ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೬೩ ಕಲಹಗಳನ್ನು ಹೆಚ್ಚಿಸಿದರೂ ಆ ಬಾಧೆಗಳನ್ನು ಸಹಿಸಿ ಪತಿಯೇ ತಮಗೆ ರಕ್ಷಕನೆಂದು ನಂಬಿ, ಅವನೊಂದಿಗೆ ತಾವೂ ಸಾಯುವರು, ಸಹಗಮನ ಮಾಡದೆ ಬದುಕಿಕೊಂಡಿರುವವರು ತಾವು ಇದ್ದಷ್ಟು ದಿವಸವೂ ದುಸ್ಸಹವಾದ ಒತ್ತಾಯದ ವೈಧವ್ಯವನ್ನು ಅನುಭವಿಸುತ್ತಿರುವರು. ಅವರು ಸ್ವಾತಂತ್ರಾಭಿಲಾಷೆಯುಳ್ಳವರಾಗಿದ್ದಲ್ಲಿ ಇಂತಹ ನಿರ್ಬಂಧಗಳಿಗೆ ಹೇಗೆ ಒಳಪಡು ವರು ? ಆದುದರಿಂದ ಈ ಸಹಗಮನವೆಂಬ ಘೋರ ದುರಾಚಾರಪೀಡಿತರಾದ ಈ ಸ್ತ್ರೀಯ ರಲ್ಲಿ ಕನಿಕರವಿಟ್ಟು ಅವರ ಸ್ಥಿತಿಯನ್ನು ಕ್ರಮಪಡಿಸಬೇಕು. (3) ಅವರಿಗೆ ಭಕ್ತಿ ಶ್ರದ್ಧೆಗಳು ಕಡಿಮೆಯೆಂದು ಹೇಳುವರು, ಇದು ತುಂಬ ಅನ್ಯಾಯ, ಕೆಲವು ಗಂಡಸರು ಅವರನ್ನು ಎಂತಹ ಕಷ್ಟಕ್ಕೂ ದೂಷಣೆಗೂ ಬಯ್ದು ಳಿಗೂ ಒಳಪಡಿಸಿದರೂ ಅವುಗಳನ್ನೆಲ್ಲಾ ಸೈರಿಸಿಕೊಂಡಿರುವುದು ಭಕ್ತಿಯಿಂದಲೇ ಅಲ್ಲವೇ ? ವಿವಾ ಸಕಾಲದಲ್ಲಿ ತನ್ನ ಅರ್ಧಾಂಗಿಯಾಗಿ ಅಂಗೀಕರಿಸಿದ ಪತ್ನಿ ಯನ್ನು ತನ್ನ ಮನೆಗೆ ತಂದುಕೊಂಡ ಮೇಲೆ ದಾಸಿಗಿಂತಲೂ, ಪಶುಗಳಿಗಿಂತಲೂ ನೀಚವಾಗಿ ಗಂಡನು ನೋಡುತ್ತಿರುವನು, ಮಧ್ಯ ಮತರಗತಿಯಲ್ಲಿ ಇರುವವರ ಮನೆಗಳಲ್ಲಿ ಬಿಸಿಲು ಮಳೆ ಚಳಿ ಎನ್ನದೆ ಎಲ್ಲರಿಗಿಂತ ಮುಂದಾಗಿ ಎದ್ದು ಮನೆಗಳನ್ನು ಸಾರಿಸಿ, ಪಾತ್ರೆಗಳನ್ನು ಬೆಳಗಿ, ಹಗಲು ರಾತ್ರಿಗಳಲ್ಲಿ ಭೋಜನಪಾನೀ ಯಗಳನ್ನೆಲ್ಲಾ ಸಿದ್ಧ ಪಡಿಸಿ ಮನೆಕೆಲಸಗಳನ್ನೆಲ್ಲಾ ಮಾಡುವ ಭಾರವು ನ್ತಿ ಯರಮೇಲೆ ಯೇ ಬಿದ್ದಿರುವುದು, ಸಾಮಾನ್ಯ ಸ್ಥಿತಿಯಲ್ಲಿ ಇರತಕ್ಕ ವರ ಮನೆಗಳು