ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಆದರೆ ಇದು ನಿಜವೆಂದು ನಂಬಲಿಕ್ಕೆ ತಕ್ಕ ಆಧಾರಗಳು ಯಾವುವೂ ಇಲ್ಲ, ಮತ ವಿಷಯಗಳಲ್ಲಿ ಮಾತ್ರವಲ್ಲ, ರಾಜಕೀಯ ತಂತ್ರಗಳಲ್ಲಿ ಕೂಡ ಸಂಪೂರ್ಣವಾಗಿ ಕೆಲಸಮಾ ಡುತ್ತಿದ್ದ ರಾಮಮೋಹನನು ಪತ್ರಿಕೆಗಳಿ೦ದಲಾಗುವ ಲಾಭಗಳನ್ನೂ, ಅವುಗಳಿಗೆ ಸ್ವಾತಂ ತ್ರವನ್ನು ಕೊಡುವುದುಂದುಂಟಾಗುವ ಸತ್ಪಲಗಳನ್ನೂ ಆಗಲೇ ತಿಳಿದುಕೊಂಡು ಸರಕಾರದ ವರಿಂದುಂಟಾಗುವ ಲಾಭಗಳಿಗೆ ಕೃತಜ್ಞತೆಯನ್ನು ತೋರಿಸುತಿದ್ದನು. ಒಂದೊಂದುವೇಳೆ ಪ್ರಭುತ್ವದಲ್ಲಿಯ ಲೋಪಗಳನ್ನು ಕುರಿತು ಚರ್ಚಿಸುತ್ತಾ ವ್ಯಾಸಗಳನ್ನು ಬರೆಯುತ್ತಾ ಬಂ ದನು, ಈತನು ಇಂಗ್ಲೆಂಡಿಗೆ ಹೋದಾಗ ಅಲ್ಲಿ ಹಿಂದೂ ದೇಶದ ರಾಜ್ಯಾಂಗಸಂಸ್ಕಾರಗ ಳನ್ನು ಕುರಿತು ಚರ್ಚಿಸಿದ ವಿಷಯಗಳನ್ನು ಮುಂದಿನ ಪ್ರಕರಣದಲ್ಲಿ ವಿವರಿಸುವೆವು, ಈ ತ ಕಲ್ಕತ್ತೆಯಲ್ಲಿದ್ದಾಗ ಒಂದುಸಾರಿ ಕಲ್ಕತ್ತಾ ಜರಲ್ ಎಂಬ ಇಂಗ್ಲಿಷ್ ಪತ್ರಿಕಾಧಿಪತಿ ಯಾದ ಬಕಿಂಗ್‌ಹ್ಯಾಂ ಎಂಬುವನ ಮೇಲೆ ಸರಕಾರದವರು ತಮ್ಮನ್ನು ಆಕ್ಷೇಪಿಸಿ ಬರೆದ ನೆಂಬ ತಪ್ಪನ್ನು ಹೊರಿಸಿ ಆತನನ್ನು ಇಂಡಿಯಾದಿಂದ ಅಟ್ಟಿಬಿಟ್ಟಿದ್ದಲ್ಲದೆ 1823ನೆಯ ಮಾರ್ಚಿ 11ರಲ್ಲಿ ವಿದೇಶ ಸ್ವದೇಶದಲ್ಲಿನ ವ್ಯತ್ಯಾಂತಪತ್ರಿಕೆಗಳು ಪ್ರಭುತ್ವದ ಲೋಪಗಳನ್ನು ಪ್ರಕಟಿಸ ಬಾರದೆಂಬ ಶಾಸನವನ್ನು ವಿಧಿಸಿ ಇದಕ್ಕೆ ಎಷ್ಟು ಮಂದಿ ಆಕ್ಷೇಪಿಸಿದರೂ ವಿಶ್ವಾಸಿಸದೆ ಹೋದರು. ಈ ಮೇಲೆ ಹೇಳಿದ ಶಾಸನವನ್ನು ನೋಡಿ ರಾಮಮೋಹನನು 27 ಪುಟಗಳುಳ್ಳ ವಿಜ್ಞಾ ಪನೆಯನ್ನು ಬರೆದು ಕಲ್ಕತ್ತಾ ಸರಕಾರದವರಿಗೆ ಕಳುಹಿಸಿದನು, ಅವರೆಲ್ಲರೂ ಒಂದಾಗಿ ತಮ್ಮ ಶಪಥದಂತೆ ಅದನ್ನು ಅಂಗೀಕರಿಸದೆ ಹೋಗಲು, ರಾಮಮೋಹನನು ಅದನ್ನು ಇಂಗ್ಲೆಂ ಡ್ ರಾಜಸ್ಥಾನಕ್ಕೆ ಕಳುಹಿಸಿದನು, ಅಧಿಕಾರಿಗಳ ವಿರುದ್ಮಾಭಿಪ್ರಾಯವನ್ನೂ, ಪತ್ರಿಕೆ ಗಳಿಗೆ ಸ್ವಾತಂತ್ರ್ಯವನ್ನು ಕೊಡುವುದರಿಂದ ಅವರ ದುರಾರ್ಗಗಳಿಗೆ ಉಂಟಾಗುವ ಅಭ್ಯಂ ತರಗಳನ್ನೂ, ಪತ್ರಿಕಾಮಲಕ ಪ್ರಜೆಗಳ ಅಭಿಪ್ರಾಯಗಳನ್ನು ತಿಳಿದುಕೊಳ್ಳದೆ ಇದ್ದ ಪೂರೈರಾಜರ ಕಾಲದಲ್ಲಿ ಉಂಟಾಗುತ್ತಿದ್ದ ತೊಂದರೆಗಳ ಸ್ಕೂ, ಸತ್ಕಾರದವರ ಅಕ್ರಮಪ್ರವ ರ್ತನಗಳನ್ನು ಪತ್ರಿಕೆಯ ಮೂಲಕ ತಿಳಿಸುವುದರಿಂದ ಪ್ರಭುತ್ವದವರಿಗೆ ಉಂಟಾಗುವ ಲಾಭ ಗಳನ್ನೂ, ಪ್ರಜೆಗಳು ತಮ್ಮ ಕಷ್ಟ ನಿಷ್ಟುರಗಳನ್ನು ಸುಲಭವಾಗಿ ಪತ್ರಿಕಾರೂಪದಿಂದ ಹೊರ ಪಡಿಸುವ ಸ್ವಾತಂತ್ರವನ್ನು ಪಡೆಯುವುದರಿಂದ ಅವರಿಗೆ ಉಂಟಾಗುವ ಲಾಭಗಳನ್ನೂ, ನ್ಯಾಯಪರಿಪಾಲನೆಗೆ ಪತ್ರಿಕೆಗಳೆಷ್ಟರಮಟ್ಟಿಗೆ ಸಾಧಕಗಳಾಗಿವೆ ಎಂಬುದನ್ನೂ, ಪಾಶ್ಚಾ ತ್ಯರು ತಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರವನ್ನು ಪಡೆದಿರುವುದರಿಂದ ದೊರೆತನದವರ ಲೋಪಗಳನ್ನು ತಿಳಿಸಿ, ಅವರು ಹೊಂದುತ್ತಿರುವ ಮೇಲ್ಕೆಗಳನ್ನೂ, ಇದರಿಂದ ಅಲ್ಲಿಯ ಸಾರದವರಿಗೆ ಉಂಟಾಗುತ್ತಿರುವ ಪ್ರಜಾವಶೀಕರಣವನ್ನೂ, ಹಿಂದೂಜನರಿಗೆ ಪತ್ರಿಕಾಸ್ಕಾ ತಂತ್ರವನ್ನನುಗ್ರಹಿಸಿದ ಮಾಲ್ಕಿಸ್ ಆಫ್ ಹೇಸ್ಟಿಂಗ್ಸ್ ಕಾಲದಲ್ಲಿ ಪ್ರಜೆಗಳು ಆತನನ್ನು ಹೀಗೆ ಪ್ರೀತಿಸುತ್ತಿದ್ದರೆಂಬುದನ್ನು ಮೊದಲಾದ ವಿಷಯಗಳನ್ನು ಕುರಿತು ತುಂಬಾ ವ್ಯವ ಹಾರ ಜ್ಞಾನವನ್ನು ಪಯೋಗಿ: ಬರೆದನು, ಇಂಗ್ಲಿಷ್ ಭಾಷಾಪಂಡಿತರು ಆತನ ಗ್ರಂಥದ