ಪುಟ:ರಾಣಾ ರಾಜಾಸಿಂಹ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇ೬ ರಾಣಾ ರಾಜಸಿಂಹ [ಪ್ರಕರಣ / v ಮಾಡಿದಂತಾಗುವುದು ತಮ್ಮ ಕೀರ್ತಿಯು ದಿಗಂತವಾಗುವುದು ಸ್ವರ್ಗ ದಲ್ಲಿ ತಮಗೆ ಉತ್ತಮಗತಿಯು ದೊರೆಯುವುದು, ಮೊಗಲರೊಡನೆ ಒಪ್ಪಂದಮಾಡಿಕೊಂಡು ತಮ್ಮ ಸ್ವತಂತ್ರ ಯನ್ನು ಮಾರಿಕೊಳ್ಳಬೇಡಿರಿ ಮುಂದೆ ನಿಮ್ಮ ದೈವದಲ್ಲಿದ್ದಂತಾಗುವುದು ” ಎಂದು ಹೇಳಿದ್ದಕ್ಕೆ ವಿಕ್ರ ಮಸಿಂಹನು ಚಂಚಲ ನೀನಿನ್ನೂ ಚಿಕ್ಕವಳು ಜಗತ್ತಿನೊಳಗಿನ ಎಷ್ಟೋ ಸಂಗತಿಗಳನ್ನು ನೀನು ಇನ್ನೂ ಕಾಯಬೇಕಾಗಿದೆ ರಾಜಕರಣದಲ್ಲ ನಿನಗೇನು ತಿಳಿಯುತ್ತದೆ?” ಎಂದದ್ದಕ್ಕೆ ಹಾಗಾದರೆ ಅದಕ್ಕೆ ಉಪಾ ಯವೇನು? ” (6 ಮಗಳೆ, ಒಂದು ಉಪಾಯವುಂಟು ಅದರಂತ ಒಂದು ವೇಳೆ ವರ್ತಿಸಿದ್ದಾದರೆ ರಾಜವೈಭವವು ದಾನಿಯಾಗದೆ ಮರಳಿ ವೃದ್ಧಿ ಯಾಗುವುದು ಯೂರ ಪ್ರಾಣಹಾನಿಯೂ ಆಗುವುದಿಲ್ಲ ಮತ್ತು ಬಂದಿರುವ ಸಂಕಟವೂ ತಪ್ಪುವುದು ಆದರೆ ಅದಲ್ಲವೂ ನಿನ್ನನ್ನೇ ಅವ ಲಂಬಿಸಿರುವುದು ” ಎನಲು ಆತುರದಿಂದ ಚಂಚಲಕುಮಾರಿಯು “ಅಪ್ಪಾ ಎಲ್ಲವೂ ನನ್ನ ನ್ನು ಅವಲಂಬಿಸಿರುವದೆ ' ರಾಜವೈಭವದ ವೃದ್ದಿ ಯಾಗಿ ಪ್ರಾಣಹಾನಿಯಿಲ್ಲದೆ ಯಾವತ್ತು ಸಂಕಟವು ಕಳೆದುಹೋಗುವಂಧ ಈ ಪಾಯವ ನನ್ನನ್ನು ಅವಲಂಬಿಸಿದ್ದರೆ, ಅದು ಏನಿದ್ದರೂ ಇರಲೊಲ್ಲ ದೇಕೆ, ನಾನು ಪ್ರೀತಿಯಿಂದ ಒಪ್ಪಿಕೊಳ್ಳುತ್ತೇನೆ ಆದ್ದರಿಂದ ಮೊದಲು ನನಗೆ ಉಪಾಯವ್ಯಾವದೆಂಬುದನ್ನು ತಿಳಿಸಿರಿ ” ಎಂದು ಕೇಳಿದಳು. ಅದಕ್ಕೆ ೯ ಚಂಚಲೆ, ನನ್ನ ಅಪ್ಪಣೆಯನ್ನು ಪಾಲಿಸುವೆಯೂ ಇಲ್ಲವೊ ಎಂಬ ಸಂಶಯವು ವಿಶೇಷವಾಗಿರುತ್ತದೆ” ಎಂದು ಹೇಳಿದನು. ಇದನ್ನು ಕೇಳಿ ಚಂಚಲೆಯು “ಅಪ್ಪಾ, ತಮಗ ಸಂಶಯವೇಕೆ ಬರುತ್ತದೆ ? ಧರ್ಮವಿರುದ್ಧ ವಾದದ್ದೂ ಕ್ಷತ್ರಿಯಕುಲಕ್ಕೆ ಅಯೋಗ್ಯವಾದದ್ದೂ ಆದ ಉಪಾಯವಿದ್ದರೆ ಮಾತ್ರ ನಾನು ಮಾನ್ಯ ಮಾಡಲಾರೆನು.” “ಚಂಚಲೆ, ಈ ನಿನ್ನ ಮುಪ್ಪಿನತಂದೆಯ ಮಾತನ್ನು ಲಕ್ಷಕ್ಕೆ ತಂದು ನನ್ನ ಆಯುಷ್ಯದ ಕಡೆಗಾಲದ ಈ ಅಪ್ಪಣೆಯನ್ನು ಮಾನ್ಯ ಮಾಡು, ವೃದ್ದಾಪ್ಯದಲ್ಲಿ ರಾಜ ವೈಭವವು ನಾಶವಾಗಬಾರದೆಂದು ನಿನಗಿದನ್ನು ಹೇಳುತ್ತೇನೆ, ಈಗ.