ಪರಿಚಾರಿಕೆಯರು ಮಾಡತಕ್ಕ ಕೆಲಸಗಳನ್ನೆಲ್ಲಾ ಮನೆಯ ಹೆಂಗಸರೇ ಮಾಡುವರು, ಇವೆಲ್ಲವೂ ಹಾಗರಲಿ. ಅನ್ಯದೇಶೀಯರಂತಲ್ಲದೆ ನಾವು ಬಹುಕಾಲದಿಂದಲೂ ಸಮಷ್ಟಿ ಕುಟುಂಬಿಗಳಾಗಿ ಸಂಸಾರ ಮಾಡುತ್ತಿರುವುದರಿಂದ ಮನೆಗಳಲ್ಲಿಯ ವರುಷರಿಗೆಲ್ಲಾ ಸ್ತ್ರೀಯರು ತಗ್ಗಿ ರಬೇಕಾದುದೂ ಅವರ ವಾವೆಗಳನ್ನನುಸರಿಸಿ ಮರಾದೆಗಳನ್ನು ಸಲ್ಲಿಸಬೇಕಾದುದೂ ನಮಗೆ ತಿಳಿದ ವಿಷಯವೇ ಆಗಿದೆ. ಕೆಲವರು ಪುರುಷರು ತಮ್ಮ ಕಣ್ಣೆದುರಿಗೆನೇ ವ್ಯಭಿಚಾರಾದಿ ಅಕೃತ್ಯಗಳನ್ನು ಮಾಡುತ್ತಿದ್ದರೂ ಸ್ವತಂತ್ರವಿಹೀನೆಯರಾದ ಅವರ ಹೆಂಡಿರು ಏನೂ ಮಾಡಲಾರದೆ ಸುಮ್ಮನೆ ಇರಬೇಕಾಗಿ ಬಂದಿರುವುದು, ಇಂತಹ ಅಕ್ರಮಗಳು ಎಷ್ಟೆಷ್ಟೋ ಇರುವುವು, ಹಿಂದೂ ಕುಟುಂಬಗಳಲ್ಲಿ ಸ್ತ್ರೀಯರು ತಮ್ಮ ಪತಿಗಳಲ್ಲಿ ಪರಿಪೂರ್ಣವಾದ ಭಕ್ತಿಶ್ರದ್ಧೆಗಳುಳ್ಳುವರೆಂ ಬುದಕ್ಕೆ ಇದಕ್ಕಿಂತಲೂ ಬೇರೊಂದು ನಿದರ್ಶನವು ಬೇಕೆ ? ಸ್ತ್ರೀಯರಲ್ಲಿ ಒಬ್ಬಳು ದು ರ್ವತ್ರನೆಯುಳ್ಳವಳಾದರೆ ಇಂತಹ ದೋಷವನ್ನು ಸ್ತ್ರೀ ಜಾತಿಯಲ್ಲಿಯೇ ಆರೋಪಿಸುವುದು ಎಂತಹ ನ್ಯಾಯವು ? ಅನಾಥ ಸ್ವಿ ಯರ ಜೀವಿತಗಳು ದುಃಖಸಮುದ್ರದಲ್ಲಿ ಮುಳುಗುವುದು ರಾಮಮೋ ಹನನಿಗೆ ಚೆನ್ನಾಗಿ ತಿಳಿದಿತ್ತು, ಆತನು ತನ್ನ ಗ್ರಂಥಗಳಲ್ಲಿ ಅಲ್ಲಲ್ಲಿ ಈ ವಿಷಯವನ್ನು ಸಂಕ್ಷೇಪ ವಾಗಿ ಬರೆದಿರುವನು, ಆದರೆ ವಿಧವಾ ವಿವಾಹದ ಆವಶ್ಯಕತೆಯನ್ನು ಕುರಿತು ಆಲೋಚಿಸಿದುದೂ ಇಲ್ಲದುದೂ ನಮಗೆ ಸ್ಪಷ್ಟವಾಗಿ ತಿಳಿಯದು, ರಾಮಮೋಹನನು ಎತಂತುವಿವಾಹವು ಕರ್ತ ವ್ಯವೆಂದು ಭಾಸಿಸುವ ಪಕ್ಷದವನೇ ಎಂತಲೂ, ಆ ವಿಷಯವನ್ನು ಕುರಿತು ಒಂದು ಗ್ರಂಥ