ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೬೧ ಹೇಳುವ ಪಕ್ಷಕ್ಕೆ ಸೇರಿದವನಾಗಿದ್ದರೂ, ಅನಂತರ ಹಿಂದೂ ಕಾಲೇಜಿನಲ್ಲಿ ಒಬ್ಬ ಮುಖ್ಯ ಸಭಾಸದನಾಗಿದ್ದುದರಿಂದ ಅಲ್ಲಿಯ ಪಂಡಿತರ ಅಭಿಪ್ರಾಯಕ್ಕೆ ಅನುಕೂಲನಾಗಿ ಈಗ ಅವರ ಪಕ್ಷದಲ್ಲಿಯೇ ಕೆಲಸಮಾಡತೊಡಗಿದನು. ಧರ್ಮಸಭೆಯವರು ಹೀಗೆ ಎಷ್ಟೆಷ್ಟೋ ಕಷ್ಟ ಪಟ್ಟು 800 ಸಹಿಗಳು ತಮ್ಮ ವಿಜ್ಞಾಪನ ಪತ್ರವನ್ನು ಜನವರಿ 14ರಲ್ಲಿ ಲಾರ್ಡ್ ವಿಲ್ಲಿಯಂ ಬೆಂಟಿಂಕನಿಗೆ ಒಪ್ಪಿಸಿದರು. ಈ ವಿಜ್ಞಾಪನೆಗೆ ಒಂದು ಕಾಗದವನ್ನು ಜಂಟಿಸಿ ಅದರಲ್ಲಿ ಸಹ ಗಮನವು ಆದರಣೀಯವೇ ಎಂತ ಬೋಧಿಸುವ ಶಾಸ್ತ್ರವನ್ನು ಉದಾಹರಿಸಿ ಸರ್ಕಾರದವರು ಅಕ್ರಮವಾಗಿ ಹಿಂದೂ ಮತಾಚಾರಗಳಲ್ಲಿ ಪ್ರವೇಶಿಸಿದರೆಂತಲೂ ಇದು ಪಾರ್ಲಿಮೆಂಟಿನವರ ಅಭಿಪ್ರಾಯಕ್ಕೂ ಶಾಸನಗಳಿಗೂ ಸ್ಪಷ್ಟವಾಗಿ ವಿರೋಧವಾಗಿದೆಯೆಂತಲೂ ವಿಶದಪಡಿಸಿದರು. ಹೀಗೆ ಎಷ್ಟು ಅಟ್ಟಹಾಸಮಾಡಿದರೂ ನ್ಯಾಯಮೂರ್ತಿಯಾದ ಆ ಗವರರ ಜನರ ೪ನು ನಾನು ಪ್ರಕಟಿಸಿದ ಅಪ್ಪಣೆಯು ಅಕ್ರಮವೆಂದು ಭಾವಿಸಿದಲ್ಲಿ ನೀವೆಲ್ಲರೂ ಸೇರಿ ಇಂಗ್ಲೆಂಡಿನ ರಾಜರಿಗೆ ಒಂದು ವಿಜ್ಞಾಪನೆಯನ್ನು ಬರೆದುಕೊಳ್ಳಿರಿ, ನಾನು ಅದನ್ನು ಸಂತೋ ಷಪೂರ್ವಕವಾಗಿ ಅವರಬಳಿಗೆ ಕಳುಹಿಸುವೆನು ಎಂದು ಪ್ರತ್ಯುತ್ತರವಿತ್ತನು. ಎರಡು ದಿನಗಳ ತರುವಾಯ ಜನವರಿ 16 ರಲ್ಲಿ ರಾಮಮೋಹನನ ಕೃತಜ್ಞತಾಪತ್ರವು ರಾಜಪ್ರತಿನಿಧಿಯವರಿಗೆ ಒಪ್ಪಿಸಲ್ಪಟ್ಟಿತು, ಇದು ಬಂಗಾಳೀ ಮತ್ತು ಇಂಗ್ಲಿಷ್ ಭಾಷೆಗ ಇಲ್ಲಿ ಬರೆಯಲ್ಪಟ್ಟು ಲಾರ್ಡು ಎಲ್ಲಿಯಂ ಬೆಂಟಿಂಕರ ಸಮ್ಮುಖದಲ್ಲಿ ಓದಲ್ಪಟ್ಟಿತು. ಪ್ರತಿಪಕ್ಷದವರು ಎಷ್ಟು ಭಯಪಡಿಸಿದರೂ ರಾಮಮೋಹನನು ಈ ಕೃತಜ್ಞತಾಸೂ ಚಕಪತ್ರಿಕೆಗೆ ಮುನ್ನೂರು ಸಹಿಗಳನ್ನು ಮಾಡಿಸಿದ್ದನು. ರಾಮಮೋಹನನು ತನ್ನ ವಿದ್ಯಾ ಚಾತುರವನ್ನೆಲ್ಲಾ ತೋರಿಸಿ ಬರೆದ ಈ ಪತ್ರದಲ್ಲಿ ವಂದನೆಯ ವಾಕ್ಯಗಳೆಲ್ಲವೂ ಶ್ಲಾಘನೀ ಯಗಳಾಗಿದ್ದರೂ ತಮ್ಮಿಂದ ಅನುಗ್ರಹಿಸಲ್ಪಟ್ಟ ಈ ಅಸಾಧಾರಣ ಕೃಪಾರೂಪವಾದ ಶಾಸನ ದಿಂದುಂಟಾಗುವ ಫಲವನ್ನು ಮುಂದೆ ನಾವೂ ನಮ್ಮ ಸಂತತಿಯವರೂ ಅನುಭವಿಸತಕ್ಕವರಾ ಗಿದ್ದರೂ ಪ್ರಕೃತದಲ್ಲಿ ಈರ್ಷ್ಯಾಭಿಪ್ರಾಯಗಳಿಂದ ಪ್ರತಿಭಟಿಸಿ ನಮ್ಮಲ್ಲಿ ಒಡಂಬಡದವರ ಲೋಪಗಳನ್ನು ಕ್ಷಮಿಸಬೇಕೆಂದು ಪ್ರಾರ್ಥಿಸುವೆವು ಎಂದು ಬರೆದ ಕೊನೆಯ ಪ್ರಾರ್ಥ ನಾ ವಾಕ್ಯವು ಲಾರ್ಡ್ ವಿಲ್ಲಿಯಂ ಬೆಂಟಿಂಕರವರಿಗೆ ತುಂಬ ಆನಂದದಾಯಕವಾಗಿದ್ದುದ ರಿಂದ ಆತನು ರಾಮಮೋಹನನ ವಿನಯಕ್ಕೂ, ಸಾಹಸಕ್ಕೂ ಸಂತೋಷಿಸಿ ಸಾಧ್ಯವಾದಮ ಟ್ಟಿಗೆ ಅಂತಹ ಮೃದುಪದಗಳಿಂದಲೇ ತನ್ನ ಸಂತೋಷಸೂಚನೆಯ ಪ್ರತ್ಯುತ್ತರವನ್ನಿತ್ತನು, ಧರ್ಮಸಭೆಯವರು ರಾಜಪ್ರತಿನಿಧಿಯಿಂದ ಕೊಡಲ್ಪಟ್ಟಿ, ಪ್ರತ್ಯುತ್ತರವನ್ನು ಕೇಳಿ ಸುಮ್ಮನೆ ಇರಲಿಲ್ಲ. ಮರುದಿನವೇ ದೊಡ್ಡ ಸಭೆ ಸೇರಿಸಿ ಅಲ್ಲಿ ರಾಜಪ್ರತಿನಿಧಿಯಿಂದ ಕೊಡ ಲ್ಪಟ್ಟ ಪ್ರತ್ಯುತ್ತರವನ್ನೋದಿದರು. ಬಹಳಹೊತ್ತು ಈ ವಿಷಯವಾಗಿ ಚರ್ಚೆ ನಡೆಯಿತು, ಕೊನೆಗೆ ಸಿಮೆಯಲ್ಲಿ ರಾಜನ ಬಳಿ ಮೊರೆಯಿಡಬೇಕೆಂದು ನಿಶ್ಚಯಿಸಿದರು. ಅಲ್ಲಿಗೆ ಕಳು