ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ ಲಿವರ್ಪೂಲಿನಲ್ಲಿ ರಾಮಮೋಹನನ ವಿಷಯದಲ್ಲಿ ನಡೆದ ಮತ್ಯಾದೆಗಳಲ್ಲಿ ವಿಲ್ಲಿಯಂ ರಾಸ್ಕೋ ಎಂಬವರು ಮೈತ್ರಿಯನ್ನು ಬೆಳೆಸಿದುದು ಮುಖ್ಯವಾದುದು. ಈತನು ರಸಾ ಯನ ಶಾಸ್ತ್ರದಲ್ಲಿ ಒಳ್ಳೆ ಪಂಡಿತನು, ಈಗಲೂ ಈತನ ಹೆಸರನ್ನು ಪ್ರತಿಯೊಬ್ಬ ರಸಾ ಯನ ಶಾಸ್ತ್ರ ಪಂಡಿತನೂ ತಿಳಿದೇ ಇರುವನು. ಆ ಕಾಲದಲ್ಲಿ ಈತನು ತನ್ನ ವಿದ್ಯಾತಿಶಯ ದಿಂದ ತುಂಬ ಹೆಸರುಗೊಂಡಿದ್ದನು, ನಮ್ಮ ಅದೃಷ್ಟ ವಿಶೇಷದಿಂದ ಇವನ ಜೀವನ ಚರಿತ್ರೆ ಯನ್ನು ಬರೆದವರು ಅದರಲ್ಲಿ ರಾಮಮೋಹನನ ಸಾಂಗತ್ಯವನ್ನು ಕುರಿತು ಸ್ವಲ್ಪಮಟ್ಟಿಗೆ ಬರೆದಿರುವರು. ರಾಮಮೋಹನನನ್ನು ಕುರಿತ ಕೆಲವು ವಿಷಯಗಳು ಅದರಿಂದಲೂ ತಿಳಿಯ ಬರುತ್ತವೆ, ಈತನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಜೀಸನಿ' ಹೇಳಿದ ನೀತಿಗಳನ್ನೆಲ್ಲ ಸೇರಿಸಿ ಒಂದು ಗ್ರಂಧವಾಗಿ ಬರೆಯಲಾರಂಭಿಸಿ, ಯಾವ ಕಾರಣದಿಂದಲೋ ಆದನ್ನು ಈ ರ್ತಿ ಮಾಡದೆ ನಿಲ್ಲಿಸಿದ್ದನು, ಆದರೆ ಆತನ ಕತ್ತೆಯಲ್ಲಿ ರಾಮಮೋಹನನಿಂದ ಪ್ರಚಾರ ಪಡಿಸಲ್ಪಟ್ಟ ಜೀಸಸ್ಸಿನ ನೀತಿಗಳು, ಎಂಬ ಗ್ರಂಧಗಳನ್ನೂ, ನ ತು ಕೆಲವು ಗ್ರಂಧಗಳನ್ನೂ ರಾಮಮೋಹನನು ಆರೋಪಿಗೆ ಸೇರುವುದಕ್ಕೆ ಒಂದೆರಡು ವರುಷಗಳ ಮುಂಚೆ ಓದಿ, ಆತನ ಅಸಾಧಾರಣ ಪಾಂಡಿತ್ಯಕ್ಕೆ ಆಶ್ವರ ಪಟ್ಟು ವಿಶೇಷ ನಾಗರಿಕತೆಯುಳ್ಳ, ರಾಜ್ಯಗಳಲ್ಲಿ ಸುದಾ ಇಂತಹ ವಿದ್ಯಾವಂತನಿರುವುದು ಅಪರೂಪವೆಂದು ತಿಳಿದನು. ಅಂದಿನಿಂದ ಅವನ ಮನಸ್ಸಿನಲ್ಲಿ ಈ ಸುಪ್ರಸಿದ್ಧನನ್ನು ಕಂಡು ಮಾತನಾಡಬೇಕೆಂಬ ಆಶೆಯು ಹೆಚ್ಚುತ್ತ ಬಂದಿತು, ಆದರೆ ವೃದ್ದಾಪ್ಯದ ದೆಸೆಯಿಂದ ತನಗೆ ಅಸಾಧ್ಯವಾಗಿದ್ದು ದರಿಂದ ಕೆಲವು ದಿನಗಳ ತರುವಾಯ ತನ್ನಿಂದ ರಚಿಸಲ್ಪಟ್ಟ ಗ್ರಂಧಗಳನ್ನೆಲ್ಲ ಕೊಟ್ಟು ಒಂದು ಪತ್ರವನ್ನು ಬರೆದು ತನ್ನ ಸ್ನೇಹಿತನ ಮೂಲಕ ಕಲ್ಕತ್ತೆಯಲ್ಲಿರುವ ರಾಮಮೋಹನನ ಬಳಿಗೆ ಕಳುಹಿ ಆ ಪತ್ರದ ಕೊನೆಯಲ್ಲಿ ಈ ವಾಕ್ಯಗಳನ್ನು ಬರೆದನು : ಕೆಲವು ದಿನಗಳಿಂದ ತಮ್ಮ ಪವಿತ್ರ ಪಾದವು ಪಶ್ಚಿ ಮರಾಜ್ಯಗಳಮೇಲೆ ಬಿಜಯಮಾಡಿಸುವುದೆಂಬ ಸುವಾರ್ತೆಯ ನ್ನು ಕೇಳುತ್ತಲಿದ್ದೇನೆ, ಆದರೆ ಆ ಸುದಿನವು ಇನ್ನೆಷ್ಟು ದಿನಗಳಿಗೆ ಬರಬಲ್ಲದೋ ? ಅದು ವರೆಗೆ ಬದುಕಿದ್ದು ಆ ಮಹದಾನಂದವನ್ನು ಅನುಭವಿಸುವ ಭಾಗ್ಯವು ನನಗೆ ಲಭಿಸದೆಂದು ತಿಳಿಯುವೆನು, ಈ ದುಃಖಭೂಯಿಷ್ಟವಾದ ಮುಪ್ಪು ನನ್ನನ್ನು ಬಲವಾದ ರೋಗಗಳಿಂದ ಪೀಡಿಸದೆ ಇದ್ದಲ್ಲಿ ನಾನು ಇದುವರೆಗೆ ಕಲ್ಕತ್ತೆಗೆ ಬಂದು ತಮ್ಮ ಸಂದರ್ಶನವನ್ನು ಎಷೋ ವೇಳೆ ತೆಗೆದುಕೊಳ್ಳುತ್ತಿದ್ದೆನು, ನೆರವೇರಲಾರದ 'ಹಲವು ಕೋರಿಕೆಗಳನ್ನು ಬಯಸಿದರೆ ಫಲವೇನು ? ಲೋಕೋಪಕಾರಾರ್ಧವಾಗಿ ಕಳುಹಿಸಿದ ಈ ಗ್ರಂಥಗಳು ಸೇರಿದಂತೆ ತಮಿ, ಂದ ಕೇಳಿ ಸಂತೋಷಗೊಂಡು ನನ್ನ ಪ್ರಕೃತದ ದೆಶೆಯನ್ನನುಸರಿಸಿ ಅಷ್ಟು ಮಾತ್ರದಿಂದಲೇ ತೃಪ್ತಿ ಹೊಂದಿರುವೆನು.” ಹೀಗೆ ರಾಮಮೋಹನನನ್ನು ನೋಡಬೇಕೆಂದು ತುಂಬಾ ಆಶಿಸುತ್ತಾ ಅತಿಶಯ ಮವನ್ನು ತೋರಿಸಿದ ವಿಲಿಯಂ ರಾಸ್ಮಿಯವರಿಗೆ ದಣ ಮಮೋಹನನು ಇಂಗ್ಲೆಂಡನ್ನು ಸೇರಿ, ಈ ದಿನ ನಮ್ಮ ಲಿವರ್‌ಪೂಲ್ ಪಟ್ಟಣದ ಸತ್ರದಲ್ಲಿ ಇಳಿದಿರುವನೆಂಬ ಸುದ್ದಿಯು ಕಿವಿಗೆ ಬಿತ್ತು.