ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಟನು, ಆದರೆ ತಾನು ಹಣಕೊಟ್ಟು, ಅದುವರೆಗೆ ತೆಗೆದುಕೊಂಡಿದ್ದ ಟಿಕೆಟ್ಟನ್ನು ತೆಗೆದು ಕೊಂಡಿರುವ ವರ್ತಕಸಂಘದವರ ಹೊಗೆಯ ಹಡಗು ಕತೆಯ ದಕ್ಷಿಣದಲ್ಲಿ ನಾಲ್ವತ್ತು ಹರಿದಾರಿ ದೂರದಲ್ಲಿರುವ ಕೇಡ್‌ಗಿರಿ ಎಂಬ ಪ್ರದೇಶಕ್ಕೆ ಹೋಗಿ ಅಲ್ಲಿಂದಲೇ ವಿಲಾಯಿತಿಗೆ ಹೊರಡುವುದೆಂಬ ವರ್ತಮಾನ ತಿಳಿದುದರಿಂದ ಈತನು ಅಲ್ಲಿಗೆ ಹೋಗಿಯೇ ಹಡಗನ್ನು ಹತ್ತ ಬೇಕಾಗಿ ಬಂದಿತು. ಆದುದರಿಂದ ಜಾಗ್ರತೆಯಲ್ಲಿ ಹೊರಟು, ಆ ಸ್ಥಳಕ್ಕೆ ಹೋಗಿ ಹಡಗ ಸ್ನೇರಿದನು. ಅದು ಹೊರಟ ಕೆಲವು ನಿಮಿಷಗಳಲ್ಲಿಯೇ ಆ ಹಡಗಿನ ತಳದಲ್ಲಿ ಒಂದು ಸಣ್ಣ ರಂಧ್ರ ಬಿದ್ದು ಕ್ರಮಕ್ರಮವಾಗಿ ಒಳಭಾಗವೆಲ್ಲಾ ಜಲಮಯವಾಗುತ್ತಾ ಬಂದಿತು, ಹಡ ಗುನಡೆಯಿಸುವವರು ಈ ಅಪಾಯಸ್ಥಿತಿಯನ್ನು ತಕ್ಷಣವೇ ಕಂಡುಹಿಡಿದು ಪ್ರಯಾಣವನ್ನು ನಿಲ್ಲಿಸಿ ದಡಕ್ಕೆ ಬಂದು ನೀರು ಬಾರದಂತೆ ತತ್ಕಾಲಕ್ಕೆ ತಕ್ಕ ಉಪಾಯವನ್ನು ಯೋಚಿಸಿ, ಆ ರಂಧ್ರವನ್ನು ಪೂರ್ತಿಯಾಗಿ ಮುಚ್ಚಿ ಅದನ್ನು ನೆಟ್ಟಗೆ ಮಾಡಿಸುವುದಕ್ಕೋಸ್ಕರ ಪುನಃ ಕಲ್ಕತ್ತೆಗೆ ಹೊರಟರು. ಕಲ್ಕತ್ತೆಯನ್ನು ಸೇರಿದಕೂಡಲೇ ಬಿಥೀಯವರು ವಿಜ್ಞಾಪನೆಯನ್ನು ತೆಗೆದುಕೊಂಡು ಧರಸಭೆಯವರ ಹತ್ತಿರಕ್ಕೆ ಬಂದು ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿ ತನಗೆ ಆಕಾಲದಲ್ಲಿ ಜಲಗಂಡವು ಬರತಕ್ಕುದಾಗಿದ್ದರೂ ಹಿಂದೂಸಹಗಮನ ಸದಾಚಾರಪನ ರುದ್ಧಾರಣೆಯ ಧಮ್ಮ ಪತ್ರವು ತನ್ನ ಕೈಯಲ್ಲಿದ್ದುದರಿಂದ ತನಗೆ ಆ ಅಪಮೃತ್ಯುವು