ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂ। ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಏರ್ಪಡಿಸಿಕೊಂಡು ಆತನನ್ನು ಇಂಗ್ಲೆಂಡಿಗೆ ಕಳುಹಿಸಿದನು. ಈ ದಿಲ್ಲೀಶ್ವರನ ಸಹಾಯವೇ ರಾಮಮೋಹನನು ಇಂಗ್ಲೆಂಡಿಗೆ ಹೊರಡಲು ಅನುಕೂಲಪಡಿಸಿತು, ಅಂತಹ ಸಹಾಯವು ಕಷ್ಟ ಸಾಧ್ಯವಾಗಿದ್ದಿತು. ಮೊದಲು ಹೇಳಿದ ಆತಂಕಗಳಲ್ಲದೆ ಆತನು ಪ್ರಯಾಣವನ್ನು ನಿಲ್ಲಿಸುವುದಕ್ಕೆ ಮ ತ್ತೊಂದು ಕಾರಣವಿದ್ದಿತು. ತಾನು ಪ್ರಯತ್ನ ಪಟ್ಟು ಮಾಡುತ್ತಲಿದ್ದ ಸಂಘ ಮತ್ತು ಮತ ಸಂಸ್ಕರಣಗಳು ಕ್ರಮವಾದ ಆಚರಣೆಗೆ ಬರುವುದಕ್ಕೆ ಮುಂಚೆ ತಾನು ಅವುಗಳನ್ನು ಬಿಟ್ಟು ದೂರ ದೇಶಕ್ಕೆ ಹೋದರೆ ಅದುವರೆಗೆ ತಾನುಮಾಡಿದ ಕೃತಿಯೆಲ್ಲವೂ ವ್ಯರ್ಧವಾಗುವುದೋ ಏನೋ ಎಂಬ ವಿಚಾರವು ಮತ್ತೊಂದು, ಈ ವಿಚಾರವು ಈ ವರ್ಷ ತೊಲಗಿ ಹೋಯಿ ತು, ತಾನು ಸಂಕಲ್ಪಿಸಿದ ಕಾರಗಳು ಬಹುಮಟ್ಟಿಗೆ ಜಯವನ್ನು ಪಡೆದುವು. ಮತ್ತು ಬ್ರಹ್ಮ ಸಮಾಜದಲ್ಲಿ ಅನೇಕ ಪ್ರಮುಖ ಜನರು ಮನಸ್ಸಿಟ್ಟು ಸೇರಿ ಯಥಾವಿಧಿಯಾಗಿ ಕಾರ್ ಗಳನ್ನು ಜರುಗಿಸುತ್ತಿದ್ದರು, ವಿದ್ಯಾವಂತರಿಗೆಲ್ಲಾ ಈ ಕಾವ್ಯದಲ್ಲಿ ಅಭಿಮಾನವುಂಟಾ ಯಿತು, ಸಮಾಜವು ಯಾವಾಗಲೂ ಕೆಡದಂತೆ ನಡೆಯುವ ಪದ್ದತಿಗಳು ಏರ್ಪಟ್ಟವು. ಆದುದರಿಂದ ರಾಮಮೋಹನನಿಗೆ ಮುಂದೆ ತಾನು ಎಲ್ಲಿದ್ದರೂ ಆ ಸಮಾಜಕ್ಕೆ ಯಾವ ಆತಂ ಕವೂ ಬರಲಾರದೆಂಬ ನಂಬಿಕೆಯುಂಟಾಯಿತು. ರಾಮಮೋಹನನು ಇಂಗ್ಲೆಂಡಿಗೆ ಹೊರಡಲಪೇಕ್ಷಿಸಿದುದು ಅಲ್ಲಿದ್ದ ವಿನೋದಗಳ ನ್ಯೂ ಆಶ್ವರಗಳನ್ನೂ ನೋಡುವುದಕ್ಕೆ ಮಾತ್ರವಲ್ಲ, ಆತನು ಅದಕ್ಕೆ ಮೊದಲು ಯಾರಿ ಗೂ ಸಾಧ್ಯವಾಗದೆ ಇದ್ದ ದೊಡ್ಡ ರಾಜ್ಯ ತಂತ್ರವಿಷಯವಾಗಿ ದೇಶಹಿತವನ್ನು ಬಯಸಿ ಕೆಲಸ ಮಾಡಬೇಕೆಂದು ಯೋಚಿಸಿದನು. ಅದಾವುದೆಂದ-1833 ರಲ್ಲಿ ಕಂಪನಿಯವರ ಸನ್ನ ದಿನ ಅವಧಿಯು ಮುಗಿದು ಹೋಗುತ್ತಿದ್ದುದರಿಂದ ಆಗ ಅವರಿಗೆ ಹೊಸಸನ್ನದು ಕೊಡಬೇ ಕಾಗಿತ್ತು, ಆ ಸಂದರ್ಭದಲ್ಲಿ ನಮ್ಮ ದೇಶವನ್ನು ಕುರಿತು ಹಲವು ಸಂಗತಿಗಳು ಚರ್ಚಿಸ ಲ್ಪಡತಕ್ಕವುಗಳಾಗಿವೆಯೆಂತಲೂ ಅಂತಹ ಮುಖ್ಯ ಸಮಯದಲ್ಲಿ ತಾನು ಅಲ್ಲಿ ಇದ್ದರೆ ಈ ದೇಶಕ್ಕೆ ಸ್ವಲ್ಪ ಲಾಭಕರವಾಗಿರುವುದೆಂತಲೂ ಆತನು ದೃಢವಾಗಿ ನಂಬಿದ್ದನು. ಇದು ಅಲ್ಲದೆ ಧರಸಭೆಯವರೆಲ್ಲರೂ ಸೇರಿ ಸಹಗಮನವನ್ನು ನಿಷೇಧಿಸಿದ ಶಾಸನಕ್ಕೆ ವಿರೋಧವಾಗಿ ಇಂಗ್ಲೆಂಡಿನಲ್ಲಿ ಬಿನ್ನವಿಸಿಕೊಳ್ಳುವುದಕ್ಕೆ ಬಿಥಿ' ಎಂಬವನನ್ನು ಕಾರಿನಿ ರ್ವಾಹಕನನ್ನಾಗಿ ನಿಯಮಿಸಿ ಅವನಿಗೆ ತಕ್ಕ ಪ್ರತಿಫಲವನ್ನೂ, ಪಯಣದ ವೆಚ್ಚಕ್ಕೆ ಬೇ ಕಾದ ಹಣವನ್ನೂ ಕೊಟ್ಟು, ಅದಕ್ಕೆ ಸ್ವಲ್ಪ ದಿನಗಳ ಮುಂಚೆಯೇ ಇಂಗ್ಲೆಂಡಿಗೆ ಕಳುಹಿಸಿ ದ್ದರು. ಆದುದರಿಂದ ಅಲ್ಲಿ ಅವರ ಪ್ರಯತ್ನಗಳು ಸಫಲವಾಗದಂತೆ ಮಾಡಬೇಕೆಂಬ ಉದ್ದೇಶವೂ ಒಂದಾಗಿತ್ತು, ಆ ಬಿಥೀಯವರು ಇಂಗ್ಲೆಂಡಿಗೆ ಹೊರಡುವುದಕ್ಕೆ ಮುಂಚೆ ಒಂದು ವಿಚಿತ್ರವು ನಡೆಯಿತು. ಅದೇನೆಂದರೆ: ಆತನು ಧರಸಭೆಯವರ ಪಕ್ಷದಲ್ಲಿ ಪ್ರತಿನಿಧಿ ಯಾಗಿ, ಭಗವಂತನ ಸಾಕ್ಷಿಯಾಗಿ ಅವರ ವಿಜ್ಞಾಪನೆಯು ಅಂಗೀಕರಿಸಲ್ಪಡಲಿಕ್ಕೆ ತನ್ನ ಕೈಯಲ್ಲಾದಮಟ್ಟಿಗೂ ವ್ಯವಸಾಯ ಮಾಡುವೆನೆಂದು ಅವರಿಗೆ ವಾಗ್ದಾನ ಮಾಡಿ ಹೊರ