ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪ - ರಾಜ ರಾಮಮೋಹನರಾಯರ ಜೀವಿತ ಚರಿತ್ರ. ““ವರ ಸಮಾಜದಲ್ಲಿ ಬೆರೆತು ವರ್ತಿಸಿದ ಮೊದಲು ಆತನ ಪ್ರಭಾವವು ಅಮೇರಿಕಾ ಖಂಡದ ತನಕ ವಾ ಪಿಸಿತು, ಇರಾಂಪುರದಲ್ಲಿನ ಮತೋಪದೇಶಿಗಳ ಸಂಗಡ ಮತವಿಷಯವಾದ ಚರ್ಚೆಗಳನ್ನು ಮಾಡುತ್ತಿರುವಾಗ ಅಮೇರಿಕಾದಲ್ಲಿನ ಯೂನಿಟೇರಿರ್ಯ ಮತಸಂಘದವರು ತಮ್ಮ ಮನಃಪೂರ್ವಕವಾದ ಸಂತೋಷವನ್ನು ತೋರಿಸಿದರು ಮತ್ತು ಆ ಚರ್ಚಾಗ್ರಂಧ ಗಳು ಅಮೇರಿಕಾದಲ್ಲಿನ ಸಂಯುಕ್ತ ಸಂಸ್ಥಾನಗಳಲ್ಲಿ ಹಲವುವೇಳೆ ಮುದ್ರಿಸಲ್ಪಟ್ಟವು, ಈ ಭಯರಾಷ್ಟ್ರಗಳಲ್ಲಿನ ವಿದ್ಯಾವಂತರೂ ಉತ್ತರಪ್ರತ್ಯುತ್ತರಗಳ ಮೂಲಕ ಈತನ ಪರಿಚಯ ವನ್ನು ಪಡೆಯುತ್ತಿದ್ದರು. ರಾಮಮೋಹನನ ಇತಿಹಾಸವನ್ನು ಬರೆದ ಮಿಸ್ ಮೇರಿ ಕಾಿಂಟರ್ ಎಂಬಾಕೆಯು ತನ್ನ ಗ್ರಂಥದಲ್ಲಿ ಈತನು ಇಂಗ್ಲೆಂಡಿಗೆ ಹೊರಡಲಿಕ್ಕೆ ಮುಂಚೆ ಅಲ್ಲಿ ಹರಡಿದ್ದ ಪ್ರಸಿದ್ಧಿಯನ್ನು ದೃಢಪಡಿಸುವುದಕ್ಕೆ ಆ ಕಾಲದಲ್ಲಿ ದೊಡ್ಡ ದೊಡ್ಡ ವಿದ್ವಾಂ ಸರಿಂದ ಬರೆಯಲ್ಪಟ್ಟ ವ್ಯಾಸಗಳನ್ನು ಉದಾಹರಿಸಿರುವಳು, ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಗ್ರಹಿಸಿ ಹೇಳುವೆವು, ಬ್ಯಾಪ್ಟಿಸ್ಟ್ ಮತಸಂಘದವರ 1816 ನೆಯ ವರ್ಷದ ರಿಪೋರ್ಟಿ ನಲ್ಲಿ ರಾಮಮೋಹನನ ವಿಷಯದಲ್ಲಿ ದೊಡ್ಡ ವ್ಯಾಸವನ್ನು ಬರೆದು ಹೊಗಳಿರುವರು, ಮತ್ತು ಅದೇ ವರ್ಷದಲ್ಲಿ ಹೊರಪಟ್ಟ, ಚಚ'೯ ಆಫ್ ಇಂಗ್ಲೆಂಡಿನ ಸೆಪ್ಟಂಬರು ತಿಂಗಳಿನ ಮಿಷನರಿ ರಿಜಸ್ಟರಿನಲ್ಲಿ ಈತನ ವಿದ್ಯಾನೈಪುಣ್ಯವನ್ನೂ, ಗ್ರಂಥರಚನೆಗಳನ್ನೂ, ಹಿಂದೂ ಕೈ ಸಮತ ಚರ್ಚೆಗಳನ್ನೂ, ದೇಶೋಪಕಾರ ಕಾಕ್ಯಗಳನ್ನೂ ಕುರಿತು ಬಹು ಮನೋಹರವಾದ ಪದ ಗಳಿಂದ ವಿಸ್ತಾರವಾಗಿ ಬರೆದರು, ಮದ್ರಾಸಿನ ಪಾದರಿಗಳು ಅನೇಕಸಾರಿ ಈತನ ಯೋಗ್ಯ ತಾ ವಿಶೇಷವನ್ನು ಬರೆದು ಇಂಗ್ಲೆಂಡಿನ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಮೇ ರಿಕದ ಸಂಯುಕ್ತ ರಾಷ್ಟ್ರ ಗಳಲ್ಲಿರುವ ಮಾದರಿ ವೀರ್ ಎಂಬಾತನು ಈ ಮಹಾತ್ಮನ ಗ್ರಂಧ ಗಳನ್ನು ಓದಿ ಉತ್ತರಪ್ರತ್ಯುತ್ತರಗಳ ಮೂಲಕ ಪರಿಚಯವನ್ನು ಸಂಪಾದಿಸಿ ತನ್ನ ಸಂತೋಷ ವನ್ನೂ ರಾಮಮೋಹನನ ವಿದ್ಯಾ ಬುದ್ದಿ ಜ್ಞಾನಗಳನ್ನೂ ಪತ್ರಿಕಮುಖದಿಂದ ಪ್ರಕಟಿಸುತ್ತಿ ದ್ದನು, ಹಿಂದೂ ದೇಶವನ್ನು ನೋಡಲಿಕ್ಕೆ ಬಂದ, ಲೆಫ್ಟಿನೆಂಟ್‌ ಕರ್ನಲ್ ಫಿಸ್ಟ್ ಕೀರ್ರೆಸ್ ಎಂಬ ಸೇನಾಪತಿಯು ತನ್ನ ಪ್ರಯಾಣದ ಚರಿತ್ರೆಯಲ್ಲಿ ಈತನ ವಿಪುಲವಾದ ಜ್ಞಾನವನ್ನು ಬಹಳವಾಗಿ ಹೊಗಳಿ ಬರೆದಿರುವನು, ಪ್ರಸಿದ್ದ ಪತ್ರಿಕಾಧಿಪತಿಯಾದ ಬಕಿಂಗ್ ಹ್ಯಾಂ ಎಂ ಬವನು ಅನೇಕ ವರ್ಷಗಳ ತನಕ ತನ್ನ ಪತ್ರಿಕೆಯಲ್ಲಿ ಇವನಿಂದ ಮಾಡಲ್ಪಡುವ ಕಾಶ್ಯಗಳನ್ನು ವಿವರಿಸಿ ಹೇಳುತ್ತಾ ಬಂದನು. ಕಲ್ಕತ್ತೆಯಲ್ಲಿ ಒಂದು ಇಂಗ್ಲಿಷ್ ಪತ್ರಿಕಾಧಿಪನಾದ ಎಂ ಡಿ ಎಕಾಸ್ತಾ ಎಂಬವನು ರಾಮಮೋಹನನ ಚರಿತ್ರೆಯನ್ನು ವಿವರವಾಗಿ ಬರೆದು ತನ್ನ ಸ್ವದೇಶ ವಾದ ಫ್ರ್ರಾಸಿಗೆ ಕಳುಹಿಸಿದನು, ಅಲ್ಲಿ ಅದನ್ನು A, B, ಗ್ರೇಗರಿ ಎಂಬ ಪಂಡಿತನು ಫ್ರೆಂಚ್, ಭಾಷೆಯಲ್ಲಿ ಗ್ರಂಥರೂಪವಾಗಿ ಮುದ್ರಿಸಿದನು. ಇದರಿಂದ ಫ್ರಾನ್ಸ್ ದೇಶದಲ್ಲೆಲ್ಲ ಈತನ ಹೆಸರು ವ್ಯಾಪಿಸಿತು, ಅದು 1820 ರಲ್ಲಿ ಇಂಗ್ಲಿಷಿನಲ್ಲಿ ಬರೆಯಲ್ಪಟ್ಟು “ಮಂತ್ರಿ ರಿಪಾಜಿ ಟಿರಿ ಎಂಬ ಮಾಸಪತ್ರಿಕೆಯಲ್ಲಿ ಇಂಗ್ಲೆಂಡಿನಲ್ಲಿ ಪ್ರಕಟಿಸಲ್ಪಟ್ಟಿತು, ಹೀಗೆ ವಾರ್ತಾ ಪತ್ರಿಕೆಗಳ ಮೂಲಕ ಯರೋಪಿಯನರೆಲ್ಲರೂ ಈತನ ಪವಿತ್ರ ಧರ್ಮಗಳನ್ನೂ, ದಿವ್ಯನಾಮವನ್ನೂ,