ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಆ೫ ಆ೫ ತಿಳಿದುಕೊಂಡು ಸಂತೋಷಿಸುತ್ತಿದ್ದುದಲ್ಲದೆ ಅನೇಕ ಸಾರಿ ಆತನಲ್ಲಿ ತಮಗೆ ಇರುವ ಗೌರವ ವನ್ನು ಹೊರಪಡಿಸುತ್ತಿದ್ದರು. 1820 ರಲ್ಲಿ ಬ್ರಿಟಿಸ್ ಅಂಡ್ ಫಾರ್ರೆ ಯುನಿಟೇರಿರ್ಯ್ರ ಅಸೋಸಿಯೇರ್ಷ ” ನವರು ತಮ್ಮ ಸಂವತ್ಸರೋತ್ಸವದ ವೇಳೆ ಒಂದು ದೊಡ್ಡ ಸಭೆಯಲ್ಲಿ ಈತನ ಶ್ರೇಯೋಭಿವೃದ್ಧಿಯನ್ನು ಬಯಸಿ, ಅವರ ದೇಶಸಂಪ್ರದಾಯದಂತೆ ದ್ರಾಕ್ಷಾ ಪಾನಕ ವನ್ನು ತೆಗೆದುಕೊಂಡು ಆ ಸಭೆಯಲ್ಲಿ ಆ‌', ನಾಟ್. ಎಂಬ ವಾಗ್ನಿಯು ರಾಮಮೋಹ ನನ ಅಸದೃಶ ಶಕ್ತಿಯುಕ್ತಿಗಳನ್ನು ಕುರಿತು ಬಹಳಹೊತ್ತು ಉಪನ್ಯಾಸಮಾಡಿ, ಇಂಥಾ ಯೋ ಗ್ಯತಾವಿಶೇಷವನ್ನುಳ್ಳ ಪುರುಷನು ಇಂಗ್ಲೆಂಡಿನಲ್ಲಿಯೇ ಅಲ್ಲ, ಯೂರೋಪ್ ಖಂಡದಲ್ಲಿ ಎಲ್ಲಿ ಯ ಜನ್ನಿಸಲಿಲ್ಲವೆಂದು ಹೇಳಲಿಕ್ಕೆ ಸಾಹಸಗೊಳ್ಳುತ್ತಿರುವೆನೆಂದು ನುಡಿದನು. ಯರೋಪ್ ಖಂಡದಲ್ಲಿ ಅಷ್ಟರ ಪ್ರಸಿದ್ದಿ ಯನ್ನು ಸಂಪಾದಿಸಿದ ಮಹಾ ಕೀರ್ತಿ ಶಾಲಿಯಾದ ರಾಮಮೋಹನನು ಇಂಗ್ಲೆಂಡಿಗೆ ಬರುತ್ತಿರುವನೆಂಬ ಸುದ್ದಿ ಯು ಅಂತಹ ಮ ಹಾನುಭಾವನನ್ನು ತಮ್ಮ ಜೀವಿತಕಾಲದಲ್ಲಿ ಒಂದುಸಾರಿ ಕಣ್ಣಿನಿಂದ ನೋಡಬೇಕೆಂಬ ಕು ತೂಹಲದಿಂದ ಕಾದಿದ್ದ ಅಲ್ಲಿಯ ಜನರಿಗೆ ತಿಳಿದಕೂಡಲೆ ಅವರಿಗೆ ಉಂಟಾದ ಸಂತೋಷವು ಅಷ್ಟಿಷ್ಟೆಂದು ಹೇಳ ಕೂಡದ್ದಾಗಿತ್ತು, ಅವರು ತುಂಬ ಪ್ರೇಮದಿಂದ ಈತನನ್ನು ನೋಡುವ ಮಾರ್ಗ ವನ್ನು ಎದುರುನೋಡುತ್ತಿದ್ದರು. ಆ ಕಾಲದಲ್ಲಿ ಇಂಗ್ಲೆಂಡಿಗೆ ಹೋಗುವುದು ಈಗಿನಂತೆ ಸುಲಭಸಾಧ್ಯವಾಗಿರಲಿಲ್ಲ, ಆ ಕಾಲದಲ್ಲಿ ಆಫ್ರಿಕಾಖಂಡವನ್ನು ಬಳಸಿಕೊಂಡು ಯೂರೋಪಿಗೆ ಹೋಗಬೇಕಾಗಿದ್ದುದರಿಂದ ಇದಕ್ಕೆ ನಾಲ್ಕು ತಿಂಗಳಿಗಿಂತ ಹೆಚ್ಚಾದ ಕಾಲವು ಹಿಡಿಯುತ್ತಿತ್ತು, ಆದುದರಿಂದ ರಾಮಮೋಹನನು ನಾಲ್ಕು ತಿಂಗಳೂ ಇಪ್ಪತ್ತು ದಿನಗಳು ಹೊಗೆಯ ಹಡಗಿನಲ್ಲಿದ್ದು 1831 ನೇ ಏಪೈಲೆ' 3 ನೇ ದಿನ ಲಿವರ್‌ಪೂಲ್ ಪಟ್ಟಣವನ್ನು ಸೇರಿದನು. ಇಷ್ಟು ದೊಡ್ಡ ಪ್ರಯಾಣಕ್ಕಾಗಿ ಮೊಟ್ಟ ಮೊದಲು ಹಡಗಿನ ಮೇಲೆ ಕಾಲಿಟ್ಟ ಈ ಹಿಂದೂ ಬ್ರಾಹ್ಮಣನಿಗೆ ಸಮುದ್ರದಲ್ಲಿ ಪ್ರಯಾಣಮಾಡುತ್ತಿದ್ದಾಗ ಯಾವಯಾವ ಆಶ್ಚರ್ಯ ಗಳು ಕಾಣಬಂದವೋ ಅವುಗಳನ್ನೆಲ್ಲಾ ರಾಮಮೋಹನನ ಅವಸಾನವು ಇನ್ನೂ ಸ್ವಲ್ಪ ಅವ ಕಾಶವನ್ನು ಕೊಟ್ಟಿದ್ದರೆ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿತ್ತು. ತನ್ನ ದಿನಚರಿಯ (ಡೈರಿ) ವಹಿಯಲ್ಲಿ ಇಂತಹ ಅಸಂಭವಗಳನ್ನು ತಾನು ಬರೆದಿಟ್ಟಿರುವಂತೆ ರಾಮಮೋಹನನು ಒಂದು ಕಡೆಯಲ್ಲಿ ಬರೆದಿರುವನು. ಆದರೆ ಆತನ ಅಕಾಲಮರಣದಿಂದ ಈ ಚರಿತ್ರೆಯು ನಮಗೆ ಸಿಕ್ಕಲಿಲ್ಲ. ಮರಣಕಾಲದಲ್ಲಿ ಆತನ ಕಾಗದಗಳನ್ನು ಯಾರಾದರೂ ತಕ್ಕಷ್ಟು ಎಚ್ಚರದಿಂದ ಕಾಪಾಡದೆ ಹೋದುದರಿಂದ ಆ ಡೈರಿ ಪುಸ್ತು ಕವು ಸುಧಾ ಈಗ ನಮಗೆ ಸಿಕ್ಕ ದಂತೆ ನಶಿಸಿತು. ಆದರೂ ರಾಮಮೋಹನನು ಹಡಗಿನಲ್ಲಿದ್ದ ಕಾಲದ ಕೆಲವು ವಿಷಯಗಳು ಮಾತ್ರ ಬೇರೆ ಆಧಾರಗಳಿಂದ ತಿಳಿಯಬಂದಿವೆ, ಸಮುದ್ರದಲ್ಲಿ ಪ್ರಯಾಣಮಾಡುತ್ತಿದ್ದಾಗ ಆ ಹಡಗಿನಲ್ಲಿಯೇ ಇದ್ದ ಇನ್ನೊಬ್ಬ ಆಂಗ್ಲೀಯ ವಿದ್ವಾಂಸನು ಗಾಮಮೋಹನನಿಗೆ ಪರಿಚಿ ತನಾದನು, ಆದುದರಿಂದ ಆತನು ತನ್ನ ಯಾತ್ರಾ ಗ್ರಂಥದಲ್ಲಿ ರಾಮಮೋಹನನನ್ನು ಕುರಿತು