ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೭೫ ಪ್ರಥಮಸಂಪುಟದಲ್ಲಿರುವ ಆ ವಿಜ್ಞಾಪನೆಯನ್ನು ಓದಿ, ಮಹಾತ್ಮನಾದ ರಾಜಾರಾಮಮೋ ಹನರಾಯನ ದೇಶಭಕ್ತಿಯನ್ನೂ, ಸ್ವಾತಂತ್ರಾಭಿಲಾಷೆಯನ್ನೂ, ಬುದ್ದಿ ವಿಶೇಷವನ್ನೂ ತಿಳಿದುಕೊಳ್ಳುವರಾಗಬೇಕೆಂದು ಅಪೇಕ್ಷಿಸಿದರು. `ಬಕಿಂಗ್ಯಾಂ ಎಂಬುವರು ಅಧಿಕಾರಿಗ ಲೆಲ್ಲಾ ನಿರ್ನಿಮಿತ್ತವಾಗಿ ಈತನ ಮೇಲೆ ಮತ್ಸರವನ್ನಿಡುವರೆಂಬುದಕ್ಕೆ ಒಂದು ದೃಷ್ಟಾಂತ ಕೊಟ್ಟರು, ಈತನು 1823 ನೇ ಇಸವಿ ಆಗಸ್ಸು 4ನೇ ತಾರೀಖಿನಲ್ಲಿ ಇಂಗ್ಲೆಂಡಿನಲ್ಲಿ ಪ್ರಕ ಟಿತವಾದ :« ಕ್ರಿಶ್ಚಿರ್ಯ ರೀಫಾಲ್ಕರ್‌' ಎಂಬ ಪತ್ರದಲ್ಲಿ ಹೀಗೆ ಬರೆದನು, “ರಾಮಮೋ ಹನನು ಪತ್ರಿಕ ಸ್ವಾತಂತ್ರ ವಿಷಯವಾಗಿ ಸರಕಾರದವರ ಲೋಪಗಳನ್ನು ಹೊರಪಡಿಸದೆ ಸುಮ್ಮನೆ ಇದ್ದಲ್ಲಿ ಅವರು ಅವನಿಗೆ ದೊಡ್ಡ ಬಹುಮಾನವನ್ನಾಗಲಿ, ಒಳ್ಳೆಯ ಅಧಿಕಾರವ ನಾಗಲಿ ಕೊಟ್ಟು ಗೌರವಿಸುತ್ತಿದ್ದರು, ತನ್ನ ಆಸ್ತಿಯಲ್ಲಿ ಸುಮಾರು ಮುಕ್ಕಾಲುಪಾ ಲನ್ನು ದೇಶೋಪಕಾರಕ್ಕಾಗಿ ವೆಚ್ಚ ಮಾಡಿದ ಈ ಉದಾರಗುಣ ಸಂಪನ್ನನಿಗೆ ಪರದ್ರವ್ಯಾಪೇಕ್ಷೆ ಹೇಗುಂಟಾಗುವದು ? ಸ್ವಾತಂತ್ಯಾಭಿಲಾಷಿಯಾದ ಇವನಿಗೆ ಎಷ್ಟು ವೇತನವನ್ನು ಕೊಟ್ಟರೆ ಏನು ? ಸೇವಾವೃತ್ತಿಗೆ ಇವನ ಮನಸ್ಸು ಹೇಗೆ ಒಡಂಬಡುವುದು ?” ಮತ್ತು ಕಲ್ಕತ್ತೆಯಲ್ಲಿ ಟೈಂಸ್‌' ಎಂಬ ಪತ್ರಿಕೆಗೆ ಅಧಿಕಾರಿಯಾಗಿದ್ದ ಎಂ. ಡಿ. ಏಕಾಸ್ಟಾ, ಎಂಬ ಫ್ರೆಂಚನು ತನ್ನ ಪತ್ರಿಕೆಯಲ್ಲಿ ಹೀಗೆ ಬರೆದಿರುವನು. ಈ ಕಾಲದಲ್ಲಿ ಹೆಸರಿಗೆಮಟ್ಟಿಗೆ ದೇಶಾ ಭಿಮಾನಿಗಳೆನ್ನಿಸಿ ಕೊಳ್ಳುವವರ ಹಾಗೆ ರಾಮಮೋಹನನು ಕೂಡ ಕಾಲಕ್ಕೆ ತಕ್ಕಂತೆ ವರ್ತಿ ಸುವನಾದರೆ ಅವನು ಸಾಮಾನ್ಯನಾದ ರಾಮಮೋಹನನಂತಲೇ ಹೇಳಬಹುದು, ಆದರೆ ಈಗ ಹಾಗೆ ಹೇಳುವುದು ಸಮಂಜಸವಲ್ಲ. 1828 ನೇ ವರ್ಷದಲ್ಲಿ, ಬಂಗಾಳಾ ಸರ್ಕಾರದವರಿಗೂ ಪ್ರಜೆಗಳಿಗೂ ಒಂದು ವಿವ ದ ಸಂಭವಿಸಿತು, ಅದು ಯಾವುದೆಂದರೆ, ಕಾರನ್ಯಾಲಿಸ್‌ ಪ್ರಭುವು 1793 ರಲ್ಲಿ ಭೂಮಿಗಳಿಗೆ ಶಾಶ್ವತವಾದ ಕಂದಾಯಗಳನ್ನೇರ್ಪಡಿಸುವ ಪದ್ಧತಿಯನ್ನು ನೇಮಿಸಿದಾಗ ಸ್ವಾಧೀನವಲ್ಲದ ಪ್ರದೇಶಗಳನ್ನು ಯಾರಾದರೂ ಅನುಭವಿಸುತ್ತಿದ್ದರೆ ಕಲೆಕ್ಟರು ಆ ವಿಷಯವನ್ನ ಕುರಿತು ನ್ಯಾಯಸ್ಥಾನದಲ್ಲಿ ವಿವಾದವನ್ನ ಹೂಡಿ ಅಕ್ರಮವಾಗಿ ಅನುಭವಿಸುತ್ತಿರುವನೆಂದು ದೃಢಪಡಿಸಿ, ಅವರ ತೀರ್ಮಾನವನ್ನನುಸರಿಸಿ ಕೆಲಸಮಾಡುತ್ತಿರಬೇಕೆಂದು ವಿಧಿಸಿದನು, ಸತ್ಕಾರದವರು 1828 ರಲ್ಲಿ ಇವುಗಳನ್ನೆಲ್ಲಾ ರದ್ದು ಪಡಿಸಿ ಇಂಧಾ ಭೂಮಿಗಳನ್ನು ವಿಮರ್ಶಿಸುವುದಕ್ಕೂ ತೆರಿಗೆ ಯನ್ನು ನಿರ್ಣಯಿಸುವುದಕ್ಕೂ ಅಥವಾ ಆ ಭೂಮಿಯನ್ನು ತಮ್ಮ ಸ್ವಾಧೀನಪಡಿಸಿಕೊಳ್ಳುವು ದಕ್ಕೂ, ಅದು ಅಕ್ರಮವೆಂದು ಹೇಳುವವರ ಫಿಲ್ಯಾದನ್ನು ಕೇಳುವುದಕ್ಕೂ, ತೀರ್ಮಾನಮಾ ಡುವುದಕ್ಕೂ, ಕಲೆಕ್ಟರಿಗೇನೆ ಅಧಿಕಾರಕೊಟ್ಟು ಆತನ ತೀರ್ಮಾನವನ್ನು ಒಪ್ಪದವರು ಕವಿತಾ ಷನರ ಬಳಿಯಲ್ಲಿ ಹೇಳಿಕೊಳ್ಳತಕ್ಕದ್ದೆಂತಲೂ, ಆತನ ತೀರ್ಮಾನವೇ ಕಡೆಯ ನಿರ್ಣಯವಂತ ಲೂ ಒಂದು ಹೊಸಶಾಸನವನ್ನೇರ್ಪ ಡಿಸಿದರು.ಇದರಿಂದ ಪ್ರಜೆಗಳಿಗೆಲ್ಲಾ ಬಹಳ ತೊಂದರೆಯಾ ದುದರಿಂದ ಇದನ್ನು ಬದಲಾಯಿಸಲು ಯೋಚಿಸಬೇಕೆಂದು ಬಂಗಾಳಾ, ಒರಿಸ್ಸಾ, ಬಿಹಾರ್