ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಜಿಲ್ಲೆಗಳವರೂ, ಮತ್ತೆ ಕೆಲವರೂ ಸೇರಿ ಒಂದು ಸಂಘವನ್ನು ಮಾಡಿಕೊಂಡು ರಾಮಮೋ ಹನನನ್ನು ಆಶ್ರಯಿಸಿದರು, ಪ್ರಜಾಕ್ಷೇಮತಿಂತನೆಯೇ ತನ್ನ ನೈಜಗುಣವಾಗಿ ತಿಳಿದ ರಾಮ ಮೋಹನನು ಒಡನೆಯೇ ಅದನ್ನೊಪ್ಪಿಕೊಂಡು ಸರ್ಕಾರದವರಿಗೆ ಪ್ರಜೆಗಳ ಪಕ್ಷವಾಗಿ ಒಂದು ಮನವಿಯನ್ನು ಬರೆದನು, ಅದರಲ್ಲಿ 1793 ರಿಂದ 35 ವರ್ಷಗಳ ತನಕ ಏಕರೀತಿಯಾಗಿ ನಡೆಯುತ್ತ ಬಂದ ಆಚರಣೆಯನ್ನು ತಪ್ಪಿಸುವುದು ಧರ್ಮ ವಲ್ಲವೆಂತಲೂ, ಇದರಲ್ಲಿ ಪ್ರಜೆಗ ಳಿಗೆ ಕ್ಷೇಮವಿದ್ದಲ್ಲಿ ಬದಲಾಯಿಸುವುದು ಯುಕ್ತವೆಂತಲೂ, ಹಾಗಲ್ಲದೆ ಯಾವ ಅಧಿಕಾ ರಿಯು ತೆರಿಗೆಯನ್ನು ವಿಧಿಸಿದನೋ ಆತನೇ ತಾನು ಮಾಡಿದ ಕೆಲಸಕ್ಕೆ ಉತ್ತರವಾದಿಯಾ ಗಿರುವುದಕ್ಕೆ ಬದಲಾಗಿ ವಿಚಾರಣೆ ಕರ್ತನು ಹೇಗೆ ಆಗುವನೆಂತಲೂ, ಆತನೇ ವಿಚಾರಣಾ ಕರ್ತನಾದಲ್ಲಿ ತಾನು ಇದಕ್ಕೆ ಮುಂಚೆ ವಿಧಿಸಿದ ತೆರಿಗೆಯನ್ನು ಈಗ ಅಕ್ರಮವೆಂದು ಹೇಳು ವುದು ಸಾಧಾರಣವಾಗಿ ಸಂಭವಿಸಲಾರದೆಂತಲೂ, ಬಡವನಾದ ಪ್ರತಿ ಜರ್ಮೀಾ ದಾರನೂ ಕಮೀಷನರ ಬಳಿಗೆ ಹೋಗುವುದು ಸುಲಭಸಾಧ್ಯವಲ್ಲವೆಂತಲೂ ಅನೇಕ ಹೇತುಗಳನ್ನು ದಾಹ ರಿಸಿ ಬರೆದು ರಾಜಪ್ರತಿನಿಧಿಯ ಬಳಿಗೆ ಕಳುಹಿಸಿದನು, ಅವರು ಇದರಮೇಲೆ ತತ್ಕಾಲದಲ್ಲಿ ತಮ್ಮ ಸಮ್ಮತಿಯನ್ನು ಹೊರಪಡಿಸಿ ಈ ಕಾಸನವನ್ನು ಕೆಲವುಕಾಲದತನಕ ನಿಲ್ಲಿಸಿದರೂ ಪೂರ್ತಿಯಾಗಿ ತೆಗೆದು ಹಾಕಲಿಲ್ಲ. ರಾಮಮೋಹನನು ಇಂಗ್ಲೆಂಡಿಗೆ ಹೋದಾಗಕೂಡ ಅಲ್ಲಿನ ಪ್ರಮುಖರ ಸಂಗಡಲೂ ರಾಜ್ಯಾಂಗ ಸ್ಥಳಗಳಲ್ಲಿಯೂ ಈ ವಿಷಯವಾಗಿ ಬಹಳವಾಗಿ ಉಪನ್ಯಾಸಮಾಡಿ ಈ ಅಕ್ರಮವನ್ನು ತೊಲಗಿಸಲಿಕ್ಕಾಗಿ ತುಂಬಾ ಕೃಷಿಮಾಡಿದನು. ಆದರೂ ಸತ್ಕಾರದವರು ಆ ಶಾಸನವನ್ನು ತೆಗೆದುಹಾಕಲಿಲ್ಲ, ಆ ಕಾನೂನೇ ಇದುವರೆಗೂ ಆಚರಣೆಯಲ್ಲಿರುವುದೆಂದೂ ತಿಳಿಯಬರುತ್ತದೆ. 1829 ನೆಯ ವರ್ಷದಲ್ಲಿ ಚೀನಾ ಮತ್ತು ಹಿಂದೂ ದೇಶಗಳಿಗೆ ಜರುಗುವ ವ್ಯಾಪಾ ರವೆಲ್ಲವೂ ಈಸ್ಟಿಂಡಿಯಾ ಕಂಪೆನಿಯ ವರ ವಶದಲ್ಲಿಯೇ ಇರುವುದು ಧರ್ಮವಲ್ಲವೆಂತಲೂ, ಪಶ್ಚಿಮಖಂಡವಾಸಿಗಳಿಗೆ ಹಿಂದದೇಶದಲ್ಲಿ ಒಕ್ಕಲುತನ ಮಾಡಲಿಕ್ಕೆ ಅಪ್ಪಣೆ ಕೊಡಬೇಕೆಂ ತಲೂ ಒಂದು ಚರ್ಚೆ ಆರಂಭಿಸಲ್ಪಟ್ಟಿತು, ಈ ವಿಷಯವಾಗಿ ರಾಜರ ಸನ್ನಿಧಿಗೆ ಒಂದು ಬಿನ್ನವತ್ತಳೆಯನ್ನು ಬರೆದು ಕಳುಹುವುದಕ್ಕೆ 1829 ನೇ ಜನವರಿ ಹದಿನೈದರಲ್ಲಿ ಕಲ್ಕತ್ತೆಯ ರ್ಟೌಹಾಲಿನಲ್ಲಿ ಬಹಿರಂಗವಾಗಿ ಒಂದು ಸಭೆ ಕೂಡಿತು, ಅದರಲ್ಲಿ ರಾಮಮೋಹನನು ಕೂಡ ಇದ್ದು ಯೂರೋಪಿನವರು ವಸತಿಗಳನ್ನು ಮಾಡಿಕೊಂಡು ಹಿಂದೂ ದೇಶವನ್ನು ಮಾತೃಭೂಮಿಯಾಗಿ ಮಾಡಿಕೊಂಡಲ್ಲಿ ಹಿಂದೂ ಪ್ರಜೆಗಳಿಗೆ ಎಲ್ಲಾ ವಿಷಯಗಳಲ್ಲಿಯ ಲಾಭವೇ ಹೊರತು ಯಾವ ನಷ್ಟವೂ ಇಲ್ಲವೆಂದು ಸಂಕ್ಷೇಪವಾಗಿ ಉಪನ್ಯಾಸಮಾಡಿದನು. ಮತ್ತು ಇಂಗ್ಲೆಂಡಿನಲ್ಲಿ ಇದನ್ನು ಕುರಿತು ಸಕ್ಕಾರದವರು ರಾಮಮೋಹನನಿಂದ ಒಂದು ಸಾಕ್ಷ್ಯವನ್ನು ತೆಗೆದುಕೊಂಡರು, ಆ ವಿವರಣೆಯನ್ನು ಮುಂದಿನ ಪ್ರಕರಣದಲ್ಲಿ ತಿಳೆ ಯಬಹುದು