ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ೫೬. ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ರಿಂದ ವಿಧಿ ಇಲ್ಲದೆ ಸಹಗಮನ ಮಾಡುತ್ತಿದ್ದರು, ಕೆಲವು ಸಂದರ್ಭಗಳಲ್ಲಿ ಅವರ ಸಮೀ ಪ ಬಂಧುಗಳು, ಅವರ ಆಸ್ತಿಯನ್ನು ಅಪಹರಿಸಬೇಕೆಂಬ ಆಸೆಯಿಂದಲೋ ಅಥವಾ ಅವ ರನ್ನು ಸಂರಕ್ಷಿಸುವ ಭಾರವು ತಮ್ಮ ಮೇಲೆ ಬೀಳುವುದೆಂಬ ಭಯದಿಂದಲೇ ಈ ಅನಾಧ ಯುವತಿಯರಿಗೆ 'ನೀನು ಸಹಗಮನ ಮಾಡಿದರೆ ಸ್ವರ್ಗ ಸುಖವನ್ನು ಸೂರೆಗೊಳ್ಳುವೆ' ಯೆಂತಲ 'ಬದುಕಿದ್ದರೆ ಬಹುವಿಧದ ಕಷ್ಟಗಳಿಗೆ ಗುರಿಯಗುವೆ' ಯೆಂತಲೂ ಮನಸ್ಸಿಗೆ ನಾಟುವಂತೆ ಬೋಧಿಸುತ್ತಿದ್ದರು, ತಮ್ಮ ಸೌಖ್ಯಗಳಿಗೆ ಮೂಲಭೂತನಾದ ಪತಿಯು ಮೃತನಾದುದರಿಂದ ಉಂಟಾದ ದುಃಖದ ದೆಸೆಯಿಂದ ಈ ಪ್ರಪಂಚವೆಲ್ಲವೂ ಕತ್ತಲೆಯಾಗಿ ಕಾಣಿಸುತ್ತಿರಲು ಮೈಮೇಲೆ ಎಚ್ಚರವಿಲ್ಲದೆ ಪರವಶರಾಗಿ ಗೋಳಿಡುತ್ತಿರುವ ಅನಾಥಸ್ತ್ರೀಯ ರಿಗೆ ಅಂಧ ಉಪದೇಶಗಳು ಆ ವೇಳೆಯಲ್ಲಿ ವ್ಯರ್ಧವಾದಾವೆ ? ಅಯ್ಯೋ ! ಪಾಪ ! ಆ ದೀನೆ ಯರು ದುಃಖಪೀಡಿತೆಯರಾಗಿ ವಿಚಾರಜ್ಞಾನವಿಲ್ಲದೆ ಒಡನೆಯೇ ಸಹಗಮನಕ್ಕೆ ಸಮ್ಮತಿಸ ಬೇಕಾದ ಸಂಭವವು ಬರುತ್ತಿತ್ತು, ಒಂದೊಂದುವೇಳೆ ಯಾವಳಾದರೂ ಅರ್ಧಾಂಗೀಕಾರ ವಾಗಿ ಸಂಧಿಗರ್ಧದ ಮಾತುಗಳನ್ನಾಡುತ್ತಿದ್ದರೆ ಅವಳಿಗೆ ಮಾದಕ ಪದಾರ್ಥಗಳನ್ನು ಕೊಟ್ಟು ಬುದ್ದಿ ಭ್ರಂಶವಾಗುವಂತೆ ಮಾಡಿ, ತಾವು ಯೋಚಿಸಿದ ಘೋರ ಕೃತ್ಯಕ್ಕೆ ಸಮ್ಮತಿಸ ಜಿಯುತ್ತಿದ್ದರು. ಸತಿಯೆಂದರೆ ಪತಿವ್ರತೆ ಈ ಸಂದರ್ಭದಲ್ಲಿ ಸಹಗಮನ ಮಾಡಿದ ಶ್ರೀ ಯೆಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ. ಸತಿಯಾಗುವೆನೆಂದು ಒಂದಾವರ್ತಿ ಬಾಯಿಂದ ಹೊರಟಕೂಡಲೇ ಆಮೇಲೆ ಎಷ್ಟು ವಿಧವಾಗಿ ಬೇಡಿಕೊಂಡರೂ ಮೊದಲು ಹೇಳಿದಂತೆ ಆ ಹೀಗೆ ಸಹಗಮನವು ತಪ್ಪುತ್ತಿರಲಿಲ್ಲ. ಅಂಧವರನ್ನು ಬಲವಂತದಿಂದಲಾದರೂ ಸುಟ್ಟು ಬಿ ಡುತ್ತಿದ್ದರು, ಒಂದುವೇಳೆ ಯಾವಳಾದರೂ ಸತಿಯಾಗುವೆನೆಂದು ಹೇಳಿದಮೇಲೆಯಾಗಲಿ, ಚಿತಿಯಿಂದಲಾಗಲಿ, ಭಯದಿಂದ ಓಡಿಹೋದರೆ ಹಾಗೆ ಮಾಡಿದ ಸ್ತ್ರೀಯನ್ನು ಪುನಹ ಮನೆಗೆ ಬರಗೊಳಿಸುತ್ತಿರಲಿಲ್ಲ, ಅಂಧವಳನ್ನು ಕುಲದಲ್ಲಿಯೂ ಕೂಡುತ್ತಿರಲಿಲ್ಲ, ಆದುದರಿಂದ ಆಂಧವಳ ಬಾಳು ಸಾವಿಗಿಂತ ಕಷ್ಟತರವಾಗಿದ್ದಿತು, ಸಹಗಮನ ಮಾಡುವ ಸ್ತ್ರೀಯನ್ನು ಚತಿಯ ಬಳಿಗೆ ಒಳ್ಳೆಯ ಮರ್ಯಾದೆಯಿಂದಲೂ ವಸ್ತ್ರಾಭರಣಾದ್ಭಲಂಕಾರಗಳಿಂದಲೂ, ವಾದಗಳಿಂದಲೂ ಕರೆದುಕೊಂಡು ಹೋಗಿ, ಅಲ್ಲಿ ಒಡವೆ ವಸ್ತುಗಳನ್ನೆಲ್ಲಾ ಕಸುಕೊಂಡು, ಬಲವಾದ ಹಗ್ಗ ಗಳಿಂದ ಪತಿಯ ಹೆಣದೊಂದಿಗೆ ಸೇರಿಸಿ ಬಿಗಿದು ಕಟ್ಟಿ ಅದರಮೇಲೆ ಎತ್ತರ ವಾಗಿ ಸೌದೆಗಳನ್ನು ಸೇರಿಸಿ ಉರಿಗೊಳಿಸಿ, ಸಂಪೂರ್ಣವಾಗಿ ಉರಿದು ಜ್ವಾಲೆಯು ಹಬ್ಬಿಕೊ ಳ್ಳುವ ಹೊತ್ತಿಗೆ ಬಾಧೆಯಿಂದ ಅ ವನಿತೆಯು ಹೊರಡಲಿಕ್ಕೆ ಅವಕಾಶವಿಲ್ಲದಂತೆ ಉದ್ದವಾದ ಬಿದಿರುಬೊಂಬುಗಳಿಂದ ಅದುಮಿ ಹಿಡಿದು, ಅವಳ ಆರ್ತಶಬ್ದಗಳು ಕೇಳಬಾರದಂತೆ ವಾರ್ಡ ನಿಗಳನ್ನು ಮಾಡಿಸುತ್ತಾ ತುದಿಗೆ ಚಿತಿಯಿಂದ ತಲೆಬುರುಡೆಯೊಡೆದ ಶಬ್ದವು ಹೋರಟಕೂಡಲೇ ಚಪ್ಪಾಳೆತಟ್ಟಿ (ಆಯಿತು. ಆ ಮಹಾಪತಿವ್ರತೆಯು ನಾವು ನೋಡುತ್ತಿರುವಾಗಲೇ ಸ್ವರ್ಗ ಕ್ಕೆ ಹೋಗಿ ತನ್ನ ಪತಿಯ ತೊಡೆಯನ್ನಲಂಕರಿಸಿದಳು' ಎಂದು ಹಲವು ಬಗೆಯಿಂದ ಹೊಗ