ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಜು ರಾಮಮೋಹನರಾಯರ ಜೀವಿತ ಚರಿತ್ರೆ, ೬2 ನಾಮಮಾತಾವಶಿಷ್ಟವಾಗುವ ಸ್ಥಿತಿಗೆ ಬಂದುದಕ್ಕೆ ನನ್ನ ಮನಸ್ಸಿನಲ್ಲಿ ತುಂಬಾ ವಿಚಾರ ವಾಗಿದೆ, ಆದುದರಿಂದ ಪ್ರಜೆಗಳ ಕ್ಷೇಮವನ್ನು ವಿಚಾರಿಸಿ ಅವರ ಮಾತೃಭಾಷೆಯಾದ ಸಂಸ್ಕೃತ ಭಾಷಾಭಿವೃದ್ಧಿಗೋಸ್ಕರ ಇದುವರೆಗೆ ಬನಾರಸಿನಲ್ಲಿರುವ ಕಾಲೇಜ್ ಮಾತ್ರ ವಲ್ಲದೆ ಪ್ರಸಿದ್ಧವಾದ ಮತ್ತೆರಡು ಪಟ್ಟಣಗಳಲ್ಲಿ ಎರಡು ಸಂಸ್ಕೃತ ಕಾಲೇಜುಗಳನ್ನು ಸ್ಥಾಪಿಸತಕ್ಕದ್ದು” ಎಂದು ಸತ್ಕಾರದವರಿಗೆ ಬರೆದನು, ಅದರಮೇಲೆ 1813 ರಲ್ಲಿ ಹೊ ರಟ ಕಂಪೆನಿಯ ಸನ್ನದಿನಲ್ಲಿ ಹಿಂದೂ ಪ್ರಜೆಗಳ ವಿದ್ಯಾಭಿವೃದ್ಧಿಗಾಗಿ ವರುಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡತಕ್ಕುದೆಂದು ಏರ್ಪಟ್ಟಿತು. ಆದರೆ ಇದು ದೇಶೀಯ ವಿದ್ಯಾಭಿವೃದ್ಧಿಗೆಂತಲಾಗಲಿ, ಪಾಶ್ಚಾತ್ಯ ವಿದ್ಯಾಬೋಧನೆಗೆಂತಲಾಗಲಿ ಸ್ಪಷ್ಟ ಪಟ್ಟಿರಲಿಲ್ಲ. 1893 ನೆಯ ವರುಷದ ತನಕ ಈ ಹಣವು ಯಾವ ವಿಧದಿಂದಲೂ ವಿನಿಯೋಗಿಸಲ್ಪಡದೆ ಹಾಗೆಯೇ ಉಳಿಸಲ್ಪಟ್ಟಿತ್ತು. ರಾಮಮೋಹನನು ಕಲ್ಕತ್ತೆಯಲ್ಲಿ ವಾಸವನ್ನೇರ್ಪಡಿಸಿಕೊಳ್ಳುವ ಕಾಲಕ್ಕೆ ಇಂಗ್ಲಿ ಪ್ ವಿದ್ಯಾಸ್ಥಿತಿಯು ಸತ್ಕಾರದ ಆದರವನ್ನು ಹೊಂದದೆಯೇ ಇತ್ತು, ಆಸಕ್ತಿಯುಳ್ಳ ಕೆಲವರು ಮಾತ್ರ ಸ್ವಂತ ಪಾಠಶಾಲೆಗಳಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಮಾಡಿಸುತ್ತಿದ್ದರು. ಮತ್ತೆ ಕೆಲವರು ಬಗಹಾಂಪುರದಲ್ಲಿ ಪಾದರಿಗಳ ಅನುಗ್ರಹವನ್ನು ಸಂಪಾದಿಸಿ ಅವರಿಂದ ಸ್ವಲ್ಪ ಮಟ್ಟಿಗೆ ವಿದ್ಯಾ ಜ್ಞಾನವನ್ನು ಪಡೆಯುತ್ತಿದ್ದರು. ಆದುದರಿಂದ ಕಲ್ಯತೆಗೆ ಬಂದ ಸ್ವಲ್ಪ ಕಾಲದೊಳಗಾಗಿಯೇ ರಾಮಮೋಹನನಿಗೆ ಒಂದು ಹಿಂದೂಕಾಲೇಜನ್ನು ಸ್ಥಾಪಿಸ ಬೇಕೆಂಬ ಅಭಿಪ್ರಾಯವು ಹುಟ್ಟಿತು, ಆ ಕಾಲದಲ್ಲಿ ಸ್ಕಾಟ್ಲಂಡ್ ದೇಶದಲ್ಲಿ 1775 ರಲ್ಲಿ ಹುಟ್ಟಿ, ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಕಲ್ಕತ್ತೆಗೆ ಬಂದು ಗಡಿಯಾರಗಳನ್ನು ರಿಪೇ ರಿಮಾಡುವ ವೃತ್ತಿಯನ್ನವಲಂಬಿಸಿದ ಡೇವಿಡ್ ಹೇರ್” ಎಂಬ ಯೂರೋಪಿಯನೊಬ್ಬ ನಿದ್ದನು, ಆತನ ಹೆಸರಿನ ಬೀದಿಯೊಂದು ಕಲ್ಕತ್ತಾ ಪಟ್ಟಣದಲ್ಲಿ ಈಗಲೂ ಪ್ರಸಿದ್ಧವಾಗಿದೆ. ಈತನು ಕೆಲವು ದಿನಗಳಾದಮೇಲೆ ತನ್ನ ಉದ್ಯೋಗವನ್ನು ಬಿಟ್ಟು ಬಿಟ್ಟು ಅಂದಿನಿಂದ ತನ್ನ ಜೀವವಿರುವತನಕ (1842ನೇ ಜೂ೯) ಹಿಂದೂದೇಶೀಯರ ಅಭಿವೃದ್ಧಿಗಾಗಿಯೇ ಶ್ರಮಿಸಿ ಕಾಲವನ್ನು ಕಳೆದನು. ತಾನು ಅಷ್ಟರ ವಿದ್ಯಾವಂತನಾಗಿದ್ದರೂ ಈತನು ಒಂದೂದೇಶೀ ಯರಲ್ಲಿ ಪಾಶ್ಚಾತ್ಯ ವಿದ್ಯಾ ನಾಗರಿಕತೆ ಮುಂತಾದುವುಗಳನ್ನು ವ್ಯಾಪನೆಗೊಳಿಸುವುದೇ ತನ್ನ ಕರ್ತವ್ಯವೆಂದು ಭಾವಿಸಿ ವಿವಾಹವನ್ನೇ ಅಪೇಕ್ಷಿಸದೆ, ಹಿಂದೂ ಬಾಲಕರನ್ನೇ ತನ್ನ ಮಕ್ಕ ಟೆಂದು ತಿಳಿದು, ಪ್ರೇಮದಿಂದ ಅವರಿಗೆ ವಿದ್ಯಾದಾನ ಮಾಡಿದನು. ಹಿಂದೂದೇಶಾಭಿಮಾನಿ ಯಾಗಿಯೂ, ಹಿಂದೂ ಜನರ ಕೃತಜ್ಞತೆಗೆ ಪಾತ್ರನಾಗಿಯೂ ಇದ್ದ ಈ ಮಹಾತ್ಮನ ಜೀವಿತ ಚರಿತ್ರೆಯನ್ನು ( ಬಾಬುಪ್ಯಾರೀಚಂದ್ರಮಿತ್ರ ” ಎಂಬ ಬಂಗಾಳಿಯೊಬ್ಬನು ಇಂಗ್ಲಿಷಿನಲ್ಲಿ ಬರೆದಿರುವನು, ಈ < ಡೇವಿಡ್ ಹೇರ್” ಎಂಬಾತನು ತನ್ನ ಸಭಾರಂಭದಿಂದ ರಾಮಮೋಹನನ ಪರಿಚಿತನಾಗಿ ಸ್ನೇಹಿತನೆನಿಸಿಕೊಂಡನು, ಈ ಉಭಯರ ಅನ್ನೋನ್ಯ ಸ್ನೇಹದಿಂದ ಉಂಟಾದ