ತಪ್ಪಿಹೋ ಯಿತೆಂದು ಹೇಳಿದನು, ಇದಕ್ಕೆ ಪ್ರತ್ಯುತ್ತರವಾಗಿ ಕಲ್ಕತ್ತೆಯಲ್ಲಿನ ಒಂದು ವೃತ್ತಾಂತಪತ್ರದಲ್ಲಿ ಹೀಗೆ ಬರೆ ಯಲ್ಪಟ್ಟಿತು, ಬಿಥೀಯವರ ಅಭಿಪ್ರಾಯವು ಸುಯಾದುದಲ್ಲ, ತುಂಬಿದ ಪ್ರಾಣಿಗ ಳನ್ನು ಕೊಂದುಹಾಕುವುದಕ್ಕೆ ಅಂಗೀಕರಿಸುವ ವಿಜ್ಞಾಪನೆಯು ತನ್ನ ಹತ್ತಿರ ಇದ್ದುದ ರಿಂದಲೇ ಹಡಗಿನಲ್ಲಿದ್ದವರೆಲ್ಲರ ಪ್ರಾಣಗಳಿಗೂ ಅಪಾಯವು ತಟಸ್ಥವಾಯಿತು. ಮತ್ತೊ೦ ದು ವರ್ತಮಾನಪತ್ರದಲ್ಲಿ ಬಿಥೀಯವರ ಅಭಿಪ್ರಾಯವು ಯೋಗ್ಯವಾದುದಲ್ಲ. ಹಿಂದೂ ದೇಶದಲ್ಲಿನ ಅನಾಥ ಯುವತಿಯರ ಪಕ್ಷದಲ್ಲಿ ತೋರಿಸಬೇಕಾದ ನ್ಯಾಯವೇ ಆತನನ್ನು ಮರಳಿ ಕಲ್ಕತ್ತೆಗೆ ಹಿಂದಿರುಗಿಸಿತು ಎಂದು ಬರೆಯಲ್ಪಟ್ಟಿತು. ರಾಮಮೋಹನನು ಇಂಗ್ಲೆಂಡಿಗೆ ಹೊರಡುತ್ತಾನೆಂಬ ಸುದ್ದಿ ಪಟ್ಟಣದಲ್ಲೆಲ್ಲಾ ಹರಡಿತು. ಹಿಂದೂದೇಶದಲ್ಲಿ ಉತ್ತಮ ಕುಲದಲ್ಲಿ ಹುಟ್ಟಿದ ಪ್ರಮುಖರಲ್ಲಿ ಯಾರೂ ಅದಕ್ಕೆ ಮುಂಚೆ ಇಂಗ್ಲೆಂಡಿಗೆ ಹೋಗಿರಲಿಲ್ಲವಾದುದರಿಂದ ಈ ಮಹಾಕಾರಕ್ಕೆ ನಮ್ಮ ವರಿ ಗೆಲ್ಲ ಮೊದಲು ಮಾರ್ಗದರ್ಶಿಯಾದವನು ಈ ಮಹನೀಯನಾದ ರಾಮಮೋಹನನೇ. ಈತನ ಸಮುದ್ರಯಾನದ ಸುದ್ದಿಯನ್ನು ಕೇಳಿದವರೆಲ್ಲರೂ ಆಶ್ಚರ್ಯ ಪಡತೊಡಗಿದರು. ದಯಾಮಯರಾದ ಕೆಲವರು, ಅಯ್ಯೋ ಪಾಪ ! ಇವನು ಸಮುದ್ರಕ್ಕೆ ಆಚೆ ಅನೇಕ ಸಾವಿರ ಗಾವುದಗಳ ದೂರದಲ್ಲಿರುವ ದೇಶಕ್ಕೆ ಹೋಗುವನಲ್ಲಾ” ಎಂದು ವಿಚಾರಗೊಂಡರು, ಪೂರ್ವಾಚಾರಪರಾಯಣರಾದ ಕೆಲವರು ಮರ್ಖಾಹ್ಮಣರು ಗೋಮಾಂಸಭಕ್ಷ ಕರಿರುವ ದೇಶಕ್ಕೆ ಹೋಗಬಾರದೆಂತಲೂ, ಸಮುದ್ರಯಾನವು ನಿಷಿದ್ಧ ಕಾರವೆಂತಲೂ ವ್ಯಾಸ