ಪುಟ:ರಾಯಚೂರು ವಿಜಯ ಭಾಗ ೧ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓwwwmme ಮಿ ಹನ್ನೊಂದನೆಯ ಪ್ರಕರಣ hon ಮಾಲತಿ-ಹೌದು, ನಿನ್ನ ಪುಷ್ಪಮಾಲಾರಚನೆಯನ್ನು ಕಂಡು ನಮ್ಮ ಒಡತಿಯವರು ಮೆಚ್ಚಿ ರುವರು, ಈಗ ಮಹಾರಾಜರವರು ನಮ್ಮ ಯಜ ಮಾನಿಯವರೊಡನೆ ಚದುರಂಗವನ್ನಾಡುತ್ತಿರುವರು. ಈ ಸಮಯದಲ್ಲಿ ಹೂವಿನದಂಡೆಯನ್ನು ಅನಂಗಸೇನೆಯವರಿಗೆ ಕೊಟ್ಟರೆ ಮಹಾರಾಜರವರೂ ಅದನ್ನು ನೋಡಿ ಸಂತೋಷಪಡುವರು, ಆದುದರಿಂದ ಕೂಡಲೆ ನನ್ನನ್ನು ಕಳುಹಿಸು 22 - ವಸಂತ-“ ಎಂದಿಗಿಂತ ಹೆಚ್ಚಾಗಿ ಈ ದಿನ ಕಷ್ಟಪಟ್ಟು, ಈ ಹೂ ಮಾಲೆಯನ್ನು ಕಟ್ಟಿದುದಕ್ಕೆ ಸಾರ್ಥಕವಾಯಿತು, ಇದನ್ನು ತೆಗೆದುಕೊಂಡು ಹೋಗಿ ಕೊಟ್ಟು ಚಕ್ರವರ್ತಿಯವರು ಸಂತೋಷಪಟ್ಟು ಕೊಳ್ಳುವಂತೆ ಮಾಡು ” ಎಂದು ಹೇಳಿ ಹೂಮಾಲೆಯನ್ನು ಕೊಟ್ಟನು. ಮಾಲತಿಯು ಹೂಮಾಲೆಯನ್ನು ಎಚ್ಚರಿಕೆಯಿಂದ ತಂದು ಅನಂಗ ಸೇನೆಯ ಕೂಟಡಿಯನ್ನು ಪ್ರವೇಶಿಸುತ್ತಿರುವಾಗ ಮಹಾರಾಜರಿಗೂ ಅನಂಗ ಸೇನೆಗೂ ಈ ಮೇರೆಗೆ ಸಂಭಾಷಣೆ ನಡೆಯುತ್ತಿದ್ದಿತು:- ಅನಂಗ-“ ದೇವಾ ! ರಾಜನು ಸಿಕ್ಕಿಹೋದನು.೨೨ ಕೃ, ದೇ-“ ಹೌದು, ಅನಂಗಸೇನೆಯು ಇದಿರುಪಕ್ಷದಲ್ಲಿರುವಾಗ ಹೀಗಾಗುವುದರಲ್ಲಿ ವಿಶೇಷವೇನು? ೨೨ ಅನಂಗ-ತಮಗೆ ಅನಂಗಸೇನೆಯಮೇಲೆ ದಯೆಯಿರುವುದರಿಂದ ಲೇ ರಾಜನು ಸಿಕ್ಕುವಂತ ದಯೆಮಾಡಿದಿರಿ, ಹಾಗಲ್ಲದಿದ್ದರೆ, ಚತುರಂಗ ಬಲವನ್ನು ಚಮತ್ಕಾರದಿಂದ ನಡೆಯಿಸಿಕೊಂಡು ಹೋಗಿ ರಣರಂಗದಲ್ಲಿ ಅನೇಕ ರಾಜರನ್ನು ಬಂಧಿಸುವ ತಾವು ಇದಿರುಪಕ್ಷದಲ್ಲಿರುವಾಗ ನಿಮ್ಮ ಈ ನಿಜೀವದ ಗಾಜನಿಗೆ ಬರುತ್ತಿದ್ದ ಭಯವೇನು ? 99 ಕೃ, ದೇ- ಸಜೀವಿಗಳಾದ ಸೈನಿಕರ ಸಹಾಯದಿಂದ ಪರರಾಜ ರನ್ನು ಬಂಧಿರುವುದು ಸಹಜವೇ ಆದರೂ, ನಿರ್ಜಿವಿಯಾದ ಬಲವನ್ನು ನಡೆ ಯಿಸಿಕೊಂಡು ನಿರ್ಜಿವಿಯಾದ ರಾಜನನ್ನು ಕಟ್ಟಿಹಾಕಿದುದು ಮಾತ್ರವೇ ಅಲ್ಲದೆ ಸಜೇವಿಯಾದ ರಾಜನನ್ನೂ ಬಂಧಿಸಿಬಿಟ್ಟಿರುವೆ, ಅನಂಗ ತಮ್ಮ ಸರಸವಚನಗಳಿಂದಲೇ ನನ್ನನ್ನು ಮುಗ್ಧಳಾಗಿ ಮಾಡಿ ಆಟವನ್ನು ಮುಗಿಸಿಬಿಡುವಿರಿ. ರಾಜನನ್ನು ಬಿಡಿಸಿಕೊಳ್ಳುವ ಅಲೋ ಚನೆಯನ್ನು ಮಾಡೋಣಾಗಲಿ, ”