಿದನು. ರಾಮ ಮೋಹನನು ತನ್ನ ಗ್ರಂಥದಲ್ಲಿ ಈ ಕೆಳಗಿನ ವಿಷಯಗಳನ್ನು ಕುರಿತು ಬಹಳವಾಗಿ ಚರ್ಚಿಸಿ ಬರೆದನು. (1) ವೇದಗಳ ಮೊದಲು ಮನುಸ್ಮೃತಿಯ ವರೆಗೆ ಎಲ್ಲಿಯೂ ಸಹಗಮನ ಮಾಡ ಲಿಕ್ಕೆ ಆಜ್ಞೆ ಕೊಡಲ್ಪಟ್ಟಿಲ್ಲ. ಆದುದರಿಂದ ಈ ಆಕಾರವು ಈಗಿನ ಕಾಲದವರಿಂದ ಕಲ್ಪಿ ಸಲ್ಪಟ್ಟು ದ್ದು, (2) ಸಹಗಮನವನ್ನು ಕುರಿತು ಬರೆಯಲ್ಪಟ್ಟಿರುವ ಗ್ರಂಧಗಳಲ್ಲಿಯು ಕೂಡಾ ಗೆ ಪತಿಯ ಮರಣಾನಂತರದಲ್ಲಿ ಇದೊಂದೇ ಗತಿಯೆಂದು ನಿರ್ಣಯಿಸಲ್ಪಟ್ಟಿಲ್ಲ. ಶಾಶ್ವತ ಸೌಲ್ಯಗಳನ್ನು ವರ್ಜಿಸಿ ಇರಬಹುದೆಂದು ಕೂಡ ಹೇಳಲ್ಪಟ್ಟಿದೆ ಆದುದರಿಂದ ಆ ವಾಕ್ಯದಂತೆ ಯರು ಬ್ರಹ್ಮಚರವ್ರತವನ್ನವಲಂಬಿಸಿ ಪುಣ್ಯ ಕಾಕ್ಯಗಳನ್ನು ಮಾ ಡುತ್ತಾ ತಮ್ಮ ಜೀವಿತಕಾಲವನ್ನು ಕಳೆಯಿಬಹುದು, ದರಿದ್ರ ಸ್ತ್ರೀಯರು ಅಪಕೀರಿ ಯ ಪಾಲಾಗಬಾರದೆಂದು ಅವರನ್ನು ಸುಟ್ಟು ಹಾಕುವದಕ್ಕಿಂತ ಬೇರೆ ಯಾವ ಉಪಾಯ ವಾದರೂ ಇಲ್ಲವೆ ? (3) ಸಹಗಮನ ಮಾಡುತ್ತಿರುವ ಸ್ತ್ರೀಯರಲ್ಲಿ ಅನೇಕರು ತಮಗೆ ಸಮ್ಮತವಿಲ್ಲದಿ ಧ್ವರ ಬಂಧು ಜನರ ಒಲವಂತದ ಮೂಲಕ ಸತ್ತುಹೋಗುತ್ತಿರುವರು. ಸಾಮಾನ್ಯವಾಗಿ ಸ್ತ್ರೀಯರು ಸ್ವತಂತ್ರವಾಗಿ ವರ್ತಿಸುವುದು ಅಸಾಧ್ಯವಾದುದ