ಪುಟ:ರಾಯಚೂರು ವಿಜಯ ಭಾಗ ೧ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯು ಪ್ರಕರಣ 42 ಹೇಳಬಲ್ಲೆಯಾ ? ೨೨ ರಾಮು-'ಪರೋಪಕಾರಬುದ್ಧಿಯಿಂದಲ್ಲ ; ಸ್ವಾರ್ಥ ಬುದ್ಧಿಯಿಂದಲೇ ತಿಮ್ಮ- ಏನು 1 ಏನು ! ಸೋಪಕಾರಬುದ್ಧಿಯಿಂದಲೇ ? ಆಕೆಯು ವಿಜಯಸಿಂಹನಲ್ಲಿ ಅನುರಕ್ತಳಾಗಿರುವಳೇನು ? ೨೨ ರಾಮು-“ ಅದಕ್ಕೆ ಸಂದೇಹವೇನು ? ಮುಕ್ತಾಂಬೆಯು ವಿಜಯ ನಿಂಹನನ್ನು ಮದುವೆಯಾಗಬೇಕಂದಿರುವಳು.) - ತಿನ್ನ- ಅವರವರಿಗೆ ಪ್ರೇಮಾನುಬಂಧವು ಯಾವಾಗ ಉಂಟಾ ಯಿತು ? ) ರಾಮು-* ಉದಯಗಿರಿಯಲ್ಲಿ ಅವರವರಿಗೆ ಪ್ರೇಮಾಂಕುರವ ಯಿತು. ವಿಜಯಸಿಂಹನು ಸ್ಪದೇಶವನ್ನು ಬಿಟ್ಟು ಇಲ್ಲಿಗೆ ಬಂದುದು ಇದೇ ಕಾರಣದಿಂದಲೇ, ) ತಿಮ್ಮ - ಆನೆಗೊಂದಿಗೆ ವಿಜಯಸಿಂಹನು ಹೊರಟುದಕ್ಕೆ ಉದ್ದೇ ಕವು ಇದೇಯೋ ? ನಾನು ಅನ್ಯಥಾ ತಿಳಿದುಕೊಂಡಿದ್ದೆನು.” ರಾಮ-“ ತಾವು ತಿಳಿದುಕೊಂಡಿದ್ದುದು ಸರಿಯಲ್ಲ.” ತಿಮ್ಮ-ಇರಬಹುದು. ಆದಿನ ನನ್ನ ಮೇಲೆ ಬಿದ್ದ ದುರಾತ್ಮರಲ್ಲಿ ಒಬ್ಬನ ಕಂಠಧ್ವನಿಯು ಪ್ರಹರೇಶ್ವರನ ಧ್ವನಿಯಂತಿದ್ದಿತು. ನನಗೆ ಆಗಿನಿಂದ ಊ ಪಹರೇಶರನ ವಿಷಯದಲ್ಲಿ ಸಂಶಯವು ಬೇರೂರಿಕೊಂಡಿರುವುದು. ಪ್ರಹರೇಶ್ವರನನ್ನು ನೋಡಿಕೊಂಡು ಬರುತ್ತೇನೆಂದು ವಿಜಯಸಿಂಹನು ಹೇಳದಕೂಡಲೆ ಸಜಾತೀಯನಾದ ಪಹರೇಶ ರನೊಡನೆ ವಿಜಯಸಿಂಹನ ಪವರನಗಳನ್ನು ಕಂಡುಹಿಡಿದರೆ, ಆ ಇಬ್ಬರ ಆಂತರವು ತಿಳಿದುಹೋಗು ವುದೆಂದೇ ಭಾವಿಸಿ ಅವನ್ನು ತಿಳಿದುಕೊಂಡುಬರುವುದಕ್ಕಾಗಿ ನಿನ್ನನ್ನು ಆನೆಗೊಂದಿಗೆ ಕಳುಹಿಸಿದೆನು, ವಿಜಯಸಿಂಹನು ವಿಶ್ವಾಸಾರ್ಹನೆಂದು ಈಗ ತಿಳಿಯಿತು, ಮುಕ್ಕಾಂಬೆಯ ಕ್ಷಸನೀಯಳಂದು ತೋರುತ್ತದೆ, ಆದರೆ ಪ್ರಹರೇಕ್ಷರನು ನಿರ್ದೋಷಿಯೆಂದು ಭಾವಿಸಲು ನನಗೆ ಸಾಕಾದಷ್ಟು ಸಾಧನಗಳು ದೊರೆಯಲಿಲ್ಲ.” ರಾಮ- ಒಬ್ಬರ ಧ್ವ ನಿಯಂತ ಮತ್ತೊಬ್ಬರದು ಇರಕೂಡದೇ ? ಕಂಠಧ್ವನಿಯ ಸಾಮ್ಯದಿಂದಲೇ ತಾವು ಹೀಗೆ ಭಾವಿಸಲಾಗುವುದೆಂದು ನನಗೆ 0